Advertisement

ಕರಾವಳಿ ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ: ರಘುಪತಿ ಭಟ್‌

04:15 PM Jul 08, 2018 | Team Udayavani |

ಉಡುಪಿ: ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗೆ ಯಾವುದೇ ಯೋಜನೆ/ಬೇಡಿಕೆಗಳನ್ನು ಈಡೇರಿಸದೆ ಮುಖ್ಯಮಂತ್ರಿಗಳು ಅನ್ಯಾಯವೆಸಗಿದ್ದಾರೆ. ಜು.12ರ ಬಜೆಟ್‌ಗೆ ಉತ್ತರ ನೀಡುವುದಕ್ಕೆ ಮೊದಲು ಕರಾವಳಿ ಜಿಲ್ಲೆಗಳ ಪ್ರಮುಖ ಬೇಡಿಕೆಗಳನ್ನು ಸೇರಿಸಬೇಕು. ಇಲ್ಲದಿದ್ದರೆ ಬೃಹತ್‌ ಪ್ರತಿಭಟನೆ ನಡೆಸಲಾಗುವುದೆಂದು   ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ರಘುಪತಿ ಭಟ್‌ ಎಚ್ಚರಿಸಿದರು.

Advertisement

ಮೀನುಗಾರರಿಗೆ ಈಗಾಗಲೇ ನೀಡುತ್ತಿದ್ದ 1.5 ಲಕ್ಷ ಕಿ.ಲೀ. ಡೀಸೆಲ್‌ ಸಬ್ಸಿಡಿಯನ್ನು 2.5 ಕಿ.ಲೀ.ಗೆ ಏರಿಸುವುದು, ಬೋಟ್‌ಗೆ ದಿನಪ್ರಂತಿ ನೀಡುವ 300 ಲೀ. ಡೀಸೆಲನ್ನು 500 ಲೀ.ಗೆ ಏರಿಸುವುದು, ಮೀನುಗಾರರ ಖಾತೆಗೆ ಹಾಕುತ್ತಿದ್ದ ತೆರಿಗೆ ವಿನಾಯಿತಿಯನ್ನು ನೇರವಾಗಿ ಡೆಲಿವರಿ ಪಾಯಿಂಟ್‌ನಲ್ಲಿಯೇ ಮೀನುಗಾರರಿಗೆ ನೀಡುವುದು, ಮೀನುಗಾರ ಮಹಿಳೆಯರ ಸಾಲ ಮನ್ನಾ ಮಾಡುವುದು ಇತ್ಯಾದಿ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಒತ್ತಾಯಿಸಿದರು. 

ತೀರ್ಥಹಳ್ಳಿಯಿಂದ ಮಲ್ಪೆ ವರೆಗಿನ ರಾ.ಹೆ. ಮೇಲ್ದರ್ಜೆಗೆ ಕೇಂದ್ರ ಸರಕಾರ ಅನುಮತಿ ನೀಡಿದ್ದು, ಪರ್ಕಳದಿಂದ ಕರಾವಳಿ ಜಂಕ್ಷನ್‌ ವರೆಗೆ 100 ಕೋ. ರೂ. ಬಿಡುಗಡೆಗೊಳಿಸಿದೆ. ಕರಾವಳಿ ಜಂಕ್ಷನ್‌ನಿಂದ ಮಲ್ಪೆಯ  ವರೆಗಿನ ಕಾಮಗಾರಿಯನ್ನು ಕೇಂದ್ರ ಸರಕಾರದ ಅನುದಾನದಿಂದ ಇನ್ನು 1 ವರ್ಷದೊಳಗೆ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆಂದು ಭರವಸೆ ನೀಡಿದರು.

ಪ್ರಮೋದ್‌ಗೆ ಪ್ರತ್ಯುತ್ತರ 
ಮಾಜಿ ಸಚಿವ ಪ್ರಮೋದ್‌ ಅವರ ಟೀಕೆಗೆ ಉತ್ತರಿಸಿದ ಶಾಸಕರು ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಅವರು ಈವರೆಗೂ ಮೀನುಗಾರರನ್ನು ಸಿಎಂ ಬಳಿ ಒಂದು ದಿನವೂ ಕರೆದೊಯ್ಯಲಿಲ್ಲ. ಆದರೆ ಆ ಕೆಲಸ ನಮ್ಮಿಂದಾಗಿದೆ. ಬೀದಿ ದೀಪ ಸಮಸ್ಯೆ 2-3 ವರ್ಷಗಳಿಂದಲೂ ಇದೆ. ಪ್ರಮೋದ್‌ ಶಾಸಕ/ಸಚಿವರಾಗಿದ್ದಾಗಲೂ ಎಂಜಿನಿಯರ್‌ ಬಗ್ಗೆ ಆರೋಪವಿತ್ತು. ಆದರೆ ಈಗ ಎಂಜಿನಿಯರ್‌ ಬಗ್ಗೆ ಪ್ರಮೋದರು ಆರೋಪಿಸುತ್ತಿದ್ದಾರೆಂದು ಟೀಕಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಬಿಜೆಪಿ ಮುಖಂಡರಾದ ಯಶ್‌ಪಾಲ್‌ ಎ. ಸುವರ್ಣ, ಪ್ರಭಾಕರ ಪೂಜಾರಿ, ನವೀನ್‌ ಶೆಟ್ಟಿ ಕುತ್ಯಾರು, ಪ್ರವೀಣ್‌ ಕುಮಾರ್‌ ಶೆಟ್ಟಿ ಕಪ್ಪೆಟ್ಟು  ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next