Advertisement

ಮಹಾರಾಷ್ಟ್ರ ಹಾಗೂ ಕರ್ನಾಟಕಗಳ ಅಸಮತೋಲನಗಳನ್ನು ಮರೆಮಾಚುವ ಸಮೃದ್ಧಿ : ಅಧ್ಯಯನ

05:38 PM Feb 27, 2021 | Team Udayavani |

ಕೋವಿಡ್ 19 ಸಾಂಕ್ರಾಮಿಕ ಪರಿಸ್ಥಿತಿ ಇಡೀ ವಿಶ್ವವನ್ನೇ ಅಡಿಮೇಲಾಗಿ ಮಾಡಿದೆ. ಅದು ಜಗತ್ತಿನ ಸರ್ವತೋಮುಖ ಅಭಿವೃದ್ಧಿಯ ಮೇಲೂ ಕೂಡ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಿದೆ.

Advertisement

ಕೋವಿಡ್ 19 ಪರಿಸ್ಥಿತಿ ಆರ್ಥಿಕ ವಲಯದ ಮೇಲೆ ದೊಡ್ಡ ಹೊಡೆತವನ್ನು ನೀಡಿದೆ. ಗ್ರಾಮೀಣ ಮಟ್ಟದಲ್ಲಿನ ಅಭಿವೃದ್ಧಿಯ ಅಸಮತೋಲಕ್ಕೂ ಕಾರಣವಾಗಿದೆ.

ದೊಡ್ಡ ಕೈಗಾರಿಕಾ ವಲಯಗಳನ್ನು ಹೊಂದಿದ ರಾಜ್ಯಗಳು ಅತ್ಯಂತ ಕೆಳ ಮಟ್ಟಕ್ಕೆ ತಲುಪಿದ್ದ ಆರ್ಥಿಕ ಸ್ಥಿತಿಯಿಂದ ಮತ್ತೆ ನಿಧಾನಕ್ಕೆ ಚೇತರಿಸಿಕೊಳ್ಳಲಾರಂಭಿಸಿದೆ. ಈ ಪರಿಸ್ಥಿತಿಯಲ್ಲಿ ಅದೇ ಹಳೆಯ ತುಕ್ಕು ಹಿಡಿದ ಅಭಿವೃದ್ಧಿ ಮಾದರಿಗಳನ್ನು ಈಗಲೂ ಪಾಲಿಸಲಾಗುವುದಿಲ್ಲ. ಅದು ಈಗಿನ ಪರಸ್ಥಿತಿಗೆ ಅನ್ವಯವೂ ಆಗುವುದಿಲ್ಲವೆಂದು ಸರ್ಕಾರಗಳು ಗಮನದಲ್ಲಿಟ್ಟುಕೊಳ್ಳಬೇಕು.

ದೇಶದ ಶ್ರೀಮಂತ ರಾಜ್ಯಗಳೆಂದು ಕರೆಸಿಕೊಳ್ಳುವ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಹಾಗೂ ತಮಿಳುನಾಡುಗಳು ಆರ್ಥಿಕ ಬೆಳವಣಿಗೆಗೆ ಉತ್ಪಾದನಾ ವಲಯ ಹಾಗೂ ಹೈಟೆಕ್ ಸರ್ವೀಸ್ ಗಳಿಗೆ ಸಂಪೂರ್ಣವಾಗಿ ಅವಲಂಭಿಸಿವೆ, ಅಲ್ಲಿ ಕೃಷಿಯು ಕೇವಲ ಶೇಕಡಾ 10–15 ರಷ್ಟು ಮಾತ್ರ ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ ಎಂದು ಇತ್ತೀಚೆಗಿನ ಒಂದು ಅಧ್ಯಯನ ತಿಳಿಸಿದೆ.

ಓದಿ : ‘ಫೇಕ್ ಇಮೇಲ್ ಪ್ರಕರಣ…ಪೊಲೀಸ್ ಠಾಣೆಗೆ ನಟ ಹೃತಿಕ್ ಹಾಜರು   

Advertisement

ಆರ್ಥಿಕ ಅಸಮಾನತೆಯ ಬಗ್ಗೆ ಯಾವುದೇ ಚರ್ಚೆಯನ್ನು ಸಾಮಾನ್ಯವಾಗಿ ಎರಡು ಅಂಶಗಳಿಗೆ ಸೀಮಿತಗೊಳಿಸಲಾಗುತ್ತದೆ 1) ಪ್ರಮುಖ ಭಾರತೀಯ ರಾಜ್ಯಗಳಲ್ಲಿ ತಲಾ ಆದಾಯದ ಹೋಲಿಕೆ, ಮತ್ತು 2) ರಾಜ್ಯದ ಆರ್ಥಿಕತೆಯಲ್ಲಿ ವಲಯಗಳ ಕೊಡುಗೆ.

ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ರಾಜ್ಯ ದೇಶೀಯ ಉತ್ಪನ್ನ (ಎಸ್‌ ಡಿ ಪಿ) ಮತ್ತು ವಿವಿಧ ವಲಯಗಳು (ಕೃಷಿ, ಕೈಗಾರಿಕೆ ಮತ್ತು ಸೇವೆಗಳಂತಹ) ಸುಲಭವಾಗಿ ಲಭ್ಯವಾಗುವುದು. ಜಿಲ್ಲಾ ದೇಶೀಯ ಉತ್ಪನ್ನ (ಡಿಡಿಪಿ) 2000 ರ ದಶಕದ ಅಂತ್ಯದಿಂದ ಮಾತ್ರ ಲಭ್ಯವಾಗತೊಡಗಿತು. ಅಲ್ಲದೆ, ರಾಜ್ಯ ಸರ್ಕಾರಗಳ ಸ್ಟ್ಯಾಟಿಸ್ಟಿಕಲ್ ಏಜೆನ್ಸಿಗಳು ಬಳಸುವ ವಿಭಿನ್ನ ವಿಧಾನಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳಾದ್ಯಂತ ಹೋಲಿಕೆ ಪ್ರಶ್ನಾರ್ಹವಾಗಿದೆ.

ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿನ ಅರ್ಥಶಾಸ್ತ್ರ ಮತ್ತು ಸ್ಟ್ಯಾಟಿಸ್ಟಿಕ್ಸ್(ಅಂಕಿ ಅಂಶ) ಇಲಾಖೆಯಿಂದ (ಡಿಇಎಸ್) ಡಿಡಿಪಿ ಡೇಟಾವನ್ನು ತೆಗೆದುಕೊಳ್ಳಲಾಗಿದ್ದು, ಗುಜರಾತ್‌ ನ ಡಿಡಿಪಿ ದತ್ತಾಂಶದ ಕೊರತೆಯು ಆ ರಾಜ್ಯವನ್ನು ವಿಶ್ಲೇಷಿಸುವುದಕ್ಕೆ ಅಡಿಯನ್ನುಂಟು ಮಾಡಿದೆ.

ಈ ಅಧ್ಯನಕ್ಕೆ ಮೂರು ವರ್ಷಗಳ ಡೇಟಾವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.  1999-00, 2004-05, ಮತ್ತು 2009-10. ಇತ್ತೀಚಿನ ವರ್ಷಗಳ ಡೇಟಾವನ್ನು ರಾಜ್ಯಗಳು ಇನ್ನೂ ಸಂಗ್ರಹಿಸಿ ಸಾರ್ವಜನಿಕ ವಲಯದಲ್ಲಿ ಇರಿಸಿಲ್ಲ. ಹೆಚ್ಚುವರಿಯಾಗಿ, ರಾಜ್ಯಗಳ ಸಂಪನ್ಮೂಲ ಲಭ್ಯತೆಗೆ ಅನುಗುಣವಾಗಿ, ಡಿಡಿಪಿ ಡೇಟಾವನ್ನು ಸಾಮಾನ್ಯವಾಗಿ ಸಮಯದ ವಿಳಂಬದೊಂದಿಗೆ ಸಂಕಲಿಸಲಾಗುತ್ತದೆ. ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ ಸಿದ್ಧಪಡಿಸಿದ ಇತ್ತೀಚಿನ ವರದಿಯಲ್ಲಿ ಈ ವಿಳಂಬವನ್ನು ಎತ್ತಿ ತೋರಿಸಲಾಗಿದೆ. ಅದೇನೇ ಇದ್ದರೂ, ಈ ಲಭ್ಯವಿರುವ ಡಿಡಿಪಿ ಅಂದಾಜುಗಳ ಅವಲೋಕನಗಳು ಕಾಲಾನಂತರದಲ್ಲಿ ನಿರಂತರವಾಗಿ ಕಂಡುಬರುವ ಪ್ರವೃತ್ತಿಯನ್ನು ತಿಳಿಸುತ್ತವೆ.

ಓದಿ :  ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ಮಾದರಿಯಲ್ಲೇ ಕೃಷಿ ವಿವಿ ಪರಿವರ್ತನೆ:ಅಶ್ವತ್ಥನಾರಾಯಣ

ದಿ ಪ್ರಿಂಟ್ ಸುದ್ದಿ ಸಂಸ್ಥೆಯಿಂದ ಇತ್ತೀಚಿಗೆ ಪ್ರಕಟಗೊಂಡ ಲೇಖನವೊಂದು ಈ ಸಮೃದ್ಧ ರಾಜ್ಯಗಳ ಆರ್ಥಿಕತೆ ಮತ್ತು ವಲಯ ಸಂಯೋಜನೆಯನ್ನು ಅನ್ವೇಷಿಸಲಾಗಿದೆ. ಅದಕ್ಕೆ ಭೌಗೋಳಿಕ ಆಯಾಮವನ್ನು ತರಲು ಸಮೃದ್ಧ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕ ಒಟ್ಟಾರೆ ರಾಜ್ಯ ಮಟ್ಟದ ಒಟ್ಟು ದೇಶೀಯ ಉತ್ಪನ್ನದ (ಜಿಎಸ್‌ಡಿಪಿ) ದೃಷ್ಟಿಯಿಂದ ಉತ್ತಮ ಪ್ರದರ್ಶನ ನೀಡುತ್ತವೆ. ಆದಾಗ್ಯೂ, ಈ ರಾಜ್ಯಗಳಲ್ಲಿ ಅಭಿವೃದ್ಧಿ ಸಮಾನವಾಗಿ ಆಗುವುದಿಲ್ಲ ಎನ್ನುವುದನ್ನು ಅಧ್ಯಯನ ಹೇಳುತ್ತದೆ.

ಈ ಗ್ರಾಫ್‌ ಗಳ ಮೂಲಕ ಕಂಡುಬರುವ ಅಸಮಾನತೆಯು ವಾಸ್ತವವಾಗಿ  ಅಂದಾಜಿನ ಲೆಕ್ಕಚಾರವಾಗಿದೆ. ಡಿಡಿಪಿಯನ್ನು ಲೆಕ್ಕಾಚಾರ ಮಾಡುವ ವಿಧಾನವು ರಾಜ್ಯಗಳಲ್ಲಿ ಜಿಲ್ಲೆಗಳಲ್ಲಿ ಸಮಾನ ಕಾರ್ಮಿಕ ಉತ್ಪಾದಕತೆಯನ್ನು ನಿಯೋಜಿಸುತ್ತದೆ. ಸೇವಾ ವಲಯದಲ್ಲಿ ಇದು ವಿಶೇಷವಾಗಿ ಸಮಸ್ಯಾತ್ಮಕವಾಗಿದೆ, ಅಲ್ಲಿ ಒಟ್ಟುಗೂಡಿಸುವಿಕೆಯ ಪರಿಣಾಮಗಳು ಇತರ ಕ್ಷೇತ್ರಗಳಿಗಿಂತ ಹೆಚ್ಚು ಮುಖ್ಯವಾಗಿರುತ್ತದೆ.

ಮಹಾರಾಷ್ಟ್ರ ಹಾಗೂ ಕರ್ನಾಟಕದ ಅಸಮತೋಲಿತ ಮಾದರಿ :

ಮಹಾರಾಷ್ಟ್ರದಲ್ಲಿ ಮುಂಬೈ, ರಾಜ್ಯದ ಆರ್ಥಿಕತೆಯಲ್ಲಿ ಅತಿದೊಡ್ಡ ಪಾಲನ್ನು ಹೊಂದಿದೆ, ಇದು ರಾಜ್ಯದ ಉತ್ಪಾದನೆಯ ಐದನೇ ಒಂದು ಭಾಗದಷ್ಟು ಕೊಡುಗೆ ನೀಡುತ್ತದೆ. ಕುತೂಹಲಕಾರಿಯಾಗಿ, ಮಹಾರಾಷ್ಟ್ರದ ಟಾಪ್ ಮೂರು ಜಿಲ್ಲೆಗಳಾದ ಮುಂಬೈ, ಥಾಣೆ ಮತ್ತು ಪುಣೆ ರಾಜ್ಯದ ಒಟ್ಟು ಆರ್ಥಿಕತೆಯ ಅರ್ಧದಷ್ಟು ಕೊಡುಗೆ ನೀಡುತ್ತವೆ. ಬಹಳ ಪ್ರಮುಖವಗಿ ನಾವು ಇಲ್ಲಿ ಗಮನಿಸಬೇಕಾದದ್ದೇನೆಂದರೇ, ಆರ್ಥಿಕ ಚಟುವಟಿಕೆಗಳು ರಾಜ್ಯದ ಪಶ್ಚಿಮ ಪ್ರದೇಶದಲ್ಲಿ ಕೇಂದ್ರೀಕೃತವಾಗಿವೆ. ಇಲ್ಲಿ ಅಧ್ಯಯನಕ್ಕೆ ತೆಗೆದುಕೊಂಡ ಹತ್ತು ವರ್ಷಗಳ ಅವಧಿಯಲ್ಲಿ ಇದೆ ಪ್ರವೃತ್ತಿ ಮುಂದುವರೆದಿದೆ. ಈ ಮೂರು ಜಿಲ್ಲೆಗಳು ಭೌಗೋಳಿಕವಾಗಿ ಬಹುತೇಕ ಸಾಮ್ಯತೆಯನ್ನು ಹೊಂದಿವೆ ಮತ್ತು ಪಶ್ಚಿಮ ಕರಾವಳಿಯಲ್ಲಿದೆ ಎಂಬುದನ್ನು ಇಲ್ಲಿ ಗಮನಿಸಬೇಕು. ರಾಜ್ಯದ ಪೂರ್ವ ಭಾಗದಲ್ಲಿರುವ ಪ್ರಮುಖ ಜಿಲ್ಲೆ ನಾಗ್ಪುರವು ಮಹಾರಾಷ್ಟ್ರದ ಆದಾಯಕ್ಕೆ ಕೇವಲ 5 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ ಎನ್ನುವುದು ಈ ಕೆಳಗಿನ ಗ್ರಾಫ್ ತಿಳಿಸುತ್ತದೆ.

ಬೆಂಗಳೂರು ನಗರ 1999-00 ರಲ್ಲಿ ರಾಜ್ಯದ ಆದಾಯದ ಐದನೇ ಒಂದು ಭಾಗದ ಕೊಡುಗೆ ನೀಡಿದೆ. ಕರ್ನಾಟಕದ ಉತ್ತರಭಾಗದ ಗಡಿ ಭಾಗ ಬೆಳಗಾವಿ ಎರಡನೇ ಸ್ಥಾನದಲ್ಲಿದೆ, ಇದು ರಾಜ್ಯದ ಆರ್ಥಿಕತೆಯಲ್ಲಿ ಕೇವಲ 5 ಪ್ರತಿಶತದಷ್ಟು ಕೊಡುಗೆ ನೀಡಿದೆ. ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ಬೆಂಗಳೂರು ನಗರದ ಪಾಲು 2009-10ರಲ್ಲಿ ಮೂರನೇ ಒಂದು ಭಾಗಕ್ಕೆ ಏರಿದೆ. ಕರ್ನಾಟಕದ ಆದಾಯದ ಬೆಳವಣಿಗೆಯು ಮುಖ್ಯವಾಗಿ ಅದರ ರಾಜಧಾನಿ ಜಿಲ್ಲೆಯ ಕಾರ್ಯಕ್ಷಮತೆಯಿಂದಾಗಿ, ಮತ್ತು ಈ ಅವಧಿಯಲ್ಲಿ ಐಟಿ ಆಧಾರಿತ ಸೇವಾ ವಲಯವು ಪ್ರವರ್ಧಮಾನಕ್ಕೆ ಬಂದಿದೆ ಎಂದು ಈ ವರದಿ ಸೂಚಿಸುತ್ತದೆ.

ತಮಿಳುನಾಡಿನ ಸಮತೋಲಿತ ಬೆಳವಣಿಗೆ :

ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ಹೋಲಿಸಿದರೇ, ತಮಿಳುನಾಡು ಅನುಸರಿಸಿದ ಅಭಿವೃದ್ಧಿಯ ಹಾದಿ ಸಮತೋಲನವನ್ನು ಹೊಂದಿದೆ ಎಂದು ಸೂಚಿಸುತ್ತದೆ. ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಗಳಾದ ಚೆನ್ನೈ ಹಾಗೂ ಕೋಯಮುತ್ತೂರ್ ನಿಂದ ರಾಜ್ಯದ ಆರ್ಥಿಕತೆಗೆ ಐದನೇ ಒಂದು ಭಾಗ ಕೊಡುಗೆ ನೀಡಿದೆ. ತಮಿಳುನಾಡಿನ ಆರ್ಥಿಕ ಸಮತೋಲನದ ಬೆಳವಣಿಗೆಯಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೇ, ರಾಜ್ಯದ ರಾಜಧಾನಿ ಚೆನ್ನೈ ಪೂರ್ವ ಭಾಗದಲ್ಲಿದ್ದರೇ, ಕೋಯಮುತ್ತೂರು ರಾಜ್ಯದ ಪಶ್ಚಿಮ ಭಾಗದಲ್ಲಿದೆ. ಈ ಎರಡು ಜಿಲ್ಲೆಗಳ ಎರಡು ಆರ್ಥಿಕ ವರ್ಷಗಳನ್ನು ಗಮನಿಸಿದರೇ, ಸಂಪೂರ್ಣ ವಿರುದ್ಧವಾಗಿರುವುದನ್ನು ನಾವು ಗಮನಿಸಬಹುದಾಗಿದೆ. ತಿರುವಳ್ಳೂರ್  ಹಾಗೂ ಕಾಂಚಿವರಮ್ ಜಿಲ್ಲೆಗಳನ್ನು ಗಮನಿಸಿದರೇ ಬೆಳವಣಿಗೆಯ ಲಕ್ಷಣಗಳು ಕಾಣಿಸುತ್ತವೆ. ಮತ್ತು ಅವುಗಳು ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಗಳು ಎಂದು ಸೂಚಿಸುತ್ತದೆ.

ಇದು ಹೇಗೆ.. ಸರ್ಕಾರ ಏನು ಮಾಡಬಹುದು..?

ಮಹಾರಾಷ್ಟ್ರ ಹಾಗೂ ಕರ್ನಾಟಕವನ್ನು ನಾವು ಗಮನಿಸಿದಾಗ, ಕೇವಲ ರಾಜ್ಯದ ರಾಜಧಾನಿ ಹಾಗೂ ಪ್ರಮುಖ ನಗರ ಪ್ರದೇಶಗಳಲ್ಲಿ ಮಾತ್ರ ಆರ್ಥಿಕ ಬೆಳವಣಿಗೆಯನ್ನು ಕಾಣಬಹುದು. ಬಹಳ ಪ್ರಮುಖವಾಗಿ ನಾವು ಗ್ರಾಫ್ ನಲ್ಲಿ ಗಮನಿಸಿದ ಹಾಗೆಯೇ, ಕಾಲಾಂತರದ ಬೆಳವಣಿಗೆಯಲ್ಲೂ ಕೂಡ ಅಸಮತೋಲನ ಮುಂದುವರಿದಿದ್ದು ಕಾಣಬಹುದು. ಭೌಗೋಳಿಕವಾಗಿ ಅಸಮತೋಲಿತ ಅಭಿವೃದ್ಧಿಯೆಂದು ನಮಗೆ ಸೂಚಿಸುತ್ತದೆ. ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ಹೋಲಿಸಿದರೇ, ಇಲ್ಲಿ ಸ್ವಲ್ಪ ಭಿನ್ನ ಸ್ಥಿತಿಯನ್ನು ಗಮನಿಸಬಹುದು ಮತ್ತು ಅಂತರ್ ಜಿಲ್ಲಾ ಅಸಮತೋಲನವನ್ನು ಉತ್ತಮವಾಗಿ ನಿರ್ವಹಿಸಿದ್ದನ್ನು ಗಮನಿಸಬಹುದಾಗಿದೆ.

ಓದಿ : ಮತ್ತೆ ವನಿತೆಯರ ಕ್ರಿಕೆಟ್: ದ.ಆಫ್ರಿಕಾ ವಿರುದ್ಧದ ಏಕದಿನ, ಟಿ20 ಸರಣಿಗೆ ಭಾರತೀಯ ತಂಡ ಪ್ರಕಟ

ಈ ಬೆಳವಣಿಗೆಗಳು ಶ್ರೀಮಂತ ರಾಜ್ಯಗಳೆಂದು ಕರೆಸಿಕೊಳ್ಳುತ್ತಿದ್ದ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ತಮಿಳುನಾಡಿನಲ್ಲಿರುವ ಗ್ರಾಮೀಣ ಭಾಗಗಳಲ್ಲಿನ ಆರ್ಥಿಕ ಬೆಳವಣಿಗೆಯಲ್ಲಿ ಅಸಮತೋಲನವಿರುವುದಕ್ಕೆ ಸಾಕ್ಷಿಯಾಗಿ ನಮಗೆ ಕಾಣಿಸುತ್ತದೆ. ರಾಜಧಾನಿ ಹಾಗೂ ಪಟ್ಟಣ ಪ್ರದೇಶಗಳು ಮಾತ್ರ ಆರ್ಥಿಕ ಅಭಿವೃದ್ಧಿಯ ಕೇಂದ್ರವಾಗಿವೆ ಎನ್ನುವುದನ್ನು ಸೂಚಿಸುತ್ತದೆ. ಎಲ್ಲಾ ಜಿಲ್ಲೆಗಳು ಅಥವಾ ಎಲ್ಲಾ ಪ್ರದೇಶಗಳು ಸಮ ಸ್ಥಿತಿಯ ಬೆಳವಣಿಗೆಯನ್ನು ಹೊಂದುತ್ತಿವೆಯೇ ಮತ್ತು ಅಲ್ಲಿನ ಪ್ರಗತಿಯನ್ನು ಪರಿಶೀಲಿಸಲು ಸರ್ಕಾರಗಳು ಮಧ್ಯ ಪ್ರವೇಶಿಸಬೇಕು. ಇಲ್ಲವಾದಲ್ಲಿ, ತುಲನಾತ್ಮಕವಾಗಿ ಅಭಿವೃದ್ಧಿ ಹೊಂದದ ಪ್ರದೇಶಗಳು ಎಲ್ಲಾ ರೀತಿಯಲ್ಲಿಯೂ ಪ್ರತ್ಯೇಕತೆಯನ್ನು ಕಾಣುವ ಸಾಧ್ಯತೆಯೂ ಕೂಡ ಹೆಚ್ಚಿರುತ್ತದೆ.  ಇಂತಹ ಪ್ರದೇಶಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ತೀವ್ರಗೊಳ್ಳುವ ಮಟ್ಟಿಗೆ ಪರಿಸ್ಥಿತಿ ಉಲ್ಬಣಗೊಳ್ಳಬಹುದು, ಉದಾಹರಣೆಗೆ, ಪೂರ್ವ ಮಹಾರಾಷ್ಟ್ರದ ವಿದರ್ಭದ ಬೇಡಿಕೆ ಹಾಗೂ ಕರ್ನಾಟಕದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗಳನ್ನು ಗಮನಿಸಬಹುದು.

ಒಂದು ತುಲನಾತ್ಮಕ ಲಾಭಾಂಶಗಳ ಆಧಾರದ ಮೇಲೆ ರಾಜ್ಯದ ಎಲ್ಲಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ದೇಶಿಯ ರಫ್ತಿಗಾಗಿ ಸರಕುಗಳನ್ನು ಉತ್ಪಾದಿಸುವುದು ಇದಕ್ಕೆ ಪರಿಹಾರವಾಗಬಹುದು. ಭಾರತದಂತಹ ದೇಶದಲ್ಲಿ ಉತ್ಪಾದನಾ ವಲಯಕ್ಕೆ ಹೆಚ್ಚಿನ ಆರ್ಥಿಕ ಶಕ್ತಿಯನ್ನು ಬಳಸುವುದರಿಂದ ಇದು ದೂರದ ಕನಸಲ್ಲ.

ಮೂಲ : ವಿಕಾಶ್ ವೈಭವ್ ಸಹಾಯಕ ಪ್ರಾಧ್ಯಾಪಕರು, ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್, ಬೆಂಗಳೂರು. 

ವರುಣ್ ಕುಮಾರ್ ದಾಸ್ ಸಹಾಯಕ ಪ್ರಾಧ್ಯಾಪಕ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ .

ಕನ್ನಡಕ್ಕೆ : ಶ್ರೀರಾಜ್ ವಕ್ವಾಡಿ

ಓದಿ : ಹಿಂದೂ ಧರ್ಮ- ಹಿಂದುತ್ವ ಬೇರೆ ಬೇರೆ, ಅಡಿಯಾಳಾಗಿ ಬದುಕಬೇಕೆಂಬುದು ಹಿಂದುತ್ವ: ಯತೀಂದ್ರ

 

Advertisement

Udayavani is now on Telegram. Click here to join our channel and stay updated with the latest news.

Next