ಜಮ್ಮು-ಕಾಶ್ಮೀರದಲ್ಲಿ ಹೊರಗಿನವರು ಸ್ಥಿರ ಆಸ್ತಿ ಖರೀದಿಸುವುದಕ್ಕೆ ನಿರ್ಬಂಧ ಹೇರುವಂಥ 35-ಎ ವಿಧಿಯ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಸೋಮವಾರ ಸುಪ್ರೀಂನಲ್ಲಿ ನಡೆಯ ಲಿದೆ. ಈ ವಿಧಿಯು ಭಾರತದ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಸುತ್ತದೆ, ದೇಶದ ಯಾವುದೇ ಭಾಗದಲ್ಲಾದರೂ ವಾಸಿಸುವ ಮತ್ತು ಆಸ್ತಿ ಖರೀದಿಸುವ ಹಕ್ಕನ್ನು ಕಿತ್ತುಕೊಂಡಂತಾಗು ತ್ತದೆ ಎಂದು ಎನ್‌ಜಿಒವೊಂದು ಅರ್ಜಿಯಲ್ಲಿ ಉಲ್ಲೇಖೀಸಿತ್ತು.
Advertisement
ಏತನ್ಮಧ್ಯೆ, ಈ ವಿಧಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲೇನಾದರೂ ವ್ಯತಿರಿಕ್ತ ತೀರ್ಪು ಬಂದರೆ, ಕಣಿವೆ ರಾಜ್ಯದ ಪೊಲೀಸರೇ ಬಂಡೇಳುವ ಹಾಗೂ ಭಾರೀ ಹಿಂಸಾಚಾರ ಸಂಭವಿಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ.
ರವಿವಾರ, ಸೋಮವಾರ ಬಂದ್ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆ ಯೂ ಸ್ಥಗಿತಗೊಂಡಿದೆ. ರವಿವಾರ ಜಮ್ಮುವಿನಿಂದ ಯಾತ್ರಿಗಳ ತಂಡ ಹೊರ ಡಬೇಕಿತ್ತು. ಆದರೆ, ಮಂಗಳ ವಾರದ ನಂತರ ತೆರಳುವಂತೆ ಸೂಚನೆ ನೀಡಲಾ ಗಿದೆ. ಇದೇ ವೇಳೆ, ರಾಜ್ಯಾ ದ್ಯಂತ ರೈಲು ಸಂಚಾರವನ್ನೂ ರದ್ದು ಮಾಡಲಾಗಿದೆ.