Advertisement
ಶಾಸಕ ಲಾಲಾಜಿ ಮೆಂಡನ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಉಡುಪಿ ತಾಲೂಕು ಮಟ್ಟದ ತ್ತೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಅವರು ಮಾತನಾಡಿದರು. ಪ್ರಸ್ತಾವನೆ ಕಳುಹಿಸಲು ವಿಳಂಬ ಮಾಡಿದರೆ ರೈತರು ತೊಂದರೆ ಅನುಭವಿಸಲಿದ್ದಾರೆ. ಇದಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ತ್ವರಿತಗತಿಯಲ್ಲಿ ಕೆಲಸಕಾರ್ಯಗಳನ್ನು ನಿರ್ವಹಿಸಬೇಕು ಎಂದು ಭಟ್ ಹೇಳಿದರು.
Related Articles
Advertisement
ಮಳೆಗಾಲಕ್ಕೆ ಸಿದ್ಧತೆ: ಸೂಚನೆ
ಮಳೆಗಾಲದ ಸಂದರ್ಬದಲ್ಲಿ ಉಂಟಾಗಲುವ ಅವಘಡಗಳನ್ನು ತಪ್ಪಿಸಲು ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಸಿಬಂದಿ ಈಗಿನಿಂದಲೇ ಕಾರ್ಯ ಪ್ರವೃತ್ತರಾಗಬೇಕು. ಅಪಾಯಕಾರಿಯೆಂದು ಕಂಡು ಬರುವ ಮರಗಳು, ಗೆಲ್ಲುಗಳನ್ನು ತೆರವು ಗೊಳಿಸುವಂತೆ ಶಾಸಕರು ಸೂಚಿಸಿದರು.
ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ತಾ.ಪಂ. ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ವಿವೇಕಾನಂದ ಗಾಂವ್ಕರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸಂತೆಕಟ್ಟೆ ಹಾಗೂ ಅಂಬಲ ಪಾಡಿಯ ರಸ್ತೆ ವಿಸ್ತರಣೆ ಕಾಮಗಾರಿ ಸುಮಾರು 41 ಕೋ.ರೂ.ವೆಚ್ಚದಲ್ಲಿ ನಡೆಯಲಿದೆ. ಸಂತೆಕಟ್ಟೆಯ ಎರಡೂ ಭಾಗದಲ್ಲಿ ಸುಮಾರು 300 ಮೀಟರ್ ಕಾಮಗಾರಿ ನಡೆಯಲಿದೆ. 4 ಲೇನ್‌ಗಳ ಬ್ರಿಡ್ಜ್ ಇರಲಿದೆ ಎಂದು ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಅಂಬಲಪಾಡಿಯಿಂದ ಸಂತೆಕಟ್ಟೆವರೆಗೆ ಒಂದೇ ರೀತಿ ರಸ್ತೆ ವಿಸ್ತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.