Advertisement
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ “ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ’ ಕಾರ್ಯಕ್ರಮದಲ್ಲಿ ಮಾತನಾಡಿ, ತುಳು, ಕೊಡವ, ಬಂಜಾರಾ ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಗತ್ಯಬಿದ್ದರೆ ತುಳು ಭಾಷಿಕರ ನಿಯೋಗದೊಂದಿಗೆ ಕೇಂದ್ರ ಸಂಸ್ಕೃತಿ ಸಚಿವರನ್ನು ಭೇಟಿ ಮಾಡಿ ಈ ವಿಷಯದ ಕುರಿತು ಚರ್ಚಿಸಲಾಗುವುದು. ಮಲೆಯಾಳಂ ಭಾಷೆಗೆ ಮೂಲ ಲಿಪಿ ಕೊಟ್ಟಿರುವ ತುಳು ಭಾಷೆಗೆ ತನ್ನದೇ ಆದ ಸ್ಥಾನಮಾನ ದೊರಕಬೇಕು, ನಮ್ಮ ವಿದ್ಯಾರ್ಥಿಗಳು ಐಚ್ಚಿಕವಾಗಿ ಪ್ರಂಚ್ ಭಾಷೆ ಓದುತ್ತಾರೆ. ಅದರ ಬದಲಿಗೆ ತುಳು ಭಾಷೆಯನ್ನು ಐಚ್ಛಿಕವಾಗಿ ಓದಿದರೆ ಸಂಸ್ಕೃತಿ ಹಾಗೂ ಸಂಸ್ಕಾರ ಪರಿಚಯವಾಗಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಮಾತನಾಡಿ, ತುಳು ಭಾಷೆಯ 54 ಶಾಸನಗಳಲ್ಲಿ 3 ಶಾಸನಗಳಲ್ಲಿ ತುಳು ರಾಜ್ಯದ ಉಲ್ಲೇಖವಿದೆ. ಆದರೆ ನಮಗೆ ತುಳು ರಾಜ್ಯ ಬೇಕಾಗಿಲ್ಲ, ತುಳು ಭಾಷೆ ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರ್ಪಡೆ, ತುಳು ಸಾಹಿತ್ಯ ಭವನ ನಿರ್ಮಾಣಕ್ಕಾಗಿ ಅಗತ್ಯ ಅನುದಾನ ನೀಡುವಂತೆ ಬೇಡಿಕೆ ಮಂಡಿಸಿದರು.
Related Articles
Advertisement