Advertisement
ಇದೇ ವೇಳೆ ಸರಕು ಸಾಗಿಸುವ ಬೃಹತ್ ವಿಮಾನಗಳು ಇಳಿಯಲು ಅವಕಾಶ ಕಲ್ಪಿಸುವ ರನ್ ವೇ ಉನ್ನತೀಕರಣಕ್ಕೆ 90 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ಮಾಜಿ ಸಚಿವರೂ ಆಗಿರುವ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.
Related Articles
Advertisement
ಈ ಪ್ರಸ್ತಾವನೆ ಸಲ್ಲಿಸಿ ಕೇಂದ್ರ-ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ನನ್ನ ಕನಸಿನ ವಿಮಾನ ನಿಲ್ದಾಣ ಯೋಜನೆ ಮಾಡಿಯೇ ತೀರುತ್ತೇನೆ ಎಂದರು. ಈಗಾಗಲೇ 220 ಕೋಟಿ ರೂ. ವೆಚ್ಚದಲ್ಲಿ ಎರಡು ಹಂತದ ಕಾಮವಾರಿ ರೂಪಿಸಿದ್ದು, ಮೊದಲ ಹಂತದಲ್ಲಿ 905 ಕೋಟಿ ರೂ. ಕಾಮಗಾರಿ ಭರದಿಂದ ನಡೆದಿದೆ. ಕಾಮಗಾರಿ ಗುತ್ತಿಗೆ ಪಡೆದಿರುವ ಆಲೂರ ಹಸರಿನ ಗುತ್ತಿಗೆದಾರರು ಹಗಲು-ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದು, 11 ತಿಂಗಳ ಕಾಲಮಿತಿಯ ಕಾಮಗಾರಿ 10 ತಿಂಗಳಲ್ಲೇ ಮುಗಿಸುವ ನಿರೀಕ್ಷೆ ಇದೆ ಎಂದರು. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೆಚ್ಚಿನ ಹಣ ನೀಡಿ, ವಿಜಯಪುರ ವಿಮಾನ ನಿಲ್ದಾಣಕ್ಕೆ ಕಡಿಮೆ ಅನುದಾನದ ಕೊಟ್ಟು ತಾರತಮ್ಯ ಮಾಡಿದ್ದಾರೆ ಎಂಬ ವಾದ ಸರಿಯಲ್ಲ.
ಯಾವುದೇ ವ್ಯಕ್ತಿ ಅಧಿಕಾರಕ್ಕೆ ಬಂದಾಗ ತನ್ನ ತವರಿಗೆ ಹೆಚ್ಚಿನ ಆದ್ಯತೆಯ ಪ್ರೀತಿ ತೋರುವುದು ಸಾಮಾನ್ಯ. ಹಾಗಂತ ಇದನ್ನು ಅನ್ಯಾಯ ಮಾಡಿದ್ದಾರೆ ಎನ್ನಲಾದು. ಇಷ್ಟಕ್ಕೂ ಶಿವಮೊಗ್ಗಕ್ಕೂ, ವಿಜಯಪುರಕ್ಕೂ ಹೋಲಿಕೆ ಮಾಡದೇ ನಮಗೂ ಹೆಚ್ಚಿನ ಅನುದಾನ ನೀಡಿ ಎಂದು ಆಗ್ರಹಿಸುವುದು ಸೂಕ್ತ. ನಾನು ಇದನ್ನೇ ಮಾಡಲು ಹೊರಟಿದ್ದೇನೆ ಎಂದು ಸಮರ್ಥಿಸಿದರು. ಮೂಡಾ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರು, ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಘಟಕಾಂಬಳೆ, ಲೋಕೋಪಯೋಗಿ ಎಎ ಬಿ.ಬಿ. ಪಾಟೀಲ, ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ ಇದ್ದರು.