Advertisement

Bengaluru South; ರಾಮನಗರ ಹೆಸರು ಬದಲಾಯಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಮುತಾಲಿಕ್ ಕಿಡಿ

01:42 PM Jul 27, 2024 | Team Udayavani |

ಗದಗ: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ (Bengaluru South) ಎಂದು ಬದಲಾವಣೆ ಮಾಡಿರುವುದು ಖಂಡನೀಯ. ರಾಮನಗರ (Ramanagara) ಹೆಸರು ಇದ್ದರೆ ನಿಮಗೆ ತೊಂದರೆ ಏನು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಹರಿಹಾಯ್ದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನಗರ ಜಿಲ್ಲೆ ಬದಲಾವಣೆ ಮಾಡುವುದಾದರೆ ಬೇರೆ ದಾರಿಗಳು, ಹೆಸರುಗಳಿವೆ. ರಾಮನಗರವನ್ನು ಬೆಂಗಳೂರು ಭಾಗ ಎಂದು ಕರೆಬಹುದಲ್ಲವೇ. ರಾಮನ ಹೆಸರಿನ ಜಿಲ್ಲೆ ಬದಲಾಯಿಸುತ್ತಿರುವುದು ಅತ್ಯಂತ ಖಂಡನೀಯ ಎಂದರು.

ಕಾಂಗ್ರೆಸ್ ನವರಿಗೆ, ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರಿಗೆ ಹೇಳಲು ಬಯಸುತ್ತೆನೆ. ಸ್ವಾತಂತ್ರ್ಯ ಬಂದು 75 ವರ್ಷವಾಯಿತು.  ಬದಲಾವಣೆ ಮಾಡುವುದಾದರೆ ವಿಕ್ಟೋರಿಯಾ ಆಸ್ಪತ್ರೆ, ಚರ್ಚ್ ರೋಡ್, ಕಬ್ಬನ್‌ ಪಾರ್ಕ್, ಕರ್ಜನ್ ರೋಡ್ ಸೇರಿದಂತೆ 32 ಕಡೆ ಹೆಸರು ಬದಲಾವಣೆ ಮಾಡಿ. ಕನ್ನಡ ಅಭಿಮಾನ, ದೇಶಾಭಿಮಾನ, ಸ್ವಾಭಿಮಾನ ಇದ್ದರೆ 32 ಕಡೆಯ ಹೆಸರು ಬದಲಾಯಿಸಿ. ಡಿಕೆ ಶಿವಕುಮಾರ ಇರುವುದನ್ನು ಡಿಕೆ ಶರೀಫ್ ಮಾಡಿಕೊಳ್ಳಿ. ರಾಮನಗರಕ್ಕೆ ತನ್ನದೆ ಆದ ಇತಿಹಾಸ ಇದೆ. ಅದ್ಯಾಕೆ ಬದಲಾವಣೆ ಮಾಡುತ್ತೀರಿ. ರಾಮನಗರ ಹೆಸರು ಪರಿವರ್ತನೆ‌ ಮಾಡಿದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ನಾಯಿ ಮಾಂಸ ಪತ್ತೆ ಪ್ರಕರಣದ ಬಗ್ಗೆ ಮಾತನಾಡಿ, ಬೆಂಗಳೂರು ರೈಲ್ವೆ ಸ್ಟೇಷನ್ ನಲ್ಲಿ ಅಬ್ದುಲ್ ರಜಾಕ್ ಮಾಲಿಕತ್ವದ ಬಾಕ್ಸ್ ನಲ್ಲಿ ನಾಯಿ ಮಾಂಸ ಪತ್ತೆಯಾಗಿದೆ. ರಾಜಸ್ಥಾನ ಜೈಪುರದಿಂದ ಬೆಂಗಳೂರಿಗೆ ಕಳೆದ 15 ವರ್ಷದಿಂದ ಸರಬರಾಜಾಗುತ್ತಿದೆ. ಕಳೆದ 15 ವರ್ಷದಿಂದ ನಾಯಿ ಮಾಂಸ ತಿನ್ನಿಸುತ್ತಿದ್ದಾನೆ. ಬೆಂಗಳೂರು 3, 5, 7 ಸ್ಟಾರ್ ಹೊಟೆಲ್ ಗೆ ಸಪ್ಲೈ ಮಾಡುತ್ತಾ ಬಂದಿದ್ದಾರೆ. ಆಹಾರ ಇಲಾಖೆ, ಬಿಬಿಎಂಪಿ ಅಧಿಕಾರಿಗಳು ಕತ್ತೆ ಕಾಯುತ್ತಿದ್ದಾರಾ? ಆಹಾರ ಇಲಾಖೆ, ಬಿಬಿಎಂ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲಾಲ್ ಮಾಂಸ ತಿನ್ನಬೇಡಿ ಎಂದರೂ ತಿನ್ನುತ್ತಾರೆ. ಅಬ್ದುಲ್ ನೀಚ, ಕೋಮುವಾದಿ, ದೇಶ ದ್ರೋಹಿ, ಸಂವಿಧಾನ ವಿರೋಧಿ, ಔರಂಗ್ ಜೇಬ್ ನನ್ನ ಹೀರೋ ಎನ್ನುತ್ತಾನೆ. ಅಂತವನಿಗೆ ಶಿಕ್ಷೆಯಾಗಬೇಕು. ಜೈಪುರದಿಂದ ಬೆಂಗಳೂರಿಗೆ ಬರಬೇಕಾದರೆ ಎಷ್ಟು ಗಂಟೆ ಬೇಕಾಗುತ್ತೆ, ಅದರ ಗುಣಮಟ್ಟ ಏನಾಗುತ್ತೆ? ಅಬ್ದುಲ್ ರಜಾಕ್ ಬೆನ್ನಿಗೆ ನಿಂತವರು ಜಮೀರ್ ಅಹ್ಮದ್. ಜಮೀರ್ ಇದಕ್ಕೆ ಉತ್ತರ ನೀಡಬೇಕು. ನಾಯಿ, ನರಿ, ದನದ ಮಾಂಸ ನೀಡುತ್ತಿರುವುದು ನಿಲ್ಲಿಸಬೇಕು. ಅಬ್ದಲ್ ರಜಾಕ್ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಆ‌ ಬಾಕ್ಸ್ ಗೆ ಮೀನಿನ ಮಾಂಸ ಎಂದು ಬರೆದಿದ್ದಾರೆ, ಇದೆಂತಾ ಮೋಸ. ಈ ಬಗ್ಗೆ ಅಬ್ದುಲ್ ರಜಾಕ್ ಬಂಧಿಸಿ, ತನಿಖೆ ಆಗಬೇಕು ಎಂದು ಮುತಾಲಿಕ್ ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next