Advertisement

10 ಬಾಲ ಕಾರ್ಮಿಕರ ರಕ್ಷಣೆ

11:14 AM Jun 12, 2018 | |

ವಿಜಯಪುರ: ವಿವಿಧ ಕಡೆಗಳಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ 10 ಮಕ್ಕಳನ್ನು ರಕ್ಷಿಸಲಾಗಿದ್ದು, ಇದರಲ್ಲಿ
ಮಾದಕ ವ್ಯಸನಿಯಾಗಿದ್ದ ಓರ್ವ ಬಾಲಕ ಸೇರಿರುವುದು ಗಮನೀಯ. ಜೂನ್‌ 12ರಂದು ವಿಶ್ವ ಬಾಲಕಾರ್ಮಿಕ
ವಿರೋಧಿ ದಿನಾಚರಣೆ ಇದ್ದು, ಇಂಥ ಆಚರಣೆಗಳು ಔಪಚಾರಿಕತೆ ಎಂಬುದು ಬಾಲ ಕಾರ್ಮಿಕರ ದುಸ್ಥಿತಿ ಮನವರಿಕೆ ಮಾಡಿಕೊಡುತ್ತದೆ.

Advertisement

ಬಾಲಕಾರ್ಮಿಕ ಮಕ್ಕಳ ರಕ್ಷಣಾ ಸಪ್ತಾಹದ ಅಂಗವಾಗಿ ಜೂ. 6ರಿಂದ 11ರವರೆಗೆ ವಿಜಯಪುರ ಮಕ್ಕಳ ಸಹಾಯವಾಣಿ-1098ರ ತಂಡದ ಕಾರ್ಯಕರ್ತರು ನಡೆಸಿದ ಕಾರ್ಯಾಚರಣೆಯಲ್ಲಿ ಚಹಾದ ಅಂಗಡಿ, ಕಿರಾಣಿ, ಚಪ್ಪಲಿ ಅಂಗಡಿ, ಸ್ಟೇಷನರಿ, ಮಾಂಸ, ಹಣ್ಣು, ಮಾರಾಟದ ಅಂಗಡಿ ಹೀಗೆ ವಿವಿಧ ನಡೆಗಳಲ್ಲಿ ದುಡಿಯುತ್ತಿದ್ದ ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. 

ನಗರದ ಸುಮಾರು 70 ಕ್ಕೂ ಹೆಚ್ಚು ಬಾಲ ಕಾರ್ಮಿಕ ಮಕ್ಕಳನ್ನು ಗುರುತಿಸಲಾಗಿದೆ. ದುಡಿಯುವ ಮಕ್ಕಳಿಗೆ ಸಮಾಲೋಚಿಸಿ ಮಾಲೀಕರಿಗೆ ತಿಳಿವಳಿಕೆ ನೀಡಲಾಯಿತು. ಈ ಹಂತದಲ್ಲಿ 8 ಮಕ್ಕಳ ಮನವೊಲಿಸಿ ಮನೆಗೆ ಕಳುಹಿಸಲಾಗಿದೆ. ಇಬ್ಬರು ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ಇದಲ್ಲದೇ ಮಾದಕ ದ್ರವ್ಯ ಸೇವಿಸುತ್ತಿದ್ದ 12 ವರ್ಷದ ಬಾಲಕ ಸೇರಿದಂತೆ 10 ಮಕ್ಕಳನ್ನು ರಕ್ಷಿಸಲಾಗಿದೆ.

ಸರಕಾರ ಬಾಲ ಕಾರ್ಮಿಕರ ಸಂಖ್ಯೆ ಕಡಿಮೆಯಗುತ್ತಿದೆ ಎಂದು ಹೇಳಿಕೊಳ್ಳುತ್ತಿದೆ. ಶಾಲೆಯಲ್ಲಿ ಇರಬೇಕಾದ ಮಕ್ಕಳು ವಿವಿಧ ಕಡೆಗಳಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕಾಲಕಾರ್ಮಿಕರ ನಿಗ್ರಹಕ್ಕಾಗಿ ಸರಕಾರದಿಂದ ನೇಮಕಗೊಂಡ ಅಧಿಕಾರಿಗಳ ಪ್ರಾಮಾಣಿಕ ಕಾಳಜಿ ಕೊರತೆ ಪರಿಣಾಮವೇ ಇಂಥ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಬದ್ಧತೆಯ ಕೆಲಸವಾಗುತ್ತಿಲ್ಲ.

ಭೀಕರ ಬರದ ಹಿನ್ನೆಲೆಯಲ್ಲಿ ಸಾವಿರಾರು ಬಡ ಕುಟುಂಬಗಳು ಗುಳೆ ಹೋಗಿದ್ದು, ಹಲವು ಕುಟುಂಬಗಳ ಮಕ್ಕಳು ವಾರ್ಷಿಕ ಕೂಲಿ ಹೆಸರಿನ ಜೀತಕ್ಕಿದ್ದು, ಕುರಿ, ಮೇಕೆ, ದನ ಕಾಯುತ್ತಿದ್ದಾರೆ. ಸುಮಾರು ಮಕ್ಕಳು ಪಾಲಕರೊಂದಿಗೆ ವಲಸೆ ಹೋಗಿ, ಅಲ್ಲಿಯೂ ದುಡಿಯುತ್ತಿದ್ದಾರೆ. ಬಾಲ ಕಾರ್ಮಿಕರ ನಿರ್ಮೂಲನೆಗಾಗಿ ಸರ್ಕಾರದಿಂದ ನಿಯುಕ್ತ ಅಧಿಕಾರಿಗಳು, ಎಲ್ಲ ರೀತಿಯ ಉದ್ಯೋಗಿ-ಉದ್ಯಮಿಗಳು ಮನಸ್ಥಿತಿ ಬದಲಾವಣೆ ಆಗಬೇಕಿದೆ.

Advertisement

ಎಲ್ಲಕ್ಕಿಂತ ಹೆಚ್ಚಾಗಿ ಪಾಲಕರು ತಮ್ಮ ಮಕ್ಕಳ ಭವಿಷ್ಯದ ಕುರಿತು ಪ್ರಾಮಾಣಿಕ ಕಾಳಜಿ ವಹಿಸುವುದು ಇಂದಿನ ಅಗತ್ಯವಾಗಿದೆ ಎಂದು ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕಿ ಸುನಂದಾ ತೋಳಬಂದಿ ಹೇಳುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next