Advertisement

ಸಿಎಎ ವಿರೋಧಿಸಿ 110 ಕಿ.ಮೀ ಪಾದಯಾತ್ರೆ

12:21 PM Feb 23, 2020 | Suhan S |

ಬಾಗಲಕೋಟೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನಗಣಿ ಹುಮ್ನಾಬಾದ ನೇತೃತ್ವದಲ್ಲಿ ನೂರಾರು ಜನರು, ಇಳಕಲ್ಲದಿಂದ ವಿಜಯಪುರಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.

Advertisement

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎನ್‌ಆರ್‌ಸಿ ಕಾಯ್ದೆ, ಕೇವಲ ಮುಸ್ಲಿಮರಿಗೆ ಮಾತ್ರವಲ್ಲ, ಇಡೀ ದೇಶದ ನಾಗರಿಕರಿಗೆ ತೊಂದರೆಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಉಭಯ ನಾಯಕರು ಶನಿವಾರ ಬೆಳಗ್ಗೆ ಇಳಕಲ್ಲದಿಂದ ವಿಜಯಪುರದತ್ತ ಪಾದಯಾತ್ರೆ ಆರಂಭಿಸಿದರು. ಪಾದಯಾತ್ರೆ ಆರಂಭಕ್ಕೂ ಮುನ್ನ ನಡೆದ ಸಭೆಯಲ್ಲಿ ಹುನಗುಂದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ವಿರುದ್ಧ ಹರಿಹಾಯ್ದರಲ್ಲದೇ ನಾನು ಹಿಂದೂ ಅಲ್ಲ, ನಾನೊಬ್ಬ ವೀರಶೈವ ಲಿಂಗಾಯತ ಧರ್ಮದವನು ಎಂದು ಹೇಳಿದರು.

ಇಳಕಲ್ಲದಿಂದ ಆರಂಭಗೊಂಡ ಪಾದಯಾತ್ರೆ, ಹುನಗುಂದ, ಕೂಡಲಸಂಗಮ ಕ್ರಾಸ್‌, ನಿಡಗುಂದಿ ಮಾರ್ಗವಾಗಿ ಫೆ. 24ರಂದು ವಿಜಯಪುರ ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next