Advertisement

ಜಲಾಮೃತ ಯೋಜನೆಯಡಿ ಕೆರೆಗಳ ರಕ್ಷಣೆ

12:44 PM Jun 15, 2019 | Team Udayavani |

ರಾಮನಗರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜಲಾಮೃತ ಯೋಜನೆಯಡಿಯಲ್ಲಿ ಕೆರೆಗಳ ಹೂಳು ತೆಗೆದು, ಪುನಶ್ಚೇತನಗೊಳಿಸುವುದು, ಕೆರೆಯ ನೀರಿನ ಮೂಲಗಳನ್ನು ಬಲ ಪಡಿಸಲಾಗುವುದು ಎಂದು ಮಾಗಡಿ ಶಾಸಕ ಎ.ಮಂಜುನಾಥ್‌ ತಿಳಿಸಿದರು.

Advertisement

ತಾಲೂಕಿನ ಬಿಡದಿ ಹೋಬಳಿ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಾಳಕುಪ್ಪೆ ಗ್ರಾಮದ ಸರ್ಕಾರಿ ಗುಂಡುತೋಪಿನಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದ ಕಲ್ಯಾಣಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಸಿಗಳನ್ನು ನೆಡುವ ಕಾರ್ಯ ಕೈಗೊಂಡು ಪರಿಸರವನ್ನು ರಕ್ಷಿಸುವ ಗುರಿ ಹೊಂದಿದೆ. ಸರ್ಕಾರದ ಈ ಪ್ರಯತ್ನದಲ್ಲಿ ನಾಗರಿಕರು ಭಾಗಿಯಾಗಬೇಕು. ಜಲಾಮೃತ ಯೋಜನೆಯಡಿ ಅಂತರ್ಜಲ ವೃದ್ಧಿ, ಹಸಿರೀಕರಣ ಹೀಗೆ ಪರಿಸರ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

12 ಎಕರೆ ಗುಂಡುತೋಪು ಅಭಿವೃದ್ಧಿ: ಮಂಚನಾಯ್ಕನಹಳ್ಳಿ ಗ್ರಾಪಂ ಅಧ್ಯಕ್ಷೆ ನಂದಪ್ರಭ ಆನಂದ್‌ ಮಾತನಾಡಿ, ತಾಳಕುಪ್ಪೆ ಗ್ರಾಮದಲ್ಲಿರುವ ಸುಮಾರು 12 ಎಕರೆ ಗುಂಡುತೋಪನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ನಿಧಿಯಡಿ 10 ಲಕ್ಷ ರೂ. ವೆಚ್ಚದಲ್ಲಿ ಕಲ್ಯಾಣಿಯನ್ನು ನಿರ್ಮಾಣ ಮಾಡುಲಾಗುತ್ತಿದೆ. ಮಳೆಗಾಲದಲ್ಲಿ ಸ್ವಾಭಾವಿಕವಾಗಿ ಹರಿದು ಬರುವ ನೀರನ್ನು ಸಂಗ್ರಹಿಸಿ, ಗುಂಡುತೋಪಿನಲ್ಲಿರುವ ಸಸಿಗಳಿಗೆ ನೀರುಣಿಸುವುದು ಪ್ರಮುಖ ಉದ್ದೇಶವಾಗಿದೆ ಎಂದರು.

ಕಲ್ಯಾಣಿಯಿಂದ ಅನುಕೂಲ: ಗುಂಡುತೋಪಿನಲ್ಲಿ ಇಲ್ಲಿನ ಜನರ ಆರಾಧ್ಯ ದೈವ ಪಾರ್ವತಮ್ಮ ಮತ್ತು ಶಕ್ತಿದೇವತೆ ಅವಸರದಮ್ಮ ದೇವಾಲಯಗಳಿದ್ದು, ನಿರಂತರವಾಗಿ ಬರುವ ಭಕ್ತರಿಗೆ ಈ ಕಲ್ಯಾಣಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ, ಪ್ರತಿವರ್ಷವೂ ನಡೆಯುವ ಅಗ್ನಿಕೊಂಡೋತ್ಸವ ಹಾಗೂ ಜಾತ್ರೆಯ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಸೇರುವುದರಿಂದ ಮುಡಿ, ಮುದ್ರೆ ಇತ್ಯಾದಿ ಶುಭಕಾರ್ಯಗಳಿಗೂ ಕಲ್ಯಾಣಿಯ ನೀರು ಸದ್ಬಳಕೆಯಾಗಲಿದೆ. ಒಂದು ವೇಳೆ ಕಲ್ಯಾಣಿಗೆ ಮಳೆ ನೀರಿನ ಸಂಗ್ರಹಣೆಯಲ್ಲಿ ಕೊರತೆ ಉಂಟಾದರೆ ಈ ಜಾಗದಲ್ಲಿ ಕೊಳವೆ ಬಾವಿಯನ್ನು ಕೊರೆಸಿ ನೀರನ್ನು ತುಂಬಿಸಲು ಉದ್ದೇಶಿಸಲಾಗಿದೆ ಎಂದರು.

ಅರಣ್ಯೀಕರಣ ವೃದ್ಧಿಗೆ ತೀರ್ಮಾನ: ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅರಣ್ಯೀಕರಣವನ್ನು ವೃದ್ಧಿಸುವ ನಿಟ್ಟಿನಲ್ಲಿ ಸಾಮಾನ್ಯ ಸಭೆಯಲ್ಲಿ ನಿರ್ವಹಣಾ ನಿಧಿಯನ್ನು ಮೀಸಲಿಡಲು ನಿರ್ಣಯ ಕೈಗೊಳ್ಳಲಾಗಿದೆ. ಒಟ್ಟು ಆದಾಯದ ಶೇ.10ರಷ್ಟಿದ್ದ ನಿರ್ವಹಣಾ ನಿಧಿಯನ್ನು ಈಗ ಶೇ.30ಕ್ಕೆ ಏರಿಕೆ ಮಾಡಲಾಗಿದೆ. ಹೀಗಾಗಿ ಖಾಲಿ ಜಾಗ ಇರುವ ಕಡೆ ಗಿಡಗಳನ್ನು ನೆಟ್ಟು ಪೋಷಣೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

Advertisement

ಸ್ವಚ್ಛ ಮೇವ ಜಯತೆಯಡಿ ಕಾರ್ಯಕ್ರಮ: ಪಂಚಾಯ್ತಿ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿರುವ ಚರಂಡಿಗಳು ಹೂಳು ತುಂಬಿದ್ದು, ನೀರು ಸರಾಗವಾಗಿ ಹರಿಯುತ್ತಿಲ್ಲ ಎಂಬ ದೂರುಗಳ ಮೇರೆಗೆ ಮುಂದಿನ ವಾರದಲ್ಲಿ ಎಲ್ಲಾ ಗ್ರಾಮಗಳಲ್ಲಿ ಚರಂಡಿಗಳಲ್ಲಿರುವ ತ್ಯಾಜ್ಯ ತೆಗೆದು ಸ್ವಚ್ಛ ಮಾಡುವ ಕಾರ್ಯ ಕೈಗೊಳ್ಳಲಾಗುವುದು. ಸರ್ಕಾರದ ಸ್ವಚ್ಛ ಮೇಯ ಜಯತೆ ಘೋಷಣೆಯಡಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಭಿಯಾನ ಕೈಗೊಂಡು ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಾಳಕುಪ್ಪೆ ಸರಕಾರಿ ಶಾಲೆಯ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಸಸಿಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ನಟರಾಜ್‌ ಗಾಣಕಲ್, ಜಿಪಂ ಸದಸ್ಯ ಎಂ.ಎನ್‌.ಮಂಜುನಾಥ್‌, ತಾಪಂ ಸದಸ್ಯೆ ನೀಲಾಮಂಜುನಾಥ್‌. ಗ್ರಾಪಂ ಸದಸ್ಯರಾದ ಮೂಡಲಗಿರಿಯಪ್ಪ, ಗೋವಿಂದಪ್ಪ, ರಾಘವೇಂದ್ರ, ರಂಗಸ್ವಾಮಿ, ರವಿ, ಕೆಪಿಸಿಸಿ ಸದಸ್ಯ ಚಿಕ್ಕಬ್ಯಾಟಪ್ಪ, ಅರಣ್ಯ ಇಲಾಖೆ ಅಧಿಕಾರಿ ಮಂಜುನಾಥ್‌, ಮುಖಂಡರಾದ ವೀರಭದ್ರಯ್ಯ, ಆನಂದ್‌, ಪಿಡಿಒ ಶಿವಕುಮಾರ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next