ಭಾರತೀನಗರ: ನರಗುಂದ, ನವಿಲುಗುಂದ ಗ್ರಾಮಗಳಲ್ಲಿ ರೈತರ ಬಂಡಾಯ ನಡೆದು 40 ವರ್ಷವಾಗಿದೆ. ರೈತ ಹುತಾತ್ಮರ ದಿನದ ಪ್ರಯುಕ್ತ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡುವಂತೆ ಒತ್ತಾಯಿಸಿ, ರೈತ ಸಂಘ ಕಾರ್ಯಕರ್ತರು ನಾಡಕಚೇರಿ ಬಳಿ ಪ್ರತಿಭಟಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬೋರಪುರ ಶಂಕರೇಗೌಡ ಮಾತನಾಡಿ, ಸರ್ಕಾರದ ಕಾಯ್ದೆ ತಿದ್ದುಪಡಿ ಮಾಡಿದ್ದು, ಕೃಷಿ ಭೂಮಿಯನ್ನು ಉದ್ಯಮಿಗಳು, ಬಹುರಾಷ್ಟ್ರೀಯ ಕಂಪನಿಗಳು ಸುಲಭವಾಗಿ ಖರೀದಿಸಲು ಅನುಕೂಲ ಮಾಡಿದ್ದಾರೆ. ಇದರಿಂದ ಆಹಾರ ಭದ್ರತೆ, ಕೃಷಿ ಕ್ಷೇತ್ರದ ಮೇಲೆ ಅಪಾಯವಿದೆ. ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿಯಿಂದ ಬಡ ಹಾಗೂ ಸಣ್ಣ ರೈತರಿಗೆ ತೊಂದರೆಯಾಗಿದೆ ಎಂದರು.
ಮೈಷುಗರ್ ಉಳಿಸಿ: ಮೈಷುಗರ್ ವ್ಯಾಪ್ತಿಯ ಕಬ್ಬನ್ನು ನುರಿಸಲು ಸರ್ಕಾರ ಬೇರೆ ಜಿಲ್ಲೆ ಕಾರ್ಖಾನೆಗೆ ಸರಬರಾಜು ಮಾಡಲು ಕ್ರಮ ವಹಿಸಬೇಕು. ಕಾರ್ಖಾನೆಯನ್ನು ಸರ್ಕಾರಿ ಕ್ಷೇತ್ರದಲ್ಲಿ ಉಳಿಸಿ ಶೀಘ್ರವಾಗಿ ಆರಂಭಿಸಬೇಕು. ಜಿಲ್ಲೆಯಲ್ಲಿ ಬೆಳೆಗಳ ರಕ್ಷಣೆಗೆ ನಾಲೆಯಲ್ಲಿ ನೀರು ಹರಿಸಬೇಕು ಎಂದು ಆಗ್ರಹಿಸಿ, ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಮುಖಂಡರಾದ ರಾಮಲಿಂಗೇಗೌಡ,
ಮಠದದೊಡ್ಡಿ ಕೆಂಪೇಗೌಡ, ಯಡಗನಹಳ್ಳಿ ರಾಮೇಗೌಡ, ಡಿ.ಎನ್.ಲಿಂಗೇಗೌಡ, ನಗರಕರೆ ಶ್ರೀಧರ್, ಮಡೇನಹಳ್ಳಿ ಮಾದೇಗೌಡ, ಕುರಿಕೆಂಪನದೊಡ್ಡಿ ಚಿಕ್ಕಮರಿ, ನಟರಾಜು, ಶಿವಣ್ಣ, ದೊಡ್ಡರಸಿನಕೆರೆ ಡಿ.ಬಿ.ರಮೇಶ್, ಶಂಕರ್, ಮೆಣಸಗೆರೆ ತಮ್ಮಣ್ಣ, ಬಿ.ಪುಟ್ಟಸ್ವಾಮಿ ಇದ್ದರು.