Advertisement

ಮುಂದುವರಿದ ಹುಚ್ಚಾಟ…ದೆಹಲಿಯ ಹೆಡ್ಗೆವಾರ್‌ ಸೇರಿ 4 ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ ಇ ಮೇಲ್

01:10 PM May 14, 2024 | Team Udayavani |

ನವದೆಹಲಿ: ದೆಹಲಿಯ ದೀಪ್‌ ಚಂದ್‌ ಬಂಧು ಆಸ್ಪತ್ರೆ, ಜಿಟಿಬಿ ಆಸ್ಪತ್ರೆ, ದಾದಾ ದೇವ್‌ ಆಸ್ಪತ್ರೆ, ಹೆಡ್ಗೆವಾರ್‌ ಆಸ್ಪತ್ರೆಗಳಿಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿರುವುದಾಗಿ ವರದಿ ತಿಳಿಸಿದ್ದು, ಪೊಲೀಸರ ತಂಡ ಶೋಧ ಕಾರ್ಯ ನಡೆಸುತ್ತಿದೆ.‌

Advertisement

ಇದನ್ನೂ ಓದಿ:Lok Sabha Election: ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಧೂಳೀಪಟವಾಗಲಿದೆ..ಪ್ರಧಾನಿ ಮೋದಿ

ದೆಹಲಿಯ ನಾಲ್ಕು ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ ಹಾಕಿರುವ ಇ-ಮೇಲ್‌ ನ ಮೂಲವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಪೊಲೀಸ್‌ ಹಾಗೂ ಬಾಂಬ್‌ ನಿಷ್ಕ್ರಿಯ ದಳ ಆಸ್ಪತ್ರೆಗಳಲ್ಲಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.

ಭಾನುವಾರವೂ ಕೂಡಾ ದೆಹಲಿಯ 10 ಆಸ್ಪತ್ರೆಗಳಿಗೆ ಹಾಗೂ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಹಾಕಲಾಗಿತ್ತು. ಆದರೆ ಇದೊಂದು ಹುಸಿ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದರು.

ಮೇ 1ರಂದು ಕೂಡಾ ದೆಹಲಿ-ಎನ್‌ ಸಿಆರ್‌ ನ ಸುಮಾರು 150ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್‌ ಬೆದರಿಕೆ ಕರೆ ಬಂದಿದ್ದು, ನಂತರ ಇದು ಕೂಡಾ ಹುಸಿ ಬೆದರಿಕೆ ಎಂಬುದು ಪರಿಶೀಲನೆ ಬಳಿಕ ತಿಳಿದು ಬಂದಿತ್ತು. ಈ ಶಾಲೆಗಳಿಗೆ ರಷ್ಯಾದ ಇ -ಮೇಲ್‌ ಸರ್ವೀಸ್‌ ಬಳಸಿ ಬೆದರಿಕೆ ಇ-ಮೇಲ್‌ ಕಳುಹಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next