Advertisement

ರಾಜ್ಯಾದ್ಯಂತ ದಸರಾ ವಸ್ತು ಪ್ರದರ್ಶನ ನಡೆಸಲು ಪ್ರಸ್ತಾವನೆ

11:22 AM Sep 03, 2018 | Team Udayavani |

ಮೈಸೂರು: ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹಕಾರದೊಂದಿಗೆ ಪ್ರವಾಸೋದ್ಯಮ ಇಲಾಖೆಯನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ತಿಳಿಸಿದರು.

Advertisement

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಟಾಗಿಲು ಹುಣಸೂರು ತಾಲೂಕು ವೀರನಹೊಸಹಳ್ಳಿ ಬಳಿ ಭಾನುವಾರ ಅರ್ಜುನ ನೇತೃತ್ವದ ದಸರಾ ಆನೆಗಳ ಮೊದಲ ತಂಡವನ್ನು ಮೈಸೂರಿಗೆ ಕಳುಹಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು. ದಸರಾ ವಸ್ತುಪ್ರದರ್ಶನ ಮೈಸೂರಿಗೆ ಮಾತ್ರ ಸೀಮಿತಗೊಳಿಸದೆ, ಇಡೀ ರಾಜ್ಯಕ್ಕೆ ವಸ್ತುಪ್ರದರ್ಶನವನ್ನು ವಿಸ್ತರಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಡಾ.ಜಯಮಾಲ ಮಾತನಾಡಿ, ದಸರಾ ಮೈಸೂರಿಗೆ ಮಾತ್ರವೇ ಸೀಮಿತವಲ್ಲ. ಮೈಸೂರು ದಸರಾ ಎಂದರೆ ಇಡೀ ಪ್ರಪಂಚ ಇತ್ತ ಬಿಟ್ಟ ಕಣ್ಣಿನಿಂದ ನೋಡುತ್ತೆ. ಸಂಪ್ರದಾಯಗಳನ್ನು ಉಳಿಸಿಕೊಂಡು ಈ ಬಾರಿ ವೈಭವಯುತ ದಸರಾ ಆಚರಣೆ ಮಾಡೋಣ ಎಂದರು.

ರಾಜ-ಮಹಾರಾಜರುಗಳಿಗೆ ಪರಿಸರ, ವನ್ಯಪ್ರಾಣಿಗಳ ಮೇಲೆ ಅಪಾರ ಪ್ರೀತಿ ಇತ್ತು. ಆ ಕಾರಣದಿಂದಾಗಿಯೇ ಕೆರೆ-ಕಟ್ಟೆಗಳನ್ನು ಕಟ್ಟಿಸಿ ಪರಿಸರವನ್ನು ಕಾಪಾಡಿದ್ದಾರೆ. ನಾವು ಕೂಡ ಪರಿಸರವನ್ನು ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕೊಡಗಿನಲ್ಲಿ ಉಂಟಾದ ಜಲಪ್ರವಾಹದ ಸಂಕಷ್ಟದ ಮಧ್ಯೆ ದಸರಾ ಆಚರಣೆ ಮಾಡುತ್ತಿದ್ದೇವೆ. ತಾಯಿ ಚಾಮುಂಡಿ ಸಂತುಷ್ಟವಾದರೆ, ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು. ಜೀವದ ಹಂಗು ತೊರೆದು ಆನೆಗಳನ್ನು ಪಾಲನೆ ಮಾಡುವ ಮಾವುತ-ಕವಾಡಿಗಳನ್ನು ಅಭಿನಂದಿಸುವ ಜೊತೆಗೆ ಅವರ ಬದುಕು ಹಸನು ಮಾಡುವಂತಹ ಕಾರ್ಯಕ್ರಮಗಳನ್ನೂ ಸರ್ಕಾರ ರೂಪಿಸಬೇಕಿದೆ ಎಂದು ಹೇಳಿದರು.

Advertisement

ಎಚ್‌ಡಿಕೆ ಸೂಚನೆ: ಅಧ್ಯಕ್ಷತೆವಹಿಸಿದ್ದ ಶಾಸಕ ಎಚ್‌.ವಿಶ್ವನಾಥ್‌ ಮಾತನಾಡಿ, ಸಂಪ್ರದಾಯಕ್ಕೆ ಯಾವುದೇ ಕೊರತೆಯಾಗದಂತೆ ದಸರಾ ಆಚರಣೆ ಮಾಡಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ. ಸಂಪ್ರದಾಯ, ಸಂಸ್ಕೃತಿ, ನಂಬಿಕೆಯೇ ದಸರಾ. ದಸರೆ ಎಂದರೆ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆ, ಹೀಗಾಗಿ ಮಳೆ- ಬರ ಎನ್ನದೇ ಎಂಥದ್ದೇ ಪರಿಸ್ಥಿತಿಯಲ್ಲೂ ದಸರಾ ನಿಲ್ಲಬಾರದು.

ಹಿಂದೆ ಸ್ವತಃ ಮಹಾರಾಜರು ಕಾಡಿಗೆ ಬಂದು ಮಾವುತರಿಗೆ ಫ‌ಲ ತಾಂಬೂಲ, ಧನ-ಧಾನ್ಯ ನೀಡಿ ದಸರೆಗೆ ಬನ್ನಿ ಎಂದು ಆಹ್ವಾನಕೊಟ್ಟು ಹೋಗುತ್ತಿದ್ದರು. ಅದಕ್ಕಾಗಿಯೇ ಸಡಗರ-ಸಂಭ್ರಮದಿಂದ ಗಜಪಯಣದ ಮೂಲಕ ದಸರೆಗೆ ನಿಶಾನೆ ತೋರಲಾಗಿದೆ. ದೇಶ-ವಿದೇಶಗಳಿಗೆ ದಸರಾ ತಲುಪಬೇಕು ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಕೆ.ಮಹದೇವ, ಬಿ.ಹರ್ಷವರ್ಧನ್‌, ಅಶ್ವಿ‌ನ್‌ ಕುಮಾರ್‌, ಎಲ್‌.ನಾಗೇಂದ್ರ, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ಜಿಪಂ ಸದಸ್ಯರಾದ ಸುರೇಂದ್ರ, ಕಾಟನಾಯಕ, ದೊಡ್ಡ ಹೆಜೂjರು ಗ್ರಾಪಂ ಅಧ್ಯಕ್ಷೆ ಮಹದೇವಿ, ಎಪಿಸಿಸಿಎಫ್ ಜಗತ್‌ ರಾಮ್‌, ಸಿಎಫ್ ವೆಂಕಟೇಶನ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next