Advertisement

ರೈಲು ಹತ್ತುವಾಗ ಬಿದ್ದ ಪ್ರಯಾಣಿಕನ ರಕ್ಷಣೆ

09:30 AM Feb 26, 2022 | Team Udayavani |

ಕಲಬುರಗಿ: ನಗರದ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವ ಭರದಲ್ಲಿ ಕೆಳಗಡೆ ಬೀಳುತ್ತಿದ್ದ ಪ್ರಯಾಣಿಕನನ್ನು ಪೊಲೀಸ್‌ ಕಾನ್‌ಸ್ಟೇಬಲ್‌ ರಕ್ಷಿಸಿದ್ದಾರೆ.

Advertisement

ಗುರುವಾರ ಸೊಲ್ಲಾಪುರದಿಂದ ಹಾಸನಕ್ಕೆ ಹೊರಟಿದ್ದ ರೈಲು ರಾತ್ರಿ 9 ಗಂಟೆಗೆ ಸುಮಾರಿಗೆ ಬಂದು ನಿಂತಿತ್ತು. ಈ ವೇಳೆ ಜನರಲ್‌ ಬೋಗಿಗೆ 28 ವರ್ಷದ ಅನಿಲ ಎಂಬಾತ ಹತ್ತಲು ಮುಂದಾಗಿದ್ದ. ಆಗ ರೈಲು ಮುಂದಕ್ಕೆ ಚಲಿಸಿತು. ಇದರಿಂದ ನಿಯಂತ್ರಣ ತಪ್ಪಿ ಅನಿಲ ಕೆಳಗೆ ಬಿದ್ದಿದ್ದ. ಫ್ಲಾಟ್‌ ಫಾರಂನಿಂದ ಜಾರಿ ರೈಲಿನ ಚಕ್ರಕ್ಕೆ ಸಿಲುಕುವ ಹಂತಕ್ಕೆ ತಲುಪಿದ್ದ. ಈ ಸಮಯದಲ್ಲಿ ಫ್ಲಾಟ್‌ ಫಾರಂನಲ್ಲಿದ್ದ ಕರ್ನಾಟಕ ರೈಲು ಪೊಲೀಸ್‌ ಇಲಾಖೆ ಕಾನ್‌ಸ್ಟೇಬಲ್‌ ಪ್ರವೀಣ ತಕ್ಷಣಕ್ಕೆ ದೌಡಾಯಿಸಿ ಕೆಳಗೆ ಬಿದ್ದಿದ್ದ ಅನಿಲನ ರಕ್ಷಣೆಗೆ ಮುಂದಾಗಿದ್ದರು.

ಅಲ್ಲದೇ, ಇನ್ನಿಬ್ಬರು ಕಾನ್‌ಸ್ಟೆàಬಲ್‌ಗ‌ಳಾದ ಭಾವಸಾಬ್‌, ಶಂಕರ ಸಹ ನೆರವಿಗೆ ಬಂದಿದ್ದರು. ಆದರೆ, ರೈಲಿನ ಚಲನೆ ವೇಗವಾಗಿದ್ದರಿಂದ ಅನಿಲ ಹಾಗೆ ಜಾರಿಕೊಂಡು ಮುಂದೆ ಹೋಗಿದ್ದ. ಈ ವೇಳೆ ಕಾನ್‌ಸ್ಟೇಬಲ್‌ ಪ್ರವೀಣ ಪಟ್ಟು ಬಿಡದೇ ಆತನನ್ನು ಫ್ಲಾಟ್‌ ಫಾರಂನ ಮೇಲಕ್ಕೆ ಎಳೆದು ರಕ್ಷಿಸುವ ಮೂಲಕ ಸಾಹಸ ಮೆರೆದಿದ್ದಾನೆ. ಈ ಘಟನೆಯ ಸಂಪೂರ್ಣ ದೃಶ್ಯಗಳು ರೈಲ್ವೆ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಜನರಲ್‌ ಬೋಗಿಯಲ್ಲಿ ಹತ್ತುವ ಜನರು ಹೆಚ್ಚಾಗಿ ಇರುತ್ತಾರೆ. ಇದರಿಂದ ಅವಸರದಲ್ಲೇ ಪ್ರಯಾಣಿಕರು ಏರುವುದು ಸಾಮಾನ್ಯ. ಆದ್ದರಿಂದ ರೈಲ್ವೆ ಪೊಲೀಸರು ಮತ್ತು ಸಿಬ್ಬಂದಿ ಜನರಲ್‌ ಬೋಗಿಯ ಕಡೆಯೇ ಗಮನ ಹರಿಸಿ ನಿಂತಿರುತ್ತೇವೆ. ಹೀಗಾಗಿ ಈ ಪ್ರಯಾಣಿಕನನ್ನು ರಕ್ಷಣೆ ಮಾಡಲು ಸಾಧ್ಯವಾಯಿತು ಎಂದು ಕಾನ್‌ಸ್ಟೇಬಲ್‌ ಪ್ರವೀಣ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next