Advertisement

ಶಾಸಕಿ ಅನಿತಾ ಕುಮಾರಸ್ವಾಮಿ ಕಾರಿಗೆ ಅಡ್ಡ ಹಾಕಿ ಪ್ರತಿಭಟನೆ

04:16 PM Dec 11, 2019 | keerthan |

ರಾಮನಗರ: ಹಲವಾರು ವರ್ಷಗಳಿಂದ ಗ್ಯಾಸ್ ಗೋಡೌನ್ ಸ್ಥಳಾಂತರಕ್ಕೆ ನೀಡಿದ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ವಿವೇಕಾನಂದ ನಗರ ನಿವಾಸಿ ರಾಜು ಅವರು ಶಾಸಕಿ ಅನಿತಾ ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದು ಶಾಸಕಿ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋದ ಘಟನೆ ನಡೆದಿದೆ.

Advertisement

ರಾಜು ಮತ್ತು ಸಾರ್ವಜನಿಕರು ಗ್ಯಾಸ್ ಗೋಡೌನ್ ಸ್ಥಳಾಂತರಕ್ಕೆ ತಕ್ಷಣ ಆದೇಶ ನೀಡಲು ಒತ್ತಾಯಿಸಿ ಅನಿತಾ ಕುಮಾರಸ್ವಾಮಿ ಕಾರಿಗೆ ಅಡ್ಡ ಕುಳಿತರು.

ಕಾರಿಗೆ ಅಡ್ಡ ಕುಳಿತವರನ್ನು ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್ ತೆರವಿಗೆ ಮುಂದಾದಾಗ ಸ್ಥಳದಲ್ಲಿ ಕೋಲಾಹಲದ ವಾತಾವರಣ ಸೃಷ್ಠಿಯಾಯಿತು.

ನಂತರ ಪೊಲೀಸರಿಂದ ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸಿದರು.
ಸಾರ್ವಜಿನಕರಯಾವುದೇ ಮನವಿಗೆ ಪ್ರತಿಕ್ರಿಯಿಸದೆ ಹೊರಟ ಶಾಸಕರ ವಿರುದ್ದ ಜನರು ಆಕ್ರೋಶ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next