ಧಾರವಾಡ: ಜಿಲ್ಲೆಯಲ್ಲಿ ಖಾಸಗಿ ಕ್ಲಿನಿಕ್‌ಗಳ ಮೇಲೆ ದಾಳಿ ವೇಳೆ ಕೆಪಿಎಂಇಎ ಕಾಯ್ದೆಯನ್ವಯ ಪದವಿ ಪಡೆದ ವೈದ್ಯರ
(ಆಯುರ್ವೇದ, ಹೋಮಿಯೋಪತಿ, ಯುನಾನಿ) ಕ್ಲಿನಿಕ್ ಬಂದ್ ಮಾಡಿರುವುದು ಖಂಡಿಸಿ ಕರ್ನಾಟಕ ಆಯುಷ್ ಫೆಡರೇಶನ್ ವತಿಯಿಂದ ನಗರದ ಡಿಸಿ ಕಚೇರಿ ಎದುರು ಬುಧವಾರ ನಡೆಸಲಾಯಿತು.
ರಾಜ್ಯದಲ್ಲಿ 62 ಸಾವಿರಕ್ಕೂ ಹೆಚ್ಚು ಆಯುಷ್ಯ ವೈದ್ಯರು ಮಾನ್ಯತೆ ಪಡೆದ ವಿವಿಗಳಿಂದ ಪದವಿ ಪಡೆದಿದ್ದಾರೆ. ಕೆಪಿಎಂಇ ನೋಂದಾಯಿತ ಆಯುಷ್ಯ ವೈದ್ಯರು ಪ್ರಾಥಮಿಕ ಆರೋಗ್ಯ ರಕ್ಷಣೆಯೇ ಧ್ಯಯದೊಂದಿಗೆ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ವೈದ್ಯ ಪದ್ಧತಿ ಜೊತೆಗೆ ಮಿಶ್ರ ವೈದ್ಯ ಪದ್ಧತಿ ಕೆಲಸದ ಮೂಲಕ ಚಿಕಿತ್ಸೆ ನೀಡಿ ರೋಗಿಗಳಿಗೆ ನೆರವು ನೀಡಿದ್ದಾರೆ.
ಕೆಎಯುಪಿ ಬೋರ್ಡ್ ಕಾಯ್ದೆನ್ವಯ ಆಯುಷ್ಯ ವೈದ್ಯರು ಚಿಕಿತ್ಸೆ ನೀಡಬಹುದು. ಇದಕ್ಕೆ ದೇಶದ ಸರ್ವೋತ್ಛ ನ್ಯಾಯಾಲಯದ ಆದೇಶವಿದೆ. ಸರ್ಕಾರ ಒಂದ ಕಡೆಗೆ ವೈದ್ಯರಿಗೆ ಮೌಖೀಕ ಪರವಾನಗಿ ನೀಡಿ, ಅಲೋಪತಿ ಔಷ ಧಿ ಬಳಸಲು ಹೇಳಿ ಇದೀಗ ನಿರ್ಬಂಧ ಹೇರಿರುವುದು ಖಂಡನೀಯ ಎಂದು ದೂರಲಾಯಿತು. ಖಾಸಗಿ ವೈದ್ಯರ ನಿಯಂತ್ರಣಕ್ಕೆ ನಡೆದ ದಾಳಿ ಸ್ವಾಗತಾರ್ಹ.ಆದರೆ, ಕೆಪಿಎಂಇಎ ನೋಂದಾಯಿತ ಆಯುಷ್ಯ ವೈದ್ಯರಿಗೆ ಯಾವುದೇ ನೋಟಿಸ್ ನೀಡದೇ, ವಿಚಾರಣೆಯೂ ನಡೆಸದೇ ಕ್ಲಿನಿಕ್ ಬಂದ್ ಮಾಡಿರುವುದು ಆಕ್ಷೇಪಾರ್ಹ. ಪುನಃ ಕ್ಲಿನಿಕ್ ಆರಂಭಿಸಲು ಡಿಸಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.