ಮೈಸೂರು: ನಗರದ ಮಹಾರಾಣಿ ಮಾದರಿಎನ್‌ಟಿಎಂ ಸರ್ಕಾರಿ ಶಾಲೆಯನ್ನು ಉಳಿಸಲುಶಾಲೆ ಉಳಿಸಿ ಹೋರಾಟ ಒಕ್ಕೂಟದಿಂದ ಮಂಗಳವಾರವೂ ಪ್ರತಿಭಟನೆ ಮುಂದುವರಿಯಿತು.
ಎನ್‌ಟಿಎಂ ಶಾಲೆಯ ಎದುರು ಮಂಗಳವಾರನಡೆದ ಪ್ರತಿಭಟನೆಯಲ್ಲಿ ಸಾಹಿತಿ ಕೆ.ಎಸ್.ಭಗವಾನ್ ಮಾತನಾಡಿ, ನಾವು ಶಾಲೆಪರವಾಗಿಯೂ ಇದ್ದೇವೆ. ಸ್ಮಾರಕದಪರವಾಗಿಯೂ ಇದ್ದೇವೆ.
ಏಕೆಂದರೆ 150ವರ್ಷಗಳ ಇತಿಹಾಸವಿರುವ ಕನ್ನಡ ಶಾಲೆ, ಕನ್ನಡಶಾಲೆಯನ್ನು, ಕನ್ನಡವನ್ನು ನಾವು ಉಳಿಸದಿದ್ದರೆಇನ್ಯಾರು ಉಳಿಸುತ್ತಾರೆ. ಕನ್ನಡವನ್ನುಕರ್ನಾಟಕದಲ್ಲಿ ಉಳಿಸಿ, ಬೆಳೆಸಿ ಗೌರವಿಸದೇಹೋದರೆ ಇನ್ಯಾರು ಗೌರವಿಸುತ್ತಾರೆ.
ಹಾಗಾಗಿಕನ್ನಡ ಶಾಲೆಯ ಪರವಾಗಿ ಇದ್ದೇವೆ. ಶಾಲೆಯಜೊತೆ ಸ್ಮಾರಕವೂ ಇರಲಿ. ಸ್ಮಾರಕ ಮಾಡಿದರೆಇದು ಚಿಕ್ಕ ಜಾಗ, ದೊಡ್ಡ ಕಾರ್ಯಕ್ರಮಮಾಡಿದಾಗ ಜನ ಬಂದು ಸೇರಲು ವಾಹನನಿಲ್ಲಿಸಲು ತೊಂದರೆಯಾಗಲಿದೆ ಎಂದರು.
ಹೋರಾಟಗಾರ ಪ.ಮಲ್ಲೇಶ್ ಮಾತನಾಡಿ, ಒಬ್ಬವಿದ್ಯಾರ್ಥಿ ಇದ್ದರೂ ಕನ್ನಡ ಶಾಲೆ ಮುಚಲ್ಲ, c ಇದುಸರ್ಕಾರ ತೀರ್ಮಾನ ವಲ್ಲವೇ? ನೀವ್ಯಾಕೆಅದನ್ನುಬದಲಾಯಿಸಿ ಶಾಲೆ ಮುಚ್ಚಲು ಹೊರಟಿದ್ದೀರಿ,ಶಾಲೆ ಮುಚ್ಚುವುದು ಅಂದರೆ ಕಟ್ಟಡಬೇರೆಯವರಿಗೆ ಕೊಟ್ಟು ಶಾಲೆ ಮುಚ್ಚಿದ ಹಾಗೆ,ಕನ್ನಡದ ಅಸ್ಮಿತೆಯನ್ನು ಉಳಿಸಲು ನಾವೆಲ್ಲಕಟಿಬದ್ಧರಾಗಿದ್ದೇವೆ ಎಂದರು.ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ, ದಲಿತಸಂಘರ್ಷ ಸಮಿತಿ, Óರಾಜ್ Ì ಇಂಡಿಯಾಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರುಮತ್ತಿತರರು ಉಪಸ್ಥಿತರಿದ್ದರು