ಪಿರಿಯಾಪಟ್ಟಣ: ಬ್ರಹ್ಮಶ್ರೀ ನಾರಾಯಣ ಗುರು, ರಾಷ್ಟ್ರಕವಿ ರವೀಂದ್ರನಾಥ ಟಾಗೋರ್ ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರಿಂದ ಗೌರವಿಸಲ್ಪಟ್ಟವರ ಸ್ತಬ್ಧ ಚಿತ್ರವನ್ನು ಗಣರಾಜ್ಯೋತ್ಸವಕ್ಕೆ ಕೇಂದ್ರ ಸರ್ಕಾರ ತಿರಸ್ಕರಿಸಿರುವುದನ್ನು ಖಂಡಿಸಿ ಕರ್ನಾಟಕ ದಲಿತ ಚಳುವಳಿ ನವನಿರ್ಮಾಣ ವೇದಿಕೆ ವತಿಯಿಂದ ತಹಶೀಲ್ದಾರ್ ಚಂದ್ರಮೌಳಿ ರವರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಆಡಳಿತ ಭವನದ ಎದುರು ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ನಾರಾಯಣಗುರುಗಳ ಸ್ತಬ್ಧ ಚಿತ್ರದ ಬಗ್ಗೆ ತೆಗೆದುಕೊಂಡಿರುವ ನಿರ್ಧಾರವನ್ನು ವೇದಿಕೆ ಕಾರ್ಯಕರ್ತರು ಖಂಡಿಸಿ ತರಾಟೆಗೆ ತೆಗೆದುಕೊಂಡರು.
ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ದೇಶದ ಸಾಂಸ್ಕೃತಿಕ ಧಾರ್ಮಿಕ ಐತಿಹಾಸಿಕ ಅಭಿವೃದ್ಧಿ ಮತ್ತು ಮಿಲಿಟರಿ ಸಾಮರ್ಥ್ಯವನ್ನು ಪ್ರತಿನಿಧಿಸುವ ಸ್ತಬ್ದ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ.
ಹಾಗೆಯೇ ರಾಜ್ಯಗಳು ತಮ್ಮ ನೆಲದ ಹೆಮ್ಮೆಯನ್ನು ಪ್ರತಿಬಿಂಬಿಸುವ ಸ್ತಬ್ಧ ಚಿತ್ರವನ್ನು ಕಳುಹಿಸುವ ಪರಿಪಾಠವಿದೆ. ಅದರಂತೆ ಕೇರಳ ರಾಜ್ಯ ಕಳುಹಿಸಿದ್ದ ತನ್ನ ನೆಲದ ಹೆಮ್ಮೆಯನ್ನು ಪ್ರತಿಬಿಂಬಿಸುವ ಕ್ರಾಂತಿಕಾರಿ ಸಮಾಜ ಸುಧಾರಕ ನಾರಾಯಣಗುರುಗಳ ಶಬ್ದ ಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸುವ ಮೂಲಕ ಅಪಚಾರವೆಸಗಲಾಗಿದೆ ಎಂದು ದೂರಿದರು.
Related Articles
ಭಾರತದ ಚಾರಿತ್ರಿಕ ಮಹತ್ವದ ಕ್ರಾಂತಿಕಾರಿ ಸಮಾಜ ಸುಧಾರಕರಿಗೆ ಅಪಮಾನಿಸಿದೆ. ಜೊತೆಗೆ ಶೋಷಣೆ ಮಹಿಳಾ ಅಸಮಾನತೆ ಜಾತಿ ಪ್ರತಿಪಾದನೆಯನ್ನು ಪರವಾಗಿ ಕೇಂದ್ರ ಸರ್ಕಾರ ಉತ್ತೇಜಿಸಿ ದಂತಾಗಿದೆ ಎಂದು ವೇದಿಕೆ ಕಾರ್ಯಕರ್ತರು ಆರೋಪಿಸಿದರು.
ನಾರಾಯಣಗುರುಗಳು ಶೋಷಣೆ, ಜಾತೀಯತೆ, ಅಸಮಾನತೆ ಹಾಗೂ ನಿಮ್ನ ವರ್ಗದವರ ಅಪಮಾನಿಸುವುದರ ವಿರುದ್ಧ ಸಿಡಿದು ನಿಂತು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಸಾರಿದ್ದಲ್ಲದೆ ಸಮಾಜದ ಸಮಾನತೆಗಾಗಿ ಬದುಕಿನುದ್ದಕ್ಕೂ ಶ್ರಮಿಸಿದವರು ಎಂದು ತಿಳಿಸಿದರು.
ತಿರಸ್ಕರಿಸಿರುವ ಕೇಂದ್ರ ಸರ್ಕಾರ ದೇಶದ ಮುಂದೆ ಕ್ಷಮೆಯಾಚಿಸಿ ನಾರಾಯಣಗುರುಗಳ ಸ್ತಬ್ಧ ಚಿತ್ರಕ್ಕೆ ಪ್ರಾಧಾನ್ಯತೆ ಕೊಟ್ಟು ಅವಕಾಶ ನೀಡಬೇಕೆಂದು ಎಲ್ಲಾ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ದಂತೆ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ರಾಜ್ಯಪಾಲರಿಗೆ ತಹಶೀಲ್ದಾರ್ ಕೆ ಚಂದ್ರಮೌಳಿ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆ ಮುಖಂಡರಾದ ಸೀಗೂರು ವಿಜಯಕುಮಾರ್, ಎಚ್.ಡಿ ರಮೇಶ್, ಪಿ.ಪಿ.ಮಹದೇವ್, ಅಕ್ಷಯ್ ಕಾಂತರಾಜ್, ಜೆ. ಮೋಹನ್, ಎನ್ ಮುರುಳೀಧರ್, ಪಿ.ಟಿ.ನಾರಾಯಣ, ಪಿ.ಎಂ. ಗಿರೀಶ್, ಪಿ.ವಿ.ಕೆಂಪಣ್ಣ, ಪಿ.ಟಿ. ಕುಮಾರ್, ಅಬ್ದುಲ್ ವಾಜಿದ್, ನಂದೀಶ್, ಕುಮಾರ್, ಪ್ರಕಾಶ್, ಸ್ವಾಮಿ, ಶಿವು, ರಾಶಿ, ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.