Advertisement
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಮಾಜಿ ಸೈನಿಕ ಹಾಗೂ ಪ್ರಗತಿಪರ ರೈತ ಡಿ.ವಿ. ಜೋಶಿ, ಕಳೆದ ಆರು ತಿಂಗಳಿಂದ ಬ್ಯಾಂಕಿನಲ್ಲಿ ವ್ಯವಸ್ಥಾಪಕರಿಲ್ಲದೇ ರೈತರು, ವ್ಯಾಪಾರಸ್ಥರು, ಸ್ತ್ರೀ ಶಕ್ತಿ ಸಂಘ-ಸಂಸ್ಥೆಗಳಿಗೆ ಸಾಲ ದೊರೆಯುತ್ತಿಲ್ಲ. ಈಗಾಗಲೇ ಸಾಲ ಮರು ಪಾವತಿ ಮಾಡಿದವರಿಗೂ ಮರು ಸಾಲ ನೀಡುತ್ತಿಲ್ಲ. ಬ್ಯಾಂಕಿನ ಎಟಿಎಂನಲ್ಲಿ ಸದಾ ಹಣ ಇರುವುದಿಲ್ಲ. ತಮ್ಮ ಖಾತೆಯಲ್ಲಿರುವ ಹಣವನ್ನು ಹಿಂಪಡೆಯಲು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕು. 50 ಸಾವಿರಕ್ಕಿಂತ ಮುಂಚೆ ಹಣ ಬೇಕಿದ್ದರೆ, ಒಂದು ದಿನ ಮುಂಚಿತವಾಗಿ ತಿಳಿಸಬೇಕು ಎಂಬ ನಿಯಮಗಳಿಂದ ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು. ಬ್ಯಾಂಕ್ ಪಾಸ್‌ಬುಕ್ ಎಂಟ್ರಿಗೆ ಸರ್ವರ್ ಸಮಸ್ಯೆ, ಪ್ರಿಂಟರ್ ರಿಪೇರಿ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಮುಂದಿಡುತ್ತಿದ್ದಾರೆ. ನಿಗದಿತ ಸಮಯದೊಳಗೆ ಸಾಲ ಮರುಪಾವತಿ ಮಾಡದಿದಲ್ಲಿ ಶೇ. 4ರಷ್ಟು ಇದ್ದ ಬಡ್ಡಿ ದರ ಶೇ. 12ರಷ್ಟು ಪಾವತಿ ಮಾಡುವ ಪರಿಸ್ಥಿತಿ ಬಂದಿದೆ ಎಂದು ದೂರಿದರು.
Advertisement
ಬ್ಯಾಂಕ್ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ
02:55 PM Jun 19, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.