Advertisement

ರೈತ ವಿರೋಧಿ ಕಾಯ್ದೆ ಕೈಬಿಡಲು ಮನವಿ

03:01 PM Aug 12, 2020 | Suhan S |

ದೇವದುರ್ಗ: ರಾಜ್ಯ ಮತ್ತು ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆ ಜಾರಿಗೆ ಮುಂದಾಗಿದ್ದು, ಇದನ್ನು ಕೈಬಿಡಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮಧುರಾಜ ಯಾಳಗಿ ಅವರಿಗೆ ಮನವಿ ಸಲ್ಲಿಸಿದರು.

Advertisement

ರಾಜ್ಯಾದ್ಯಂತ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ರೈತ ವಿರೋಧಿ ನೀತಿ ಕಾಯ್ದೆ ಜಾರಿಗೆ ತರಲು ಮುಂದಾಗಿರುವುದು ಖಂಡನೀಯ. ಎಪಿಎಂಸಿ ಕಾಯ್ದೆ ರೈತರಿಗೆ ಅನಾನುಕೂಲವಾಗಿದೆ. ಇದನ್ನು ಕೈಬಿಡಬೇಕು. ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಸಮಸ್ಯೆ ಎದುರಿಸುವಂತಾಗಿದೆ. ಈ ಕಾಯ್ದೆಯನ್ನು ಕೈಬಿಡಬೇಕು. ವಿದ್ಯುತ್‌ ಕಾಯ್ದೆ ತಿದ್ದುಪಡಿಯಿಂದ ಮುಂದಿನ ದಿನಗಳಲ್ಲಿ ರೈತರು ಅನೇಕ ತೊಂದರೆ ಅನುಭವಿಸಬೇಕಾಗುತ್ತದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಬೀಜ ಕಾಯ್ದೆ 2019 ಬೀಜದ ಹಕ್ಕು ರೈತನಿಂದ ಕಿತ್ತು ತಿನ್ನುವ ಕಂಪನಿಗಳ ಕೈಗೆ ನೀಡಲಾಗುತ್ತಿದೆ. ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಯನ್ನು ಕೊಡಲೇ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ಶರಣಪ್ಪ ಮರಳಿ, ಉಮದೇವಿ ನಾಯಕ, ರೂಪ ನಾಯಕ, ತಿಮ್ಮಣ್ಣ ನಾಯಕ, ಮರಿಲಿಂಗ ಪಾಟೀಲ, ತಿಮ್ಮನಗೌಡ, ರಂಗಣ್ಣ ನಾಯಕ, ಗಂಗನಗೌಡ, ಜಹಿರುದ್ದೀನ್‌ ನಾಗುಂಡಿ, ಶರಣಗೌಡ, ಸಾಬ್ಬಣ್ಣ, ಚನ್ನಪ್ಪಗೌಡ, ರಾಮಕೃಷ್ಣ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next