Advertisement

Bengaluru: ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ; ಓರ್ವಸೆರೆ, ಇಬ್ಬರು ಮಹಿಳೆಯರ ರಕ್ಷಣೆ

10:54 AM Jun 01, 2024 | Team Udayavani |

ಬೆಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇರೆಗೆ ಸ್ಪಾ ಮೇಲೆ ದಾಳಿ ನಡೆಸಿರುವ ಇಂದಿರಾನಗರ ಠಾಣೆ ಪೊಲೀಸರು ಒಬ್ಬನನ್ನು ಬಂಧಿಸಿ, ನೆರೆ ರಾಜ್ಯದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

Advertisement

ಸ್ಪಾ ಮ್ಯಾನೇಜರ್‌ ಮಣಿ ಬಂಧಿತ ಆರೋಪಿ.

ಠಾಣಾ ವ್ಯಾಪ್ತಿಯಲ್ಲಿರುವ ದೊಮ್ಮಲೂರು 2ನೇ ಹಂತದಲ್ಲಿರುವ ಸ್ಪಾವೊಂದರಲ್ಲಿ ಹೊರ ರಾಜ್ಯದ ಮಹಿಳೆಯರನ್ನು ಬಳಸಿಕೊಂಡು ಅಕ್ರಮ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಮೇರೆಗೆ ಮೇ 29 ರಂದು ದಾಳಿ ನಡೆಸಿದ ಪೊಲೀಸರು ಸ್ಪಾ ಮ್ಯಾನೇಜರ್‌ ಅನ್ನು ಬಂಧಿಸಿ ಉತ್ತರ ಪ್ರದೇಶ ಮತ್ತು ನಾಗಲ್ಯಾಂಡ್‌ ಮೂಲದ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಸ್ಪಾ ಮ್ಯಾನೇಜರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಪಾನಲ್ಲಿ ಕ್ರಾಸ್‌ ಮಸಾಜ್‌, ಬಾಡಿ ಟು ಬಾಡಿ ಮಸಾಜ್‌ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾಗಿ ತಿಳಿಸಿದ್ದಾನೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next