Advertisement

ಪೌರತ್ವ ಕಾಯ್ದೆ ರದ್ದತಿಗೆ ಪ್ರತಿಭಟನೆ

02:39 PM Jan 28, 2020 | Team Udayavani |

ಹುಕ್ಕೇರಿ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ವಿರೋಧಿಸಿ ನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನಾ ಸಮಾವೇಶ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ.

Advertisement

ಇಲ್ಲಿನ ಹಳೇ ಪಪಂ ಎದುರು ನಡೆದ ಸಮಾವೇಶದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ಕೇಂದ್ರ ಸರ್ಕಾರ ಸಿಎಎ-ಎನ್‌ಆರ್‌ಸಿ ಜಾರಿಗೆ ತರುವ ಮೂಲಕ ಮುಸ್ಲಿಂ ಸಮುದಾಯವನ್ನು ಅಭದ್ರಗೊಳಿಸುವ ಹುನ್ನಾರ ನಡೆಸಿದೆ. ಧರ್ಮ-ಜಾತಿ ಆಧಾರದಲ್ಲಿ ದೇಶ ಒಡೆಯುವ ಸಂಚು ರೂಪಿಸಲಾಗುತ್ತಿದೆ. ಧರ್ಮಾಧಾರಿತ ಪೌರತ್ವದ ಈ ಹುನ್ನಾರ ತೀವ್ರವಾಗಿ ಖಂಡಿಸಲಾಗುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತೀಯ ಸಂವಿಧಾನವು ಎಲ್ಲ ಧರ್ಮದವರನ್ನು ಸಮಾನವಾಗಿ ಕಾಣುವಂತೆ ಹೇಳಿದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಹಿಂದೂ ರಾಷ್ಟ್ರವನ್ನಾಗಿ ಮಾಡಿ ಇತರೆ ಧರ್ಮದವರನ್ನು ಹೊರಹಾಕುವ ಹುನ್ನಾರ ನಡೆಸಿದೆ. ಈ ಮೂಲಕ ಹಿಂದೂಗಳನ್ನು ಪ್ರಥಮ ನಾಗರಿಕರನ್ನಾಗಿ ಮಾಡಿ, ಇತರೆ ಸಮುದಾಯಗಳನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ಮಾಡುವ ಸಂಚು ರೂಪಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ, ಜಮ್ಮು ಕಾಶ್ಮೀರಕ್ಕೆ ನೀಡಿದ್ದ 370 ವಿಶೇಷ ಸ್ಥಾನಮಾನ ಹಿಂತೆಗೆತ, ಪುಲ್ವಾಮಾ ದಾಳಿ, ನೋಟ್‌ ಬ್ಯಾನ್‌ ಸೇರಿದಂತೆ ಇತರ ಕಾಯ್ದೆಗಳನ್ನು ಜಾರಿಗೆ ತಂದು ಜನರ ಗಮನ ಬೇರೆಡೆ ಸೆಳೆದು ಅಭಿವೃದ್ಧಿ ಮರೆತಿದ್ದು, ಅನೇಕ ಜನ ವಿರೋಧಿ  ನೀತಿ ಜಾರಿಗೊಳಿಸಲಾಗುತ್ತಿದೆ ಎಂದು ದೂರಿದರು.

ದೇಶದಲ್ಲಿ ಬಡತನ, ನಿರುದ್ಯೋಗ, ಆಹಾರ ಕೊರತೆ, ಆರ್ಥಿಕ ಮುಗ್ಗಟ್ಟು, ಜಿಡಿಪಿ ಕುಸಿದಿದೆ. ಇದರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಕ್ರಮ ಕೈಗೊಳ್ಳುತ್ತಿಲ್ಲ. ದೇಶದಲ್ಲಿ ಅರಾಜಕತೆ, ಕೋಮುಗಲಭೆ ಹೆಚ್ಚುತ್ತಿವೆ. ಸಣ್ಣ-ಮಧ್ಯಮ ಕೈಗಾರಿಕೆಗಳು ಮುಚ್ಚಿ ಲಕ್ಷಾಂತರ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಇದಕ್ಕೆ ಕೇಂದ್ರದ ಬಿಜೆಪಿ ಸರ್ಕಾರವೇ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದರು.

Advertisement

ನಂತರ ಪ್ರತಿಭಟನಾಕಾರರು ತಹಶೀಲ್ದಾರ್‌ ಅಶೋಕ ಗುರಾಣಿ ಅವರಿಗೆ ಮನವಿ ಸಲ್ಲಿಸಿದರು. ಅಹಿತಕರ ಘಟನೆ ನಡೆಯದಂತೆ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ, ಪಿಎಸ್‌ಐ ಶಿವಾನಂದ ಗುಡಗನಟ್ಟಿ ಭದ್ರತೆ ಒದಗಿಸಿದ್ದರು.

ಈ ಸಂದರ್ಭದಲ್ಲಿ ಎಸ್‌.ಕೆ. ಮಕಾನದಾರ, ಸಲೀಮ್‌ ಕಳಾವಂತ, ಇರ್ಷಾದ ಮೊಕಾಶಿ, ಕೆಂಪಣ್ಣ ಶಿರಹಟ್ಟಿ, ರಮೇಶ ಹುಂಜಿ, ನಜೀರ ಮೋಮಿನದಾದಾ, ಇಲಿಯಾಸ್‌ ಅತ್ತಾರ, ಮಹ್ಮದಅಲಿ ನದಾಫ್‌, ಯಾಸೀನ್‌ ಬಾಗವಾನ, ಡಿ.ಆರ್‌. ಖಾಜಿ, ಬಾಬಾಮಿಯಾ ಖಾಜಿ, ಮೆಹಬೂಬ ಅತ್ತಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next