Advertisement

ಕೊರೊನಾ ಮಧ್ಯೆ ವೇತನ ಸಿಗದೆ ಮುಷ್ಕರ ನಿರತ ಆಶಾ ಕಾರ್ಯಕರ್ತೆಯರು

12:46 PM Jun 19, 2021 | Team Udayavani |

ಮುಂಬಯಿ: ಕೊರೊನಾ ಅವಧಿಯಲ್ಲಿ  ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಕಾಂಟ್ರಾಕ್ಟ್ ಸೆಕ್ಯುರಿಟಿ ಗಾರ್ಡ್‌ ಮತ್ತು ಅಡುಗೆಯವರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಆಶಾ ಕಾರ್ಯಕರ್ತೆಯರಿಗಿಂತ ಹೆಚ್ಚಿನ ವೇತನ ನೀಡಲಾಗುತ್ತದೆ ಎಂಬ ವಿಷಯ ಬಹಿರಂಗಗೊಂಡಿದೆ.

Advertisement

ಆರೋಗ್ಯ ಇಲಾಖೆಯು ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ 27,000ಕ್ಕೂ ಹೆಚ್ಚು ಕಾಂಟ್ರಾಕ್ಟ್ ಸೆಕ್ಯುರಿಟಿ ಗಾರ್ಡ್‌ ಮತ್ತು ಅಡುಗೆ ಯವರನ್ನು ನೇಮಿಸಿಕೊಂಡಿದ್ದು, ಅವರಲ್ಲಿ ಹೆಚ್ಚಿನವರಿಗೆ ಕನಿಷ್ಠ ವೇತನ ಕಾಯ್ದೆಯಡಿ ವೇತನ ಅಥವಾ ಸಂಭಾವನೆ ನೀಡಲಾಗುತ್ತದೆ. ಮುಂಬಯಿಯ ಆರೋಗ್ಯ ಇಲಾಖೆಯ ಕೇಂದ್ರ ಕಚೇರಿಯಾದ ಆರೋಗ್ಯ ಭವನದಿಂದ ರಾಜ್ಯದ ಜಿಲ್ಲಾ ಆಸ್ಪತ್ರೆಗಳು ಮತ್ತು ಗ್ರಾಮೀಣ ಆಸ್ಪತ್ರೆಗಳವರೆಗೆ ಮುಖ್ಯವಾಗಿ ಗುತ್ತಿಗೆ ಆಧಾರದ ಮೇಲೆ ಭದ್ರತಾ ಸಿಬಂದಿಗಳನ್ನು ನೇಮಿಸಲಾಗಿದೆ.

ಭದ್ರತಾ ಸಿಬಂದಿಗೆ ತಿಂಗಳಿಗೆ  18,000 ರೂ. ವೇತನ

ಗುತ್ತಿಗೆ ಭದ್ರತಾ ಸಿಬಂದಿಯನ್ನು ರಾಜ್ಯ ಭದ್ರತಾ ನಿಗಮ ಮತ್ತು ಇತರ ಕೆಲವು ಸಂಸ್ಥೆಗಳ ಮೂಲಕ ನೇಮಕ ಮಾಡಲಾಗಿದ್ದು, ಇವರಿಗೆ ತಿಂಗಳಿಗೆ 18,000 ರೂ. ವೇತನ ನೀಡಲಾಗುವುದಲ್ಲದೆ, ಜಿÇÉಾ ಆಸ್ಪತ್ರೆಗಳು ಮತ್ತು ಗ್ರಾಮೀಣ ಆಸ್ಪತ್ರೆಗಳಲ್ಲಿನ ಅಡುಗೆಯವರಿಗೆ ಗುತ್ತಿಗೆ ಆಧಾರದ ಮೇಲೆ ಪ್ರೊವಿಡೆಂಟ್‌ ಫಂಡ್‌ ಅನ್ನು ಒದಗಿಸಲಾಗಿದೆ. ನಿಯಮಗಳ ಪ್ರಕಾರ ಇಲ್ಲಿನ ಅಡುಗೆಯವರಿಗೆ ಕನಿಷ್ಠ ವೇತನ ಕಾನೂನು ಕೂಡ ಅನ್ವಯಿಸುತ್ತದೆ. ಗುತ್ತಿಗೆ ಭದ್ರತಾ ಸಿಬಂದಿ ಮತ್ತು ಅಡುಗೆಯವರಿಗೆ 11,000 – 18,000 ರೂ. ಗಳನ್ನು ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ.

ಮನೆ ಮನೆ ಸಮೀಕ್ಷೆಯಲ್ಲಿ  ಆಶಾ ಕಾರ್ಯಕರ್ತೆಯರು

Advertisement

ರಾಜ್ಯದಲ್ಲಿ 70 ಸಾವಿರ ಆಶಾ ಕಾರ್ಯಕರ್ತೆಯರು ಮುಷ್ಕರದಲ್ಲಿದ್ದಾರೆ. ದೈನಂದಿನ ಭತ್ತೆ ಸಾವಿರ ರೂ. ಮಾತ್ರ ಪಡೆಯುತ್ತಿದ್ದು, ಕಳೆದ ವರ್ಷದಿಂದ ಇವರು ಜ್ವರ ಮತ್ತು ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಲು ಮನೆ-ಮನೆಗೆ ಹೋಗುತ್ತಿದ್ದಾರೆ. ಮನೆಯಲ್ಲಿರುವ ರೋಗಿಗಳ ವ್ಯಾಕ್ಸಿನೇಶನ್‌ ಸಹಿತ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಅಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವ್ಯಾಕ್ಸಿನೇಶನ್‌ ಕ್ಯಾಂಪ್‌ಗೆ ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡು ವಾಗ, ಅವರಿಗೆ ಕೇಂದ್ರ ಸರಕಾರವು ತಿಂಗಳಿಗೆ 1,000 ರೂ. ಅಂದರೆ ಎಂಟು ಗಂಟೆಗಳ ಕೊರೊನಾ ಕೆಲಸಕ್ಕೆ ದಿನಕ್ಕೆ 35 ರೂ. ಗಳನ್ನು ನೀಡುತ್ತಿದೆ ಎನ್ನಲಾಗಿದೆ.

ನ್ಯಾಯಯುತ ಗೌರವಕ್ಕಾಗಿ ಬೇಡಿಕೆ

ಕಳೆದ ವರ್ಷದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅವರ ಒಕ್ಕೂಟಗಳು ಸರಕಾರಕ್ಕೆ ನ್ಯಾಯಯುತ ಸಂಭಾವನೆಯನ್ನು  ಪಾವತಿಸಬೇಕೆಂದು ಆಗ್ರಹಿಸಿವೆ. ಆದರೆ ಸರಕಾರದ ಅಸಮರ್ಥತೆಯಿಂದಾಗಿ ಆಶಾ ಕಾರ್ಯಕರ್ತೆಯರು ಮುಷ್ಕರ ನಡೆಸಬೇಕಾಗಿದೆ. ಕೊರೊನಾ ಪೂರ್ವ ಆರೋಗ್ಯ ಕಾರ್ಯಗಳಿಗಾಗಿ ಇವರು 4,000 ರೂ. ಗಳನ್ನು ಪಡೆಯುತ್ತಿದ್ದು, 72 ರೀತಿಯ ಕೆಲಸಗಳಿಗೆ 2,500 ರೂ. ಗಳಿಂದ 3,500 ರೂ. ಗಳನ್ನು ಪಡೆಯುತ್ತಿದ್ದಾರೆ ಎಂದು ಸಂಘಟನೆಯ ನಾಯಕರಾದ ಶಂಕರ್‌ ಪೂಜಾರಿ ಮತ್ತು ರಾಜು ದೇಸಲೆ ಹೇಳಿದ್ದಾರೆ.

ಗೌರವ ಸಿಗುತ್ತಿಲ್ಲ

ಆಶಾ ಕಾರ್ಯಕರ್ತೆಯರು ಪಾವತಿಸಲು ಸರಕಾರದಲ್ಲಿ ಹಣವಿಲ್ಲ. ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌, ಸಾಮಾಜಿಕ ನ್ಯಾಯ ಸಚಿವ ಧನಂಜಯ್‌ ಮುಂಡೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಡುವಿನ ಸಭೆಯಲ್ಲಿ ಅಡುಗೆಯವರಿಗೆ ನೀಡುವ ಗೌರವವನ್ನು 6,900 ರೂ. ಗಳಿಂದ 8,500 ರೂ. ಗಳಿಗೆ ಮತ್ತು ಸೆಕ್ಯುರಿಟಿ ಗಾರ್ಡ್‌ಗಳಿಗೆ 5,750 ರೂ. ಗಳಿಂದ 7,500 ರೂ. ಗೆ ಹೆಚ್ಚಿಸಲು ನಿರ್ಧರಿಸಲಾಯಿತು. ಹಾಗಾದರೆ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಮತ್ತು ಆರೋಗ್ಯ ಸಚಿವ ರಾಜೇಶ್‌ ಟೋಪೆ ಅವರು ನಮಗೇಕೆ ಗೌರವಧನ ನೀಡುತ್ತಿಲ್ಲ ಏಕೆ ಎಂಬ ಪ್ರಶ್ನೆಯನ್ನು ಆಶಾ ಕಾರ್ಯಕರ್ತೆಯರು ಎತ್ತಿದ್ದಾರೆ.

ಸಿಎಂ  ಠಾಕ್ರೆ ಇನ್ನಾದರೂ ಗಮನ ಹರಿಸಲಿ

ಆಶಾ ಕಾರ್ಯಕರ್ತೆಯರು ರಾಜ್ಯ ಸರಕಾರದಿಂದ 2,000 ರೂ. ಮತ್ತು ಕೇಂದ್ರದಿಂದ 2,000 ರೂ. ಗಳನ್ನು ಮತ್ತು ಕೊರೊನಾ ಭತ್ತೆಯಾಗಿ ಕೇಂದ್ರ ಸರಕಾರ ಒಂದು ಸಾವಿರ ರೂಪಾಯಿಗಳನ್ನು ಪಾವತಿಸುತ್ತದೆ. ಇದರರ್ಥ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರಕಾರ 2,000 ರೂ. ಗಳನ್ನು ಮಾತ್ರ ನೀಡುತ್ತಿದೆ. ಒಂದೆಡೆ ಸಿಎಂ ಉದ್ಧವ್‌ ಠಾಕ್ರೆ ಅವರುಆರೋಗ್ಯ ರಕ್ಷಣೆಗಾಗಿ ಆಶಾ ಕಾರ್ಯಕರ್ತೆಯರು ಋಣಿಯಾಗಿದ್ದು, ಅವರನ್ನು ಗೌರವಿಸಲಾಗುತ್ತದೆ. ಇವರು ಆರೋಗ್ಯ ರಕ್ಷಣೆಯ ಬೆನ್ನೆಲುಬು ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆದರೆ ಅವರಿಗೆ ಗೌರವ ಮತ್ತು ಕೊರೊನಾ ಭತ್ತೆ ಏಕೆ ಪಾವತಿಸಬಾರದು ಎಂದು ಸಂಘಟನೆಯ ನಾಯಕರಾದ ಶಂಕರ್‌ ಪೂಜಾರಿ ಅವರು ಕೇಳುತ್ತಿರುವ ಪ್ರಶ್ನೆಯಾಗಿದೆ.

ನಮಗೂ ಕುಟುಂಬ ಇದೆ

ಆರೋಗ್ಯ ಇಲಾಖೆಯಿಂದ ಮುಖ್ಯಮಂತ್ರಿ ಯವರೆಗೆ ಎಲ್ಲರೂ ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ರಕ್ಷಣೆಯನ್ನು ಭರವಸೆಯಿಂದ ನಡೆಸುತ್ತಾರೆ ಎಂದು ಒಪ್ಪಿಕೊಂಡಾಗ ನಾವು ಏಕೆ ನಿರ್ಲಕ್ಷÂಕ್ಕೆ ಒಳಗಾಗುತ್ತಿದ್ದೇವೆ. ನಮಗೂ ಒಂದು ಕುಟುಂಬ ಇದೆ. ನಮಗೂ ನಮ್ಮ ಮನೆಯವರಿಗೂ ಹೊಟ್ಟೆ ಇದೆ. ಬೇಡಿಕೆಗಳನ್ನು ಈಡೇರಿಸುವವರೆಗೆ ಅನಿರ್ದಿಷ್ಟವಾಗಿ ಮುಷ್ಕರ ಮಾಡುವ ನಿರ್ಧಾರ ನಮ್ಮದಾಗಿದೆ. ಸರಕಾರವು ನಮಗಿಂತ ಸೆಕ್ಯುರಿಟಿ ಗಾರ್ಡ್‌ಗಳು ಮತ್ತು ಅಡುಗೆಯವರಿಗೆ ಹೆಚ್ಚು ವೇತನ ನೀಡುತ್ತದೆ. ಆದ್ದರಿಂದ ಕೊರೊನಾ ಅವಧಿಯಲ್ಲಿ ರೋಗಿಗಳ ಆರೈಕೆ ಮಾಡುವ ನಮಗೆ ಯೋಗ್ಯ ವೇತನ ನೀಡಲು ಸರಕಾರದಲ್ಲಿ ಏಕೆ ಹಣವಿಲ್ಲ ಎಂದು ಮುಷ್ಕರದಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು ಕೇಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next