Advertisement

ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ  

06:53 PM Feb 05, 2021 | Team Udayavani |

ಬಾಗಲಕೋಟೆ: ಕೇಂದ್ರ ಸರ್ಕಾರದ ಪ್ರತಿಕೃತಿಯನ್ನು ಎತ್ತಿನ ಬಂಡಿಯಲ್ಲಿರಿಸಿ ಮೂರು ಕಿ.ಮೀವರೆಗೆ ಮೆರವಣಿಗೆ ನಡೆಸುವ ಮೂಲಕ ತೈಲ ಬೆಲೆ ಏರಿಕೆ ವಿರೋಧಿಸಿ ಕರವೇ (ನಾರಾಯಣಗೌಡ ಬಣ) ಕಾರ್ಯಕರ್ತರು ಗುರುವಾರ ವಿನೂತನ ಪ್ರತಿಭಟನೆ ನಡೆಸಿದರು.

Advertisement

ನಗರದ ಬಸವೇಶ್ವರ ವೃತ್ತದಿಂದ ಕೇಂದ್ರ ಸರ್ಕಾರದ ಪ್ರತಿಕೃತಿಯನ್ನು ಎತ್ತಿನ ಬಂಡಿಯಲ್ಲಿರಿಸಿ, ಅಲ್ಲಿಂದ ನವನಗರದ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಂತರ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಅಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ಕೊರೊನಾ ವೇಳೆ ಲಾಕ್‌ಡೌನ್‌ ಹೇರಿದ್ದು, ಈ ನಿಯಮ ಪಾಲನೆಯಿಂದ ದೇಶದ ವ್ಯಾಪಾರಸ್ಥರು, ದಿನಗೂಲಿ ಕೆಲಸಗಾರರು ಕೆಲಸವಿಲ್ಲದೇ ಆರ್ಥಿಕ ಸಂಕಷ್ಟದಿಂದ ಬಳಲಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ಇಂಧನ ದರಗಳ ಮೇಲೆ ಆತಿಯಾದ ತೆರಿಗೆ, ಅಬಕಾರಿ ಸುಂಕ ಹೆಚ್ಚಿಸುವ ಮೂಲಕ ದೇಶದ  ಜನರ ಜೀವನಕ್ಕೆ ಕೊಡಲಿಪೆಟ್ಟು ನೀಡಿದ್ದಾರೆ. ಇದು ಸರ್ಕಾರದ ಮೇಲೆ ನಂಬಿಕೆ ಇಟ್ಟು, ಬಹುಮತ ನೀಡಿದ ಜನತೆಗೆ ಮಾಡಿದ  ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರಿಗೆ ವ್ಯವಸ್ಥೆ, ಪ್ರತಿಯೊಬ್ಬರ ಜೀವಾಳ ಇದ್ದಂತೆ, ಎಲ್ಲ ಚಟುವಟಿಕೆಗಳ ನರನಾಡಿ ಇದ್ದಂತೆ. ಇಂಧನದ ಅವಲಂಬನೆಯಿಂದ ನಡೆಯಬಲ್ಲ ಅವಶ್ಯಕ ಸಾರಿಗೆ ವ್ಯವಸ್ಥೆಗೆ ನಿರಂತರ ಬೆಲೆ ಏರಿಕೆಯಿಂದ ಕತ್ತು ಹಿಸುಕಿದಂತಾಗಿದೆ. ಅಂತಾರಾಷ್ಟ್ರೀಯ  ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 55 ಡಾಲರ್‌ ಪ್ರತಿ ಬ್ಯಾರೇಲ್‌ಗೆ ಇದ್ದು, ವಾಸ್ತವ ಪೆಟ್ರೋಲ್‌ ದರ 30 ರೂ.ಗಿಂತ ಕಡಿಮೆ ಇದೆ. ಆದರೆ, ರಾಜ್ಯದಲ್ಲಿ ಪೆಟ್ರೋಲ್‌ ಬೆಲೆ 90ರೂ. ಏರಿಕೆಯಾಗಿದೆ. ಇದು ಕೇಂದ್ರ ಸರ್ಕಾರ ಬಹಿರಂಗವಾಗಿ ಮಾಡುತ್ತಿರುವ ಲೂಟಿ   ಎಂದು ಆರೋಪಿಸಿದರು.

 ಇದನ್ನೂ ಓದಿ : ಬ್ರಾಹ್ಮಣ ಸಂಸತ್‌ಗೆ ರಜತೋತ್ಸವ ಸಂಭ್ರಮ

Advertisement

ನಗರಸಭೆ ಮಾಜಿ ಸದಸ್ಯ ಗೋವಿಂದರಾಜ ಬಳ್ಳಾರಿ ಮತ್ತು ಕಾಂಗ್ರೆಸ್‌ ಯುವ ಘಟಕ ಮಾಜಿ ಅಧ್ಯಕ್ಷ ಚಂದ್ರಶೇಖರ ರಾಠೊಡ, ಹೋರಾಟಕ್ಕೆ ಬೆಂಬಲ ನೀಡಿ ಪಾಲ್ಗೊಂಡಿದ್ದರು. ಕರವೇ ಪ್ರಮುಖರಾದ ಬಸವರಾಜ ಧರ್ಮಂತಿ, ವಿಜಯ ಕಾಳೆ, ಮಲ್ಲು ಕಟ್ಟಿಮನಿ, ಬಸವರಾಜ ಅಂಬಿಗೇರ, ಮಂಜು ರಾಮದುರ್ಗ, ಆಕಾಶ ಆಸಂಗಿ, ರವಿ ಶಿಂಧೆ, ಮಂಜು ಪವಾರ, ಪ್ರವೀಣ ಪಾಟೀಲ, ದೇವೇಂದ್ರ ಆಸ್ಕಿ, ಆತ್ಮಾರಾಮ ನೀಲನಾಯಕ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next