Advertisement
ಲಾರಿಯಲ್ಲಿ ದನ ಕರುಗಳನ್ನು ಹಿಂಸಾತ್ಮಕವಾಗಿ ಕಟ್ಟಲಾಗಿತ್ತು ಹಾಗೂ ಮಳೆ ನೀರಿನಿಂದ ರಕ್ಷಣೆ ಪಡೆಯಲು ಮೇಲ್ಛಾವಣಿಯ ವ್ಯವಸ್ಥೆಯೂ ಇರಲಿಲ್ಲ. ದನಕರುಗಳನ್ನು ಬಂಟಕಲ್ಲು ಸಮೀಪದ ಕುರ್ಕಾಲು ಅರಸೀಕಟ್ಟೆಯಲ್ಲಿ ನಿರ್ಮಾಣ ಗೊಂಡಿರುವ ಧರ್ಮ ಫೌಂಡೇಶನ್ ಗೋ ರೀಸರ್ಚ್ ಸೆಂಟರ್‌ಗೆ ಸಾಕುವ ಉದ್ದೇಶಕ್ಕಾಗಿ ತರಲಾಗುತ್ತಿತ್ತು ಎಂದು ತಿಳಿದು ಬಂದಿದೆ.
Related Articles
Advertisement
ಕೇರಳ ನೋಂದಣಿಯ ಮೂರು ಲಾರಿಗಳಲ್ಲಿ ದನ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದುಕೊಂಡ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಂಗಳೂರಿನಿಂದ ಬೆನ್ನಟ್ಟಿಕೊಂಡು ಬಂದಿದ್ದು, ಅವರು ನೀಡಿದ್ದ ಮಾಹಿತಿಯಂತೆ ಕಾಪು ಪೊಲೀಸರು ವಾಹನಗಳನ್ನು ತಡೆದರು. ಪರಿಶೀಲಿಸಿದಾಗ ಲಾರಿಗಳಲ್ಲಿ ಕ್ರಮವಾಗಿ 15, 16 ಮತ್ತು 17 ಗೋವು ಗಳನ್ನು ಹಿಂಸಾತ್ಮಕವಾಗಿ ತುಂಬಿಸಿದ್ದುದು ಪತ್ತೆಯಾಯಿತು. ಈ ಪೈಕಿ ಎರಡು ಹಸುಗಳು ಅಸ್ವಸ್ಥವಾಗಿವೆ. ಲಾರಿಗೆ ಬೆಂಗಾವಲಾಗಿ ಕಾರೊಂದು ಬರುತ್ತಿತ್ತು.
ಗೋಶಾಲೆಗೆ ರವಾನೆ
ರಕ್ಷಿಸಲಾಗಿರುವ 48 ಗೋವುಗಳನ್ನು ಕಾಪು ಸಿಐ ಮಹೇಶ್ ಪ್ರಸಾದ್ ಅವರ ಸೂಚನೆಯಂತೆ ಎಸ್‌ಐ ಜಯ ಕೆ. ನೇತೃತ್ವದಲ್ಲಿ ಪೊಲೀಸರು ಪುರಸಭಾ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್, ಕಿರಣ್ ಆಳ್ವ, ಸಂಘಟನೆಯ ಮುಖಂಡ ಸುಧೀರ್ ಪೂಜಾರಿ ಹಾಗೂ ಕಾರ್ಯ ಕರ್ತರ ನೆರವಿನೊಂದಿಗೆ ಬಂಟ ಕಲ್ಲು ಸಮೀಪದ ಧರ್ಮ ಫೌಂಡೇ ಷನ್‌ನ ಗೋ ಶಾಲೆಯ ಪ್ರದೇಶಕ್ಕೆ ಸ್ಥಳಾಂ ತರಿಸಲಾಗಿದೆ. ಅವುಗಳ ಭದ್ರತೆಗಾಗಿ ಇಬ್ಬರು ಎಎಸ್‌ಐಗಳು ಮತ್ತು ನಾಲ್ವರು ಪೊಲೀಸರನ್ನು ನಿಯೋಜಿಸಲಾಗಿದೆ. ಅಕ್ರಮ ಗೋ ಸಾಗಾಟ ಸಹಿತ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಲಯದ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಷ್ಟರವರೆಗೆ ಪೊಲೀಸ್ ಭದ್ರತೆ ಮುಂದುವರಿಯಲಿದೆ ಎಂದು ಸಿಐ ತಿಳಿಸಿದ್ದಾರೆ.
ಕಾರ್ಕಳ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಕೃಷ್ಣಕಾಂತ್ ಸ್ಥಳಕ್ಕೆ ಭೇಟಿ ನೀಡಿದ್ದು, ಪಶು ಇಲಾಖೆಯ ಅಧಿಕಾರಿಗಳು ಗೋವುಗಳ ಆರೋಗ್ಯ ತಪಾಸಣೆ ಮಾಡಿದ್ದಾರೆ.