Advertisement

ಟಿಪ್ಪರ್‌ ಮಾಲಕ, ಚಾಲಕರು, ಕಾರ್ಮಿಕರಿಂದ ಪ್ರತಿಭಟನೆ

07:50 AM Mar 23, 2018 | |

ಉಡುಪಿ: ಟಿಪ್ಪರ್‌ ಮಾಲಕರು, ಚಾಲಕರು ಮತ್ತು ಕಾರ್ಮಿಕ ವರ್ಗದವರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ವಿರುದ್ಧ ಟಿಪ್ಪರ್‌ ಮಾಲಕ ಮತ್ತು ಚಾಲಕರ ಸಂಘದ ವತಿಯಿಂದ ಮಣಿಪಾಲದ ಜಿಲ್ಲಾಧಿಕಾರಿ ಸಂಕೀರ್ಣದ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

Advertisement

ಟಿಪ್ಪರ್‌ ನಂಬಿಕೊಂಡು ಬದುಕುತ್ತಿರುವ ಟಿಪ್ಪರ್‌ ಮಾಲಕರು ಮತ್ತು ಚಾಲಕರನ್ನು ಮರಳು ಸಾಗಾಟಕ್ಕೆಂದು ಅಳವಡಿಸಿದ ಜಿಪಿಎಸ್‌ ಟಿಪ್ಪರ್‌ ಮಾಲಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಜಿಪಿಎಸ್‌ ಸಾಧನಕ್ಕೆ 10,000 ರೂ. ದುಬಾರಿ ಮೊತ್ತ ತೆರಬೇಕಾಗಿ ಒತ್ತಡ ಹೇರಲಾಗಿದೆ. ಜಿಪಿಎಸ್‌ ರದ್ದುಗೊಳಿಸಬೇಕು. ಜಿಲ್ಲೆಯಲ್ಲಿ ಎಂ ಸ್ಯಾಂಡ್‌ ಲಾಬಿ ಮತ್ತು ಮಲೇಷಿಯಾ ಮರಳು ಲಾಬಿಯನ್ನು ನಿಲ್ಲಿಸಬೇಕು. ಎಂದಿನಂತೆ ಮರಳುಗಾರಿಕೆ ಮುಂದುವರಿಯಲು ಅನುವು ಮಾಡಿಕೊಡಬೇಕೆಂದು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ, ಬೇರೆ ಜಿಲ್ಲೆಗಳಲ್ಲಿ ವಿಧಿಸಿದ ದಂಡವನ್ನು ಪರಿಶೀಲಿಸಿ, ಇಲ್ಲಿಯೂ ಕೂಡ ಅದೇ ತರಹ ದಂಡ ವಿಧಿಸುವ ಬಗ್ಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. 

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ. ರಘುಪತಿ ಭಟ್‌, ಪ್ರಥ್ವಿರಾಜ್‌ ಶೆಟ್ಟಿ, ರಾಘವೇಂದ್ರ ಉಪ್ಪೂರು ಮಾತನಾಡಿದರು. ಬೈಕಾಡಿ ಸುಪ್ರಸಾದ್‌ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ಟಿಪ್ಪರ್‌ಗಳ ಜಿಪಿಎಸ್‌ ಹಿಂಪಡೆ ಯಬೇಕು, ಯಾವುದೇ ದಂಡ ವಿಧಿಸಬಾರದು. ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಾಗಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಪಿಎಸ್‌ ರದ್ದುಗೊಳಿಸಬೇಕು. ಕಳಪೆ ಗುಣಮಟ್ಟದ ಜಿಪಿಎಸ್‌, ದೋಷಪೂರಿತವಿರುವ ಕಾರಣ ಅದನ್ನು ರದ್ದುಗೊಳಿಸಬೇಕು. ಬಡಪಾಯಿ ಟಿಪ್ಪರ್‌ ಚಾಲಕ, ಮಾಲಕ ಮತ್ತು ಬಡ ಕೂಲಿಕಾರ್ಮಿಕರ ಮೇಲೆ ಕುಂಟು ನೆಪವೊಡ್ಡಿ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳುವ ಕ್ರಮ ನಿಲ್ಲಬೇಕು. ಮರಳು ದಕ್ಕೆಗಳನ್ನು ಪುನರಾರಂಭಿಸಬೇಕು. ಸ್ಟೋನ್‌ ಕ್ರಷರ್‌, ಕಲ್ಲು ಗಣಿಗಾರಿಕೆ, ಮರಳುಗಾರಿಕೆ ಸಮರ್ಪಕವಾಗಿ ಎಂದಿನಂತೆ ನಡೆಯಬೇಕು. ಎಂ ಸ್ಯಾಂಡ್‌ ಮತ್ತು ಮಲೇಷಿಯಾ ಮರಳು ಜಿಲ್ಲೆಯ ಕಾರ್ಮಿಕರ ಕೆಲಸವನ್ನು ಕಿತ್ತು ಕೊಳ್ಳುತ್ತಿದ್ದು, ಇದು ನಿಲ್ಲಬೇಕು. ಹೀಗೆ ಜಿಲ್ಲೆಯ ಗಣಿಗಾರಿಕೆ ವಿಚಾರದಲ್ಲಿ ಅನುಭವಿಸುತ್ತಿರುವವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡಬೇಕೆಂಬ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next