Advertisement
ಸೂರಾಲು ಕಾಡಿಗೆ ಹೊಂದಿಕೊಂಡಿರುವ ಸಿದ್ದಾಪುರ ಪುರಣಾ ಪ್ರಸಿದ್ಧ 6 ಕೆರೆಗಲಲ್ಲಿ ಒಂದಾದ ಬ್ರಹ್ಮನ ಕೆರೆಯಲ್ಲಿ ನೀರಿನ ಒರತೆ ಇದ್ದ ಪರಿಣಾಮ ದಿನ ನಿತ್ಯ ಕಾಡು ಪ್ರಾಣಿಗಳು ನೀರು ಕುಡಿಯಲು ಬರುತ್ತವೆ. ಹಾಗೆಯೇ ನೀರು ಕುಡಿಯಲು ಬಂದ ಗಂಡು ಜಿಂಕೆಯೊಂದು ಕೆರೆಯ ಹೂಳಿನಲ್ಲಿ ಹೂತುಹೊದ ಘಟನೆಯ ನಡೆಯಿತು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಇಲಾಖೆಯವರು ಸ್ಥಳೀಯರ ಸಹಕಾರದಿಂದ ಜಿಂಕೆಗೆ ಹಗ್ಗ ಹಾಕಿ ಮೇಲಕ್ಕೆ ಎತ್ತಿ ಕಾಡಿಗೆ ಬಿಟ್ಟರು.
ನೂರಾರೂ ಎಕರೆಗಳ ವಿಸ್ತೀಣ ಹೊಂದಿರುವ ಸೂರಾಲು ಕಾಡಿನಲ್ಲಿ ಕಾಡುಕೋಣ, ಚಿರತೆ ಹಾಗೂ ಜಿಂಕೆಗಳು ಸೇರಿದಂತೆ ನೂರಾರೂ ಕಾಡು ಪ್ರಾಣಿಗಳು ಇವೆ. ಕಾಡಿನಲ್ಲಿ ನೀರಿನ ಆಶ್ರಯ ಇಲ್ಲದ ಕಾರಣ ಈ ಪ್ರಾಣಿಗಳಿಗಳು ಪ್ರತಿನಿತ್ಯ ನೀರು ಕುಡಿಯಲು ಬ್ರಹ್ಮನ ಕೆರೆಗೆ ಬರುತ್ತವೆ. ಹೀಗೆ ಬರುವ ಕೆಲವು ಪ್ರಾಣಿಗಳು ಆಗಾಗ ಕೆರೆಯ ಹೂಳಿನಲ್ಲಿ ಹೂತು ಹೋಗುತ್ತವೆ. ಕಾಡು ಪ್ರಾಣಿಗಳಿಗೆ ನೀರಿನ ಆಶ್ರಯವಾಗಿರುವ ಬ್ರಹ್ಮನ ಕೆರೆಯನ್ನು ಅರಣ್ಯ ಇಲಾಖೆಯ ವತಿಯಿಂದ ಹೂಳು ಎತ್ತುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಾರ್ಯಚರಣೆಯಲ್ಲಿ ಅರಣ್ಯ ಪಾಲಕ ಹರೀಶ್ ಕೆ, ವೀರಣ್ಣ ಮಾಯಾಚಾರ್, ಅರಣ್ಯ ರಕ್ಷಕ ಆನಂದ ಬಳೆಗಾರ, ಗುರುರಾಜ, ಕೃಷ್ಣಮೂರ್ತಿ ಹೆಬ್ಟಾರ್, ಶಿವು, ಶಿವಣ್ಣ ಭಾಗವಹಿಸಿದರು. ಸ್ಥಳೀಯರಾದ ಕೃಷ್ಣ ಪೂಜಾರಿ ಮತ್ತು ಪ್ರಶಾಂತ ಅವರು ಕೆರೆಗೆ ಇಳಿದು ಜಿಂಕೆಗೆ ಹಗ್ಗ ಹಾಕಿ ಮೇಲಕ್ಕೆ ಎತ್ತುವಲ್ಲಿ ಸಹಕರಿಸಿದರು.