Advertisement

ಡಿಕೆಶಿ ಮನೆ ಮೇಲಿನ ದಾಳಿ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ: ಬಂಧನ

11:55 AM Oct 07, 2020 | sudhir |

ಉಡುಪಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಮನೆ ಹಾಗೂ ಕಚೇರಿ ಮೇಲೆ ನಡೆದಿರುವ ಸಿಬಿಐ ದಾಳಿಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌, ಯುವ ಕಾಂಗ್ರೆಸ್‌, ಮಹಿಳಾ ಕಾಂಗ್ರೆಸ್‌, ಡಿಕೆಶಿ ಅಭಿಮಾನಿ ಸಂಘ, ಎನ್‌ಎಸ್‌ಯುಐ ಘಟಕದ ಸಹಯೋಗದಲ್ಲಿ ಮಂಗಳವಾರ ನಗರದ ಅಜ್ಜರಕಾಡಿನಲ್ಲಿ ರಸ್ತೆ ತಡೆಯೊಡ್ಡಿ ಪ್ರತಿಭಟಿಸಲಾಯಿತು. ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದರು.

Advertisement

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಹರೀಶ್‌ ಕಿಣಿ ಮಾತನಾಡಿ, ಡಿಕೆಶಿ ಅವರನ್ನು ರಾಜಕೀಯವಾಗಿ ದಮನಿಸಲು ಬಿಜೆಪಿ ನಾಯಕರು ಸಿಬಿಐ ಮತ್ತು ಸಿಐಡಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ ವಿಪಕ್ಷಗಳ ಧ್ವನಿ ಅಡಗಿಸುವ ಷಡ್ಯಂತ್ರವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ಯಾವುದೇ ದಬ್ಟಾಳಿಕೆ, ಬೆದರಿಕೆಗೆ ಕಾಂಗ್ರೆಸ್‌ ಹೆದರುವುದಿಲ್ಲ ಎಂದರು.

ಉಪ ಚುನಾವಣೆಯಲ್ಲಿ ಸೋಲಿನ ಭೀತಿ ಹಾಗೂ ತಮ್ಮ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಂಡು ಜನರ ಗಮನ ಬೇರೆಡೆಗೆ ಸೆಳೆಯಲು ಕೇಂದ್ರ ಮತ್ತು ರಾಜ್ಯ ಸರಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿವೆ. ಬಿಜೆಪಿ ಕುಮ್ಮಕ್ಕು, ನಿರ್ದೇಶನದಂತೆ ಸಿಬಿಐ ದಾಳಿ ನಡೆದಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದರು.

ಆತ್ಮಸ್ಥೈರ್ಯ ಕಸಿವ ಯತ್ನ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌ ಮಾತನಾಡಿ, ಡಿಕೆಶಿ ಅವರ ಮೇಲೆ ಜಾರಿ ನಿರ್ದೇಶನಾಲಯ ದಿಂದ ದಾಳಿ ನಡೆಸಿದಾಗಲೇ ಏನೂ ಸಿಕ್ಕಿರಲಿಲ್ಲ. ಇದೀಗ ಉಪಚುನಾವಣೆಗಳಲ್ಲಿ ಸಕ್ರಿಯರಾಗಿರುವ ಅವರ ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡುವ ಹುನ್ನಾರದಿಂದ ಸಿಬಿಐ ದಾಳಿ ನಡೆಸಿದೆ ಎಂದರು.

ಇದನ್ನೂ ಓದಿ:ಅಧಿಕಾರಿ ಜತೆ ಡಿವಿಎಸ್‌ ಚರ್ಚೆ ಫ‌ಲ : ಕಬಡ್ಡಿ ಆಟಗಾರ ಪ್ರತಾಪ್‌ಗೆ ಅವಕಾಶ ನೀಡಲು ಸಮ್ಮತಿ

Advertisement

ಕೆಪಿಸಿಸಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ ಮಾತನಾಡಿ, ಕಾಂಗ್ರೆಸ್‌ ವಿರುದ್ಧ ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಟ್ಟು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಮುಖಂಡರಾದ ಪ್ರಖ್ಯಾತ್‌ ಶೆಟ್ಟಿ, ನವೀನ ಚಂದ್ರ ಶೆಟ್ಟಿ ಕಾಪು, ಕುಶಲ ಶೆಟ್ಟಿ, ಬಿ. ನರಸಿಂಹ ಮೂರ್ತಿ, ಭಾಸ್ಕರ್‌ ರಾವ್‌ ಕಿದಿಯೂರು, ಉದ್ಯಾವರ ನಾಗೇಶ್‌, ಯತೀಶ್‌ ಕರ್ಕೆರ, ಕೀರ್ತಿ ಶೆಟ್ಟಿ, ನವೀನ್‌ ಚಂದ್ರ ಸುವರ್ಣ, ಡಾ| ಸುನಿತಾ ಶೆಟ್ಟಿ, ಚಂದ್ರಿಕಾ ಶೆಟ್ಟಿ, ರಮೇಶ್‌ ಕಾಂಚನ್‌, ಗಿರೀಶ್‌ ಕುಮಾರ್‌, ವಿಜಯ ಪೂಜಾರಿ, ಶಬ್ಬಿರ್‌ ಅಹ್ಮದ್‌, ಸೌರಭ ಬಲ್ಲಾಳ್‌,ರೋಶನಿ ಒಲಿವೆರಾ, ಜ್ಯೋತಿ ಹೆಬ್ಟಾರ್‌, ಗೀತಾ ವಾಗ್ಲೆ, ಹಮ್ಮದ್‌, ಲೂಯಿಸ್‌ ಲೋಬೋ, ಕೃಷ್ಣ ಮೂರ್ತಿ ಆಚಾರ್ಯ, ಶಶಿಧರ್‌ ಶೆಟ್ಟಿ ಎಲ್ಲೂರು, ಇಸ್ಮಾಯಿಲ್‌ ಅತ್ರಾಡಿ, ನವೀನ ಬಂಗೇರ, ಗಣೇಶ್‌ ನೇರ್ಗಿ, ಜನಾರ್ದನ ಭಂಡಾರ್ಕರ್‌, ಅಬ್ದುಲ್‌ ಅಜೀಜ್‌ ಹೆಜಮಾಡಿ, ಹರೀಶ್‌ ಶೆಟ್ಟಿ, ಪ್ರಭಾಕರ್‌ ಆಚಾರಿ, ಅಬ್ದುಲ್‌ ರೆಹಮಾನ್‌, ಆರ್‌.ಕೆ. ರಮೇಶ್‌, ಸುಕುಮಾರ್‌, ಮಹಾಬಲ ಕುಂದರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next