Advertisement

ಭತ್ತ ಖರೀದಿ ಕೇಂದ್ರಕ್ಕೆ ಪ್ರಸ್ತಾವ: ಡಿಸಿ

01:02 AM Nov 10, 2021 | Team Udayavani |

ಉಡುಪಿ: ಬೆಂಬಲ ಬೆಲೆಯ ಆಧಾರದಲ್ಲಿ ಭತ್ತ ಖರೀದಿಗೆ ಶೀಘ್ರವೇ ಖರೀದಿ ಕೇಂದ್ರ ಕಾರ್ಯಾರಂಭಿಸುವಂತೆ ಹಾಗೂ ಸ್ಥಳೀಯವಾಗಿ ಬೆಳೆಯುವ ಕೆಂಪು ಕುಚ್ಚಲು ಅಕ್ಕಿಯನ್ನು ಇಲ್ಲಿಯೇ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ವಿತರಣೆಗೆ ಅವಕಾಶ ನೀಡುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಮಳೆಯಿಂದಾಗಿ ಭತ್ತ ಬೆಳೆದಿರುವ ರೈತರಿಗೆ ಸಮಸ್ಯೆಯಾಗುತ್ತಿರುವುದು ಅರಿವಿಗೆ ಬಂದಿದೆ. ಹಾಗೆಯೇ ಆದಷ್ಟು ಬೇಗ ಖರೀದಿ ಕೇಂದ್ರದಲ್ಲಿ ಭತ್ತ ಖರೀದಿ ಆರಂಭಿಸಲು ಅವಕಾಶ ಕೋರಲಾಗಿದೆ. ಸಚಿವರು ಕೂಡ ವಿಶೇಷ ಪ್ರಯತ್ನ ನಡೆಸುತ್ತಿದ್ದಾರೆ. ಶೀಘ್ರ ನಿರ್ಧಾರವಾಗುವ ಸಾಧ್ಯತೆಯಿದೆ ಎಂದರು.

ಕೆಂಪು ಅಕ್ಕಿ ಖರೀದಿ ಸಂಬಂಧ ರಾಜ್ಯಮಟ್ಟದಲ್ಲಿ ಕ್ರಮ ಆಗಬೇಕು. ಇದಕ್ಕಾಗಿ ತಾಂತ್ರಿಕ ಸಮಿತಿಯೂ ರಚನೆಯಾಗಿದೆ. ಹಾಗೆಯೇ ಕೃಷಿ ಯಂತ್ರೋಪಕರಣ ಹಾಗೂ ಕಟಾವಿಗೆ ಅನುಕೂಲವಾಗುವ ಯಂತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಸಂಚಾರಿ ಯಂತ್ರಗಳ ವ್ಯವಸ್ಥೆ ಬಗ್ಗೆಯೂ ಯೋಚನೆ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ:ರೈಲ್ವೆ ನಿಲ್ದಾಣದಲ್ಲಿ ಚಹಾ ಸವಿದ ರೈಲ್ವೆ ಸಚಿವ ವೈಷ್ಣವ್‌

ಎರಡನೇ ಡೋಸ್‌ಗೆ ಆದ್ಯತೆ
ಜಿಲ್ಲೆಯ ಬಹುತೇಕ ಗ್ರಾ.ಪಂ.ಗಳಲ್ಲಿ ಶೇ. 100ರಷ್ಟು ಮಂದಿಗೆ ಕೊರೊನಾ ಮೊದಲ ಡೋಸ್‌ ನೀಡಲಾಗಿದೆ. ನಿರ್ದಿಷ್ಟ ಅವಧಿಯ ಅನಂತರ ಎರಡನೇ ಡೋಸ್‌ ಪಡೆಯದೆ ಇರುವವವರಿಗೆ ಸಂದೇಶ ರವಾನಿಸಿ, ಎರಡನೇ ಡೋಸ್‌ ಪಡೆಯುವಂತೆ ಪ್ರೇರೇಪಿಸಲಾಗುತ್ತಿದೆ. 70ರಿಂದ 80 ಸಾವಿರ ಮಂದಿ ಇನ್ನೂ ಮೊದಲ ಡೋಸ್‌ ಪಡೆದಿಲ್ಲ. ಅವರನ್ನೂ ಪತ್ತೆಹಚ್ಚಿ ನೀಡುವ ಕಾರ್ಯವೂ ನಡೆಯುತ್ತಿದೆ ಎಂದರು.

Advertisement

ನಿರಂತರ ಕ್ರಮ
ಅಕ್ರಮ ಮರಳು ಸಾಗಾಟದ ವಿರುದ್ಧ ನಿರಂತರ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಹಾಗೆಯೇ ಜಿಪಿಎಸ್‌ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಿ, ಅಕ್ರಮ ತಡೆಯುವ ನಿಟ್ಟಿನಲ್ಲಿ ಇನ್ನಷ್ಟು ಆಧುನಿಕ ಉಪಕರಣ ಬಳಕೆ ಮಾಡಲಿದ್ದೇವೆ ಎಂದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next