Advertisement

ತಹಶೀಲ್ದಾರ್‌ ಹತ್ಯೆ ಖಂಡಿಸಿ ಪ್ರತಿಭಟನೆ

06:45 AM Jul 11, 2020 | Lakshmi GovindaRaj |

ದೇವನಹಳ್ಳಿ: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ತಹಶೀಲ್ದಾರ್‌ ಬಿ.ಕೆ.ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ಹಾಗೂ ಸರ್ಕಾರಿ ನೌಕರರಿಗೆ ಸೂಕ್ತ ರಕ್ಷಣೆಗೆ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ತಾಲೂಕು  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಅಜಿತ್‌ ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ  ಸಂಘದ ಅಧ್ಯಕ್ಷ ಎಚ್‌.ಬಾಲಕೃಷ್ಣ ಮಾತನಾಡಿ, ತಹಶೀಲ್ದಾರ್‌ ಚಂದ್ರಮೌಳೇಶ್ವರ ಹತ್ಯೆಯನ್ನು ಪ್ರತಿ ಅಧಿಕಾರಿಗಳು ಖಂಡಿಸಬೇಕು. ಜಂಟಿ ಅಳತೆ ಕಾರ್ಯದಲ್ಲಿ ನಿರತರಾಗಿದ್ದ  ಸಮಯದಲ್ಲಿ ವೆಂಕಟ ಛಲಪತಿ ಎಂಬುವವರು ಪೋಲೀಸರ ಸಮ್ಮುಖದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ, ಹತ್ಯೆ ಮಾಡಿರುವುದು ಘೋರ ಕೃತ್ಯವಾಗಿದೆ.

ಸರ್ಕಾರ ಇನ್ನು ಮುಂದೆ ತಹಶೀಲ್ದಾರ್‌ಗಳಿಗೆ ಪೊಲೀಸ್‌  ಗನ್‌ಮ್ಯಾನ್‌ ನೀಡಿ ರಕ್ಷಣೆ ನೀಡಬೇಕು. ಸರ್ಕಾರಿ ಅಧಿ ಕಾರಿಗಳು ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಇಂತಹ ಹಲವು ದುರ್ಘ‌ಟನೆಗಳನ್ನು ಸಂಭವಿಸುತ್ತಿವೆ. ಆದರೂ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಿಲ್ಲ. ಹೀಆಗಿ ಅಪರಾಧ ಕೃತ್ಯಗಳು ರಾಜ್ಯಾದ್ಯಂತ ಹೆಚ್ಚು  ತ್ತಲೇ ಇವೆ. ಸರ್ಕಾರಿ ಅಧಿಕಾರಿಗಳು, ನೌಕರರು ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಹಾಗೂ ಅವರ ಕುಟುಂಬದವರಿಗೆ ಸರ್ಕಾರಿ  ಕೆಲಸ ನೀಡಲು ಕೋರಲಾಗಿದೆ.

ತಪ್ಪಿತಸ್ಥರನ್ನು ಬಂಧಿಸಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿಸಬೇಕು. ಇನ್ನೂ ಮುಂದೆ ಇಂತಹ ಕೃತ್ಯ ಎಸಗುವವರ ವಿರುದಟಛಿ ಕಠಿಣ ಕಾನೂನುಗಳನ್ನು ಜಾರಿಗೊಳಿಸಿ, ಸರ್ಕಾರಿ ನೌಕರರಿಗೆ ಸೂಕ್ತ ರಕ್ಷಣೆ  ನೀಡಬೇಕೆಂದು ಒತ್ತಾಯಿಸಿದರು. ಸರ್ಕಾರಿ ನೌಕರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಆದರ್ಶ್‌, ಖಜಾಂಚಿ ಉಮಾ ಶಂಕರ್‌, ರಾಜ್ಯ ಪರಿಷತ್‌ ಸದಸ್ಯ ಕೆ.ಎಂ.ರಾಜು ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next