Advertisement

ಸಸ್ಯಾಹಾರ ದಿನಕ್ಕೆ ಪ್ರಸ್ತಾವ‌

09:43 AM May 21, 2018 | Harsha Rao |

ಹೊಸದಿಲ್ಲಿ: ಕೇಂದ್ರ ಸರಕಾರ ಮಹಾತ್ಮ ಗಾಂಧಿ ಅವರ 150ನೇ ಹುಟ್ಟಿದ ದಿನದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಈಗಾಗಲೇ ನಿರ್ಧರಿಸಿದೆ. ಅದಕ್ಕೆ ಪೂರಕವಾಗಿ ರೈಲ್ವೇ ಮಂಡಳಿ ಕೂಡ ಈ ವರ್ಷ ಅ.2ರಂದು ರೈಲು ನಿಲ್ದಾಣದಲ್ಲಿ ಮಾಂಸಾಹಾರ ವಿತರಣೆ ಮಾಡದೇ ಇರುವ ಬಗ್ಗೆ ಯೋಜನೆ ಹಾಕಿಕೊಂಡಿದೆ. ಈ ಮೂಲಕ “ಸಸ್ಯಾಹಾರ ದಿನ’ವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ.

Advertisement

ಅದನ್ನೇ 2019ರ ಅ.2, 2020ರ ಅ.2 ರಂದೂ ಮುಂದುವರಿಸುವ ಬಗ್ಗೆ ಮಂಡಳಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. “ರಾಷ್ಟ್ರೀಯ ಸ್ವತ್ಛತಾ ದಿನ’ವನ್ನು ಅ.2ರಂದೇ ನಡೆಸಲು ನಿರ್ಧರಿಸಲಾಗಿದೆ. 

ಮಹಾತ್ಮ ಗಾಂಧಿ ಅವರು ಸಸ್ಯಾಹಾರವನ್ನೇ ಇಷ್ಟ ಪಡುತ್ತಿದ್ದುದರಿಂದ ರೈಲ್ವೇ ಮಂಡಳಿ ಈ ಬಗ್ಗೆ ಪ್ರಸ್ತಾಪ ಮಾಡಿದೆ. ಇದರ ಜತೆ ಮಹಾತ್ಮಾ ಗಾಂಧಿ ಹೊಂದಿದ್ದ ವಿಶೇಷ ಬಾಂಧವ್ಯದ ಸ್ಥಳಗಳಿಗೆ “ಸ್ವತ್ಛತಾ ಎಕ್ಸ್‌ಪ್ರೆಸ್‌’ ಗಳನ್ನು ಓಡಿಸಲೂ ರೈಲ್ವೇ ಇಲಾಖೆ ಮುಂದಾಗಿದೆ. ಇನ್ನು ದಂಡಿಯಾತ್ರೆಯ ನೆನಪಿಗಾಗಿ ಸಬರಮತಿಯಿಂದ ರೈಲು
ಗಳಲ್ಲಿ “ಉಪ್ಪಿನ ವಿಶೇಷ ಬೋಗಿ’ಯನ್ನು ಸೇರಿಸಲಿದೆ.  ಟಿಕೆಟ್‌ಗಳಲ್ಲಿ ಗಾಂಧೀಜಿಯವರ ಅಳಿಸಲಾ ಗದಂಥ ಚಿತ್ರಗಳನ್ನೂ ಮುದ್ರಿಸಲಿದೆ. 

ಈ ಎಲ್ಲಾ ಪ್ರಸ್ತಾವಗಳನ್ನು ಕೇಂದ್ರ ಸಂಸ್ಕೃತಿ ಖಾತೆ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಅದರ ಉಸ್ತುವಾರಿಯಲ್ಲಿಯೇ ಮಹಾತ್ಮ ಗಾಂಧಿಯವರ 150ನೇ ಹುಟ್ಟಿದ ಹಬ್ಬದ ಕಾರ್ಯಕ್ರಮಗಳು ನೆರವೇರಲಿವೆ. ಇದರ ಜತೆಗೆ ವಿಶೇಷ ಲಾಂಛನವನ್ನೂ ಸಿದ್ಧಪಡಿಸಲಾ ಗುತ್ತಿದೆ. ಎಲ್ಲಾ ರೈಲ್ವೇ ವಿಭಾಗೀಯ ಕಚೇರಿಗಳ ಮುಂಭಾಗದಲ್ಲಿ ಗಾಂಧೀಜಿಯವರ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next