Advertisement

ವೇಶ್ಯೆ ಸಂಬೋಧನೆ ಶಿಕ್ಷಾರ್ಹವಲ್ಲ: ಸುಪ್ರೀಂ

11:49 PM Oct 19, 2019 | mahesh |

ಹೊಸದಿಲ್ಲಿ: ಯಾವುದೇ ಮಹಿಳೆಯನ್ನು “ಕಾಲ್‌ ಗರ್ಲ್’ (ವೇಶ್ಯೆ ಪದದ ಸಮಾನಾರ್ಥಕ ಪದ) ಎಂದು ಕರೆಯುವುದು ಆತ್ಮಹತ್ಯೆಗೆ ಪ್ರಚೋದನಾಕಾರಿಯಲ್ಲ. ಹಾಗೆ ಕರೆದರು ಎಂಬ ಕಾರಣಕ್ಕಾಗಿ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಕ್ಕಾಗಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾದ ಐಪಿಸಿ ಸೆಕ್ಷನ್‌ 306ರಡಿ ತಪ್ಪಿತಸ್ಥರೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

ಪಶ್ಚಿಮ ಬಂಗಾಲದಲ್ಲಿ 2004ರಲ್ಲಿ ಯುವತಿಯೊಬ್ಬಳು, ತನ್ನ ಪ್ರಿಯಕರನ ಹೆತ್ತವರು ತನ್ನನ್ನು “ಕಾಲ್‌ ಗರ್ಲ್’ ಎಂದು ಕರೆದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣದ ತೀರ್ಪಿನಲ್ಲಿ ಪಶ್ಚಿಮ ಬಂಗಾಲದ ಕೆಳಹಂತದ ನ್ಯಾಯಾಲಯ, 2008ರಲ್ಲಿ ಹುಡುಗನ ಹೆತ್ತವರನ್ನು ನಿರಪರಾಧಿಗಳೆಂದು ಘೋಷಿಸಿ ಖುಲಾಸೆಗೊಳಿಸಿತ್ತು.ಇದೇ ಮೇ ತಿಂಗಳಲ್ಲಿ ಕಲ್ಕತ್ತಾ ಹೈಕೋರ್ಟ್‌ ಕೂಡ ಹೆತ್ತವರನ್ನು ಖುಲಾಸೆಗೊಳಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯ ಮೂರ್ತಿಗಳಾದ ಇಂದೂ ಮಲ್ಹೋತ್ರಾ ಮತ್ತು ಆರ್‌. ಸುಭಾಷ್‌ ರೆಡ್ಡಿ ಅವರೂ ಕೆಳ ಹಂತದ ನ್ಯಾಯಾಲಯಗಳ ತೀರ್ಪನ್ನು ಎತ್ತಿ ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next