Advertisement

ಬ್ಯಾಂಕ್‌ ವಿಲೀನ ವಿರುದ್ಧ ಪ್ರತಿಭಟನೆ

01:05 PM Sep 02, 2019 | Team Udayavani |

ಕಾರವಾರ: ಸಿಂಡಿಕೇಟ್ ಬ್ಯಾಂಕ್‌, ಕೆನರಾ ಬ್ಯಾಂಕ್‌ ಒಳಗೊಂಡು 10 ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲಿನೀಕರಣ ಮಾಡಿದ ಕೇಂದ್ರ ಬಿಜೆಪಿ ಸರಕಾರದ ನಿರ್ಧಾರ ವಿರೋಧಿಸಿ ಬ್ಯಾಂಕ್‌ ಅಧಿಕಾರಿಗಳು ಹಾಗೂ ನೌಕರರು ಸಿಂಡಿಕೇಟ್ ಬ್ಯಾಂಕ್‌ ಪ್ರಾದೇಶಿಕ ಕಾರ್ಯಾಲಯದ ಎದುರು ಪ್ರತಿಭಟನೆ ಮಾಡಿದರು.

Advertisement

ಸಿಂಡಿಕೇಟ್ ಬ್ಯಾಂಕ್‌ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಮಾಂಜ್ರೇಕರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಈ ಡಿಸೆಂಬರ್‌ 30 ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಒಂದು ಕರಾಳ ದಿನವಾಗಲಿದೆ ಎಂದರು. ಕೇಂದ್ರ ಸರ್ಕಾರ ಉಳ್ಳವರ ಪರ ನೀತಿ ಅನುಸರಿಸುತ್ತಿದೆ. ಮಧ್ಯಮ ವರ್ಗದವರು ಬದುಕುವುದೇ ಕಷ್ಟದ ಸ್ಥಿತಿಯನ್ನು ಸರ್ಕಾರಗಳು ಸೃಷ್ಟಿಸುತ್ತಿವೆ. ಕೇಂದ್ರದ ಆರ್ಥಿಕ ನೀತಿ ಜನಪರವಾಗಿಲ್ಲ. ಬ್ಯಾಂಕ್‌ ಉದ್ಯೋಗಿಗಳನ್ನು ಸಹ ರಕ್ಷಿಸುತ್ತಿಲ್ಲ ಎಂದರು.

ಬ್ಯಾಂಕ್‌ಗಳ ವಿಲಿನೀಕರಣದಿಂದ ಎಲ್ಲ ಬ್ಯಾಂಕ್‌ ಅಧಿಕಾರಿಗಳು ಹಾಗೂ ನೌಕರರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು ನೌಕರರನ್ನು ಕಡ್ಡಾಯ ನಿವೃತ್ತಿ ಮಾಡಲಾಗುವುದು ಎಂದು ವಿಷಾದ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಿಂಡಿಕೇಟ್ ಬ್ಯಾಂಕ್‌ ನಿವೃತ್ತ ಅಧಿಕಾರಿಗಳ ಪದಾಧಿಕಾರಿ ಎಂ.ಪಿ. ಕಾಮತ್‌, ಲೀಡ್‌ ಬ್ಯಾಂಕ್‌ ಮುಖ್ಯ ಪ್ರಬಂಧಕ ಪೀರಸಾಬ ಪಿಂಜರ್‌, ಮೊಹಮ್ಮದ ನಿಝಾಮ್‌, ಕಾರ್ಪೋರೇಶನ್‌ ಬ್ಯಾಂಕ್‌ನ ವಿನೋದ ಬಾಂದೇಕರ, ಸಿಂಡಿಕೇಟ್ ಬ್ಯಾಂಕ್‌ನ ಅಧಿಕಾರಿಗಳು ಹಾಗೂ ನೌಕರರು ಸಕ್ರೀಯವಾಗಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next