ಅರಸೀಕೆರೆ: ನಗರದಲ ಸಾರ್ವಜನಿಕರಿಗೆ ಕೇಬಲ್ ಆಪರೇಟರ್‌ಗಳು ಹಣ ಪಡೆದರೂ ಸಮರ್ಪಕ ವಾಗಿ ಸೇವೆ ನೀಡುತ್ತಿಲ್ಲ.
ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸದಿ ದ್ದರೇ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಹೇಮಂತ್ ಕುಮಾರ್ ಎಚ್ಚರಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೇಂದ್ರ ಸರಕಾರದ ಟ್ರಾಯ್‌ನ ಹೊಸ ನಿಯಮದಿಂದ ಗ್ರಾಹಕರು ಕಳೆದ ಎರಡು ತಿಂಗಳಿ ನಿಂದ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿದ್ದು ತಮಗೆ ಅತ್ಯವಶ್ಯಕವಾದ ಚಾನಲ್ಗಳನ್ನು ಪಡೆ ಯುವಲ್ಲಿ ಕೇಬಲ್ ಆಪರೇಟರ್‌ಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಅಲ್ಲದೇ ದಿನಕ್ಕೆ ಒಂದಲ್ಲಾ ಒಂದು ನಿಯಮಗಳನ್ನು ಹೇಳುತ್ತ ಎಲ್ಲರನ್ನು ದಾರಿ ತಪ್ಪಿಸುತ್ತಿರುವುದು ಖಂಡನೀಯ.
ಗೃಹಿಣಿಯರು, ಹಿರಿಯರು, ಮಕ್ಕಳು ಧಾರ ವಾಹಿ, ಕ್ರೀಡೆ, ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ನೋಡಲಾಗದೇ ದೂರುಗಳನ್ನು ನೀಡುತ್ತಿದ್ದರೂ. ಪರಿಗಣಿಸದ ಸಂಸ್ಥೆಯ ವೈಖರಿ ಯಿಂದ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗು ತ್ತಿದ್ದು, ಕೇಬಲ್ ಆಪರೇಟರ್ ಸಂಸ್ಥೆಯವರು ಯಾವುದೇ ರೀತಿಯಲ್ಲಿ ಸಮಸ್ಯೆ ಯನ್ನು ಬಗೆಹರಿಸಲು ಎಂದು ದೂರುತ್ತಿದ್ದಾರೆ.
ಗ್ರಾಹಕರು ಹಣ ನೀಡಿ ಚಾನಲ್ಗಳನ್ನು ನೀಡುವಂತೆ ಕೇಬಲ್ ಆಪರೇಟರ್ ಅಥವಾ ಸಂಸ್ಥೆಯ ಮಾಲೀಕರಿಗೆ ಕೇಳುತ್ತಿದ್ದರೂ ಹಲವು ದಿನಗಳಿಂದ ನಗರದಲ್ಲಿ ಕೇಬಲ್ ಲಿಂಕ್ ಇಲ್ಲದೇ ಗ್ರಾಹಕರಿಗೆ ತೊಂದರೆಯುಂಟುಮಾಡುತ್ತಿರುವ ಕಾರಣ ಕೇಬಲ್ ಸಂಸ್ಥೆಯವರು ಚಾನಲ್ಗಳನ್ನು ನೀಡುವಲ್ಲಿ ಉಂಟಾಗುತ್ತಿರುವ ಸಮಸ್ಯೆಯನ್ನ ಇನ್ನೆರಡು ದಿನಗಳಲ್ಲಿ ಬಗೆಹರಿಸದಿದ್ದರೇ ಕೇಬಲ್ ವಿತರಕರ ಆಡಳಿತ ವೈಖರಿಯನ್ನು ಖಂಡಿಸಿ ಕಚೇರಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.