Advertisement

ವೇಶ್ಯಾವಾಟಿಕೆ: ನಾಲ್ವರ ಬಂಧನ; ಇಬ್ಬರು ಯುವತಿಯರ ರಕ್ಷಣೆ

09:17 AM Oct 15, 2017 | |

ಮಂಗಳೂರು: ಕರಂಗಲ್ಪಾಡಿಯ ದಿವ್ಯಮಹಲ್‌ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯ 502ನೇ ನಂಬರ್‌ನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಇಬ್ಬರು ಯುವತಿಯರನ್ನುರಕ್ಷಿಸಿದ್ದಾರೆ.

Advertisement

 ಬಂಟ್ವಾಳ ಕಾವಳಪಡೂರು ಗ್ರಾಮದ ವಗ್ಗ ಮಂಘಾಜೆ ಮನೆಯ ಸಂತೋಷ್‌ ಕುಮಾರ್‌ (32), ಬಿಜೈ ಕಾಪಿಕಾಡ್‌ ಬಾಳೆಬೈಲು ರಸ್ತೆಯ ದೀಪಕ್‌ (26), ತೊಕ್ಕೊಟ್ಟು ಪೆರ್ಮನ್ನೂರು ಬಬ್ಬುಕಟ್ಟೆಯ ನವೀನ್‌ (40) ಹಾಗೂ ಪಿಂಪ್‌ ದಾವಣಗೆರೆಯ ಆಶಾ ಜಿ. (23) ಬಂಧಿತರು. ಆರೋಪಿಗಳಿಂದ 31,500 ರೂ., 7 ಮೊಬೈಲ್‌ ಫೋನ್‌, 2 ಬೈಕ್‌ ಸೇರಿದಂತೆ ಒಟ್ಟು 2,06,100 ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.  ಆರೋಪಿ ಆಶಾ ಈ ಅಪಾರ್ಟ್‌ಮೆಂಟ್ ನ್ನು ಬಾಡಿಗೆಗೆ ಪಡೆದು ಯುವತಿಯರನ್ನು ಇಟ್ಟು ಕೊಂಡು ಸಂತೋಷ್‌ನ ಸಹಾಯದೊಂದಿಗೆ ವೇಶ್ಯಾವಾಟಿಕೆ ದಂಧೆಗೆ ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ.  ವೇಶ್ಯಾವಾಟಿಕೆ ವೃತ್ತಿ ನಡೆಸುತ್ತಿದ್ದ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ.  ನಾಲ್ವರು ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಕದ್ರಿ ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದೆ. ಪೊಲೀಸ್‌ ಆಯುಕ್ತ ಟಿ.ಆರ್‌.ಸುರೇಶ್‌ ಅವರ ಆದೇಶದಂತೆ ಡಿ.ಸಿ.ಪಿ.ಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್‌ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬಂದಿ ಈ ಕಾರ್ಯಾಚರಣೆಯಲ್ಲಿ  ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next