Advertisement

ಮನೆಗೆ ಭೂಮಿ ಒದಗಿಸಲು ಪ್ರಸ್ತಾವನೆ

02:32 PM Sep 24, 2017 | Team Udayavani |

ಸಿಂಧನೂರು: ನಗರಸಭೆ ಪೌರ ಕಾರ್ಮಿಕರಿಗೆ ನಿವೇಶನ ಹಾಗೂ ಮನೆಗಳ ನಿರ್ಮಾಣಕ್ಕೆ ಭೂಮಿ ಖರೀದಿಸಲು
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ, ಎಂಎಸ್‌ಐಎಲ್‌ ಅಧ್ಯಕ್ಷ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ನಗರಸಭೆಯಲ್ಲಿ ಪೌರಸೇವಾ ನೌಕರರ ಸೇವಾ ಸಂಘದಿಂದ ಹಮ್ಮಿಕೊಂಡಿದ್ದ ಪೌರಸೇವಾ ಕಾರ್ಮಿಕರ ದಿನ,
ಸನ್ಮಾನ ಹಾಗೂ ಸಹಾಯಧನ ಚೆಕ್‌ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪೌರಸೇವಾ ಕಾರ್ಮಿಕರಿಗೆ ನಿವೇಶನ ನೀಡಲು ಏಳರಾಗಿ ಕ್ಯಾಂಪಿನಲ್ಲಿ 381 ಮನೆಗಳ ಹಕ್ಕುಪತ್ರ ರದ್ದುಪಡಿಸಲಾಗಿದೆ.
ಅಲ್ಲಿರುವ ಅರ್ಹರಿಗೆ ನೀಡಿ ಉಳಿಯುವ ಮನೆಗಳನ್ನು ಪೌರ ಕಾರ್ಮಿಕರಿಗೆ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ. ಜೊತೆಗೆ ದಿನಗೂಲಿ ನೌಕರರನ್ನು ಕಾಯಂ ಮಾಡುವ ಕುರಿತು ಈಗಾಗಲೇ ಸರ್ಕಾರ ಚಿಂತನೆ ನಡೆಸಿದೆ. ಎಲ್ಲ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸುವ ಭರವಸೆ ನೀಡಿದರು.

ನಾಗರಿಕ ಸೇವೆ ಮಾಡುವ ಪೌರ ಕಾರ್ಮಿಕರಿಗೆ ನಾವು ಸನ್ಮಾನ ಮಾಡುವುದಕ್ಕಿಂತ ನಗರದ ಜನರು ಸನ್ಮಾನ
ಮಾಡಬೇಕು. ಅಂದಾಗ ಅದಕ್ಕೊಂದು ಅರ್ಥ ಬರುತ್ತದೆ. ಸುಂದರ ನಗರ ನಿರ್ಮಾಣ, ನೈರ್ಮಲ್ಯ, ಆರೋಗ್ಯಕ್ಕಾಗಿ
ಪೌರ ಕಾರ್ಮಿಕರು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಸ್ವತ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿದಾಗ ಮಾತ್ರ ಪೌರ ಸೇವಾ ಕಾರ್ಮಿಕರ ಕೆಲಸಗಳು ಕಡಿಮೆಯಾಗಲಿವೆ ಎಂದು ಹೇಳಿದರು.

ಸಿಂಧನೂರು ನಗರ ವೇಗವಾಗಿ ಬೆಳೆಯುತ್ತಿದೆ. ಇಲ್ಲಿಯ ಜನಸಂಖ್ಯೆಗೆ ಅನುಗುಣವಾಗಿ ಸುಮಾರು 400ಕ್ಕೂ ಅಧಿಕಪೌರ ಕಾರ್ಮಿಕರು ಬೇಕು. ಆದರೆ 125 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. ಸದ್ಯ ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತಿವೆ. ನಗರದ ಸ್ವತ್ಛತೆ ಕಾಪಾಡುವುದು ನಾಗರಿಕರ ಹಾಗೂ ನಗರಸಭೆ ಕರ್ತವ್ಯವಾಗಿದೆ. ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಸುಂದರ ನಗರ ನಿರ್ಮಾಣ ಸಾಧ್ಯ. ಪೌರಕಾರ್ಮಿಕರು ವಿದೇಶಕ್ಕೆ ತೆರಳಿ ಅಲ್ಲಿರುವ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಲು ಹೋಗುತ್ತಿರುವುದು ಶ್ಲಾಘನೀಯವಾಗಿದೆ. ಅಲ್ಲಿರುವ ಪದ್ದತಿಗಳನ್ನು ಇಲ್ಲಿ ಅಳವಡಿಸಲು ಶ್ರಮಿಸಬೇಕು ಎಂದರು.

ಪೌರಸೇವಾ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಸಹಾಯಧನದ ಚೆಕ್‌ಗಳನ್ನು ಶಾಸಕ ಹಂಪನಗೌಡ ಬಾದರ್ಲಿ
ವಿತರಿಸಿದರು. ನಗರಸಭೆ ಉಪಾಧ್ಯಕ್ಷೆ ಅನ್ವರ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ನಬೀಸಾಬ್‌, ಸದಸ್ಯ ಪ್ರಭುರಾಜ, ಎಇಇ ಶ್ಯಾಮಲಾ, ವ್ಯವಸ್ಥಾಪಕ ಗುರುರಾಜ ಸೌದ್ರಿ, ಪೌರಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ದುರುಗಪ್ಪ ಹಸಮಕಲ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next