Advertisement

ಮಳೆಗಾಗಿ ಅರಣ್ಯ ಸಂಪತ್ತು ರಕ್ಷಿಸಿ:ಡೀಸಿ

03:41 PM Dec 23, 2019 | Team Udayavani |

ದೊಡ್ಡಬಳ್ಳಾಪುರ : ಮಳೆ ಬೀಳಬೇಕಿದ್ದರೆ ಮರಗೀಡಗಳು ಹಾಗೂ ಅರಣ್ಯ ಸಂಪತ್ತು ಹೆಚ್ಚಾಗಿರ ಬೇಕೆಂಬ ಸತ್ಯವನ್ನು ಅರ್ಥಮಾಡಿಕೊಳ್ಳಬೇಕಿದ್ದು, ಪ್ರತಿಯೊಬ್ಬರೂ ಮರಗಳನ್ನು ಬೆಳೆಸುವ, ಮಳೆ ನೀರು ಸಂಗ್ರಹ ಮಾಡುವ ಅಗತ್ಯವಿದೆ ಎಂದು ಬೆಂಗಳೂರು ಗ್ರಾಮಾಂತರ  ಜಿಲ್ಲಾಧಿಕಾರಿ  ಪಿ. ಎನ್‌.ರವೀಂದ್ರ ಹೇಳಿದರು.

Advertisement

ನಗರದ ನಾಗರಕೆರೆ ಏರಿಯ ಮೇಲೆ ಬಾಶೆಟ್ಟಿಹಳ್ಳಿಯಲ್ಲಿ ಎಸ್ಸಿಲಾರ್‌ ಕಂಪನಿಯ ವತಿಯಿಂದ 500 ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮುದ್ರದ ನೀರು ಹೆಪ್ಪುಗಟ್ಟಿ ಮೋಡಗಳಾಗಿ ಮಳೆ ಸುರಿಸುವ ಪ್ರಕ್ರಿಯೆಯಲ್ಲಿ ಅಡೆ ತಡೆಯಾಗಿದೆ. ಇದು ಸರಿಯಾಗಬೇಕಾದರೆ ತುರ್ತಾಗಿ ಮರಗಿಡಗಳನ್ನು ಬೆಳೆಸಬೇಕಿದೆ. ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನದಲ್ಲಿ ಮಳೆ ನೀರು ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡ ಲಾಗುತ್ತಿದೆ. ಜಿಲ್ಲೆಯಲ್ಲಿನ ಎಲ್ಲಾ ವಾಣಿಜ್ಯ ಮಳಿಗೆ ಕಟ್ಟಡಗಳು, ಮನೆಗಳಿಗೆ ಮಳೆ ನೀರು ಸಂಗ್ರಹ ಕಡ್ಡಾಯ ಮಾಡಲಾಗಿದೆ. ರಾಜಸ್ಥಾನದಂತೆಯೇ ಕರ್ನಾಟಕ ಸಹ ಭೀಕರ ಬರಗಾಲಕ್ಕೆ ತುತ್ತಾಗುತ್ತಲೇ ಇದೆ. ಅಂತರ್ಜಲ ತೀವ್ರವಾಗಿ ಕುಸಿಯುತ್ತಲೇ ಇದೆ. ಹೀಗಾಗಿ ಜಿಲ್ಲೆಯಲ್ಲಿನ ನೀಲಗಿರಿ ಮರಗಳ ತೆರವು ಅಭಿಯಾನ ಆರಂಭವಾಗಿದೆ. ಮಳೆ ನೀರು ಅಂತರ್ಜಲ ಸೇರಲು ಮರಗಳೇ ಮುಖ್ಯ ಮಾರ್ಗವಾಗಿವೆ. ಈ ಎಲ್ಲಾ ಕಾರಣಗಳಿಂದ ನಾವುಗಳು ಉಳಿಯಲು ಮರಗಳನ್ನು ಬೆಳೆಸುವ, ಮಳೆ ನೀರು ಸಂಗ್ರಹಿಸುವ ಕೆಲಸವನ್ನು ಮಾಡಲೇ ಬೇಕಿದೆ ಎಂದರು.

ತಾಪಮಾನ ಹೆಚ್ಚುತ್ತಿದೆ: ಪ್ರಗತಿಪರ ಚಿಂತಕ  ಫ್ರೋ ಎಂ.ಜಿ. ಚಂದ್ರಶೇಖರಯ್ಯ ಮಾತನಾಡಿ, ಜಗತ್ತಿನಲ್ಲಿ ಭೂ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಸಹ ಪರಿಸರ ಸಂರಕ್ಷಣೆಯತಂಹ ಕೆಲಸಗಳಿಗೆ ತುರ್ತಾಗಿ ತೊಡಿಗಿಸಿಕೊಳ್ಳಲೇಬೇಕಿದೆ ಇಲ್ಲವಾದರೆ ನಮ್ಮ ಮುಂದಿನ ಪೀಳಿಗೆಯ ಉಳಿವಿಗಿಂತಲು ನಮ್ಮ ಉಳಿವಿಗೆ ಕುತ್ತು ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಣ್ಣಿನ ಫಲವತ್ತತೆಯನ್ನು ಹಣ ನೀಡಿ ಪಡೆಯಲು ಸಾಧ್ಯವಿಲ್ಲ. ಪ್ರಾಮಾಣಿಕ ಕೆಲಸ ಮಾಡಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ವ್ಯವಸ್ಥಾಪಕ ನರಸಿಂಹಮೂರ್ತಿ, ನಗರಸಭೆ ಪೌರಾಯುಕ್ತ ಆರ್‌.ಮಂಜುನಾಥ್‌,ನಗರಸಭೆ ಪರಿಸರ ಎಂಜಿನಿಯರ್‌ ಈರಣ್ಣ, ಬಾಶೆಟ್ಟಿಹಳ್ಳಿ ಕೈಗಾರಿಕ ಒಕ್ಕೂಟದ ಅಧ್ಯಕ್ಷ ತ್ರಿಲೋಕ ಎಸ್‌. ಗುಹಟ್ಟಿ,ಮುಖ್ಯ ಕಾರ್ಯನಿರ್ವಾಹಕ ಆಂಜ ನೇಯಲು, ಎಸ್ಸಿಲಾರ್‌ ಉತ್ಪಾದನಾ ಘಟಕದ ವ್ಯವಸ್ಥಾಪಕ ನಿರ್ದೇಶಕ ಮನೋಜು, ಹಿರಿಯ ನಿರ್ದೇಶಕ ಮಿಲಿಂದ್ಜಾದವ್‌, ಕೆ.ವಿ.ಮಹೇಶ, ಕಾರ್ಖಾನೆ ವ್ಯವಸ್ಥಾಪಕ ಹಿರೆನ್ಮಲ್ಪೆ, ಅಯೋಜಕರಾದ ಮುರುಳಿಕೃಷ್ಣ,ಪ್ರಮೋದ್‌ ಮಲ್ಯ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ಮಂಜುನಾಥ್‌, ಎಲ್‌ಆಡ್‌ಟಿ ಸಿಎಆರ್‌

Advertisement

ಮುಖ್ಯಸ್ಥ ಅವಿನಾಶ್‌, ಪರಿಸರ ಸಿರಿ ಕ್ಷೇಮಾಭವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ರೆಡ್ಡಿ, ಸದಸ್ಯರಾದ ಭಾಸ್ಕರ್‌, ಜಿ.ರಾಜಶೇಖರ್‌, ವಾಸು, ವೆಂಕೋ ಬರಾವ್‌, ರಾಜು, ರೇಣುಕಾ,ಜಗನ್ನಾಥ್‌, ಮೋದಿ ಬಾಯ್ಸ ಅಧ್ಯಕ್ಷ ನರೇಂದ್ರ,ಜಿ.ಯಲ್ಲಪ್ಪ, ಭವಿಷ್ಯ ಎಜುಕೇಶನಲ್‌ ಟ್ರಸ್ಟ್‌ ಅಧ್ಯಕ್ಷ ನಾಗರಾಜ ತಿರುಮಲ ನರ್ಸರಿ ಮಾಲೀಕ ಹನುಮಂತರೆಡ್ಡಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next