Advertisement

7 ತಿಂಗಳಿಂದ ವೇತನವಿಲ್ಲ : ಭೆಲ್‌ ನೌಕರರಿಂದ ಸತ್ಯಾಗ್ರಹ

09:11 PM Jul 23, 2019 | sudhir |

ಕಾಸರಗೋಡು: ಕಳೆದ 7 ತಿಂಗಳಿಂದ ವೇತನ ತಡೆ ಹಿಡಿದ ಭೆಲ್‌ ಕಂಪೆನಿಯ ನೌಕರರು ಕಂಪೆನಿಯ ಎದುರು ಸತ್ಯಾಗ್ರಹದಲ್ಲಿ ತೊಡಗಿದ್ದಾರೆ.

Advertisement

ರಾಜ್ಯ ಸರಕಾರ ವಹಿಸಿಕೊಳ್ಳಲು ತೀರ್ಮಾನಿಸಿದ ಕಂಪೆನಿ ಪ್ರಸ್ತುತ ಕೇಂದ್ರದ ಸಾರ್ವಜನಿಕ ವಲಯದ ಭಾರತ್‌ ಹೈವಿ ಇಲಕ್ಟ್ರಿಕಲ್ಸ್‌ ಲಿಮಿಟೆಡ್‌(ಭೆಲ್‌)ನ ಸಬ್ಸಿಡಿಯರಿ ಯೂನಿಟ್‌ ಆಗಿದೆ. ಕಂಪೆನಿಯನ್ನು ರಾಜ್ಯ ಸರಕಾರಕ್ಕೆ ಹಸ್ತಾಂತರಿಸುವ ತನಕ ನೌಕರರಿಗೆ ವೇತನ ನೀಡುವ ಜವಾಬ್ದಾರಿ ಭೆಲ್‌ಗೆ ಸೇರಿದ್ದು, ಆದರೆ ವೇತನ ನೀಡುವುದಿಲ್ಲ ಅಲ್ಲದೆ ಉತ್ಪಾದನೆಯನ್ನು ನಡೆಸಲು ಅಗತ್ಯದ ಅನುದಾನವನ್ನು ನೀಡುತ್ತಿಲ್ಲ. ಕಂಪೆನಿಯನ್ನು ಸ್ವಾಧೀನಪಡಿಸಲು ರಾಜ್ಯ ಸರಕಾರ ತೀರ್ಮಾನಿಸಿ ಎರಡು ವರ್ಷಗಳೇ ಸಂದರೂ ಇನ್ನೂ ಪ್ರಕ್ರಿಯೆ ಪೂರ್ತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ನೌಕರರು ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ನೌಕರರು ಹೇಳಿದ್ದಾರೆ.

ಎಸ್‌.ಟಿ.ಯು. ನೇತಾರರಾದ ಕೆ.ಪಿ.ಮುಹಮ್ಮದ್‌ ಅಶ್ರಫ್‌, ಟಿ.ಅಬ್ದುಲ್‌ ಮುನೀರ್‌, ಸಿ.ಕೆ.ವೇಲಾಯುಧನ್‌ ಸತ್ಯಾಗ್ರಹದಲ್ಲಿ ನಿರತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next