Advertisement
ಚೆನ್ನಯ್ಯನಕೋಟೆಯಲ್ಲಿ ಈಚೆಗೆ ಗ್ರಾ.ಪಂ.ವತಿಯಿಂದ ಜರುಗಿದ ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ಒಣ ಕಸ ವಿಂಗಡಣಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಭಾರತವನ್ನು ಕಸಮುಕ್ತ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ವತ್ಛ ಭಾರತ್ ಮಿಷನ್ ಮೂಲಕ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ತಲಾ 15 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ.ಇದರ ಸದ್ಬಳಕೆಯಾಗಬೇಕು.ಗ್ರಾಮಸ್ಥರು ಹಸಿ ತ್ಯಾಜ್ಯ ಹಾಗೂ ಒಣ ಕಸವನ್ನು ವಿಂಗಡಿಸಿ ನೀಡುವಂತೆ ಜಾಗೃತಿ ಮೂಡಿಸಬೇಕಾಗಿದೆ.ಇಲ್ಲವೆ ದಂಡ ವಿಧಿಸುವ ಮೂಲಕ ಶಿಸ್ತುಕ್ರಮ ಜರುಗಬೇಕು. ಚೆನ್ನಯ್ಯನಕೋಟೆ ಗ್ರಾಮ ಕಸಮುಕ್ತ ಗ್ರಾಮವಾಗಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರವೂ ಅಗತ್ಯ ಎಂದು ನುಡಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಎ.ಷಣ್ಮುಗ ಮಾತನಾಡಿ, ವಿರಾಜಪೇಟೆ ತಾ.ಪಂ.ವ್ಯಾಪ್ತಿಗೆ ಒಳಪಡುವ ಸುಮಾರು 38 ಗ್ರಾ.ಪಂ.ಗಳಿಗೂ ಸ್ವತ್ಛ ಭಾರತ್ ಮಿಷನ್ ಯೋಜನೆಯನ್ವಯ ತಲಾ 15 ಲಕ್ಷ ರೂ.ಬಿಡುಗಡೆ ಮಾಡಲಾಗಿದೆ. ಗ್ರಾಮಸ್ಥರು ಫ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಕಸವನ್ನು ವಿಂಗಡಿಸಿ ನೀಡುವಂತಾಗಬೇಕು ಎಂದು ಹೇಳಿದರು. ಚೆನ್ನಯ್ಯನಕೋಟೆ ಗೆ ರೂ.15 ಲಕ್ಷದಲ್ಲಿ ಮೊದಲ ಕಂತು 7.50 ಲಕ್ಷ ಬಿಡುಗಡೆಯಾಗಿದ್ದು, 4 ಲಕ್ಷ ವೆಚ್ಚದಲ್ಲಿ ಘಟಕ ನಿರ್ಮಾಣ ಹಾಗೂ 3.70 ಲಕ್ಷ ಮೊತ್ತದ ವಾಹನ ಖರೀದಿಸಲಾಗಿದೆ. ವೈಜ್ಞಾನಿಕ ಕಸ ವಿಲೇವಾರಿ ಕ್ರಮ ಕೈಗೊಳ್ಳಲಾಗುವದು ಎಂದು ಗ್ರಾ.ಪಂ.ಅಧ್ಯಕ್ಷೆ ಗೀತಾ ಅವರು ತಿಳಿಸಿದ್ದಾರೆ.