Advertisement

ಕೋಟ-ಗೋಳಿಯಂಗಡಿ, ಬ್ರಹ್ಮಾವರ-ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಗಳ ಮೇಲ್ದರ್ಜೆಗೆ ಪ್ರಸ್ತಾವ

11:22 AM Oct 11, 2019 | sudhir |

ಕೋಟ: ಬ್ರಹ್ಮಾವರ-ಜನ್ನಾಡಿ ಹಾಗೂ ಕೋಟ-ಗೋಳಿಯಂಗಡಿ ಜಿಲ್ಲಾ ಮುಖ್ಯ ರಸ್ತೆಗಳು ಜಿಲ್ಲೆಯ ಪ್ರಮುಖ ಸಂಪರ್ಕ ಕೊಂಡಿಗಳಲ್ಲಿ ಒಂದು. ಸಾಕಷ್ಟು ವಾಹನದಟ್ಟಣೆ ಹೊಂದಿರುವ ಇವೆರಡರನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇದೀಗ ಪಿ.ಡಬುÉ Â.ಡಿ. ಇಲಾಖೆ ಈ ಮಾರ್ಗಗಳಿಗೆ ರಾಜ್ಯ ಹೆದ್ದಾರಿಯಾಗುವ ಎಲ್ಲ ಅರ್ಹತೆಗಳಿವೆ ಎಂದು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಹೀಗಾಗಿ ಅಭಿವೃದ್ಧಿಯ ಕನಸಿಗೆ ಮತ್ತೆ ಚಾಲನೆ ದೊರೆತಿದೆ.

Advertisement

ಪ್ರಮುಖ ರಸ್ತೆಗಳು
ಕೋಟ-ಗೋಳಿಯಂಗಡಿ ನಡುವಿನ 26 ಕಿ.ಮೀ. ರಸ್ತೆ ಸಾೖಬ್ರಕಟ್ಟೆ, ಶಿರೂರುಮೂಕೈì, ಕೊಕ್ಕರ್ಣೆ, ಗೋಳಿಯಂಗಡಿ, ಹೆಬ್ರಿ, ಆಗುಂಬೆ ಮುಂತಾದ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ ಹಾಗೂ ಪ್ರಮುಖ ಗ್ರಾಮಾಂತರ ಭಾಗದ ನಡುವೆ ಹಾದು ಹೋಗುವುದರಿಂದ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ.

ಅದೇ ರೀತಿ ಬ್ರಹ್ಮಾವರ-ಜನ್ನಾಡಿ ರಸ್ತೆ ಮೂಲಕ ಹುಲಿಕಲ್ಲು ಘಾಟಿ ಮಾರ್ಗವಾಗಿ ಸಾಗರ- ಶಿವಮೊಗ್ಗ- ಬೆಂಗಳೂರು ಸಂಪರ್ಕಿಸಬಹುದು. ಹೀಗಾಗಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಟ್ಯಾಂಕರ್‌ ಮುಂತಾದ ಘನ ವಾಹನಗಳು ವರ್ಷವಿಡೀ ಸಂಚರಿಸುತ್ತವೆೆ. ಆಗುಂಬೆ, ಚಾರ್ಮಾಡಿ, ಸಕಲೇಶಪುರ ಘಾಟಿಗಳು ಹಾಳಾಗಿ ವಾಹನ ಸಂಚಾರ ಸ್ಥಗಿತಗೊಂಡಾಗೆಲ್ಲ ಈ ರಸ್ತೆಯನ್ನೇ ಉಪಯೋಗಿಸಲಾಗುತ್ತದೆ.

ಒಂದಷ್ಟು ಸಮಸ್ಯೆಗಳು
ಬ್ರಹ್ಮಾವರ-ಜನ್ನಾಡಿ ಮಾರ್ಗದಲ್ಲಿ ಅಧಿಕ ಭಾರದ ವಾಹನಗಳ ಓಡಾಟದಿಂದ ಸ್ವಾತಂತ್ರÂ ಪೂರ್ವದಲ್ಲಿ ನಿರ್ಮಾಣಗೊಂಡ ಇಲ್ಲಿನ ಸೇತುವೆಗಳು ಶಿಥಿಲಗೊಂಡಿವೆ ಹಾಗೂ ಅಸಮರ್ಪಕ ಚರಂಡಿಯಿಂದಾಗಿ ರಸ್ತೆಯ ಮೇಲೆ ನೀರು ಹರಿದು ಡಾಮರೀಕರಣಗೊಳಿಸಿದ ಒಂದೆರಡು ವರ್ಷದಲ್ಲೇ ರಸ್ತೆ ಕೊಚ್ಚಿ ಹೋಗುತ್ತದೆ. ಹಲವು ಕಡೆಗಳಲ್ಲಿ ಅಪಾಯಕಾರಿ ತಿರುವುಗಳಿದ್ದು ಅನೇಕ ಅಪಘಾತಗಳು ಸಂಭವಿಸಿ ಜೀವಹಾನಿಯಾಗಿದೆ. ಅಂಗಡಿ ಮುಂಗಟ್ಟುಗಳು ರಸ್ತೆಗೆ ತಾಗಿಕೊಂಡಿವೆ. ರಿಕ್ಷಾನಿಲ್ದಾಣ, ಬಾಡಿಗೆ ಟೂರಿಸ್ಟ್‌ ವಾಹನಗಳಿಗೆ ಸಮರ್ಪಕವಾದ ನಿಲ್ದಾಣಗಳಿಲ್ಲದೆ ರಸ್ತೆಯ ಮಗ್ಗುಲನ್ನು ಅವಲಂಬಿಸುವಂತಾಗಿದೆ. ಹೀಗಾಗಿ ಸಂಚಾರ ಸಮಸ್ಯೆ ಪ್ರತಿದಿನ ಇಲ್ಲಿ ಮಾಮೂಲಿಯಾಗಿದೆ.

ಇದೇ ರೀತಿ ಕೋಟ-ಗೋಳಿಯಂಗಡಿ ರಸ್ತೆಯಲ್ಲಿ ಕೋಟದ ಬೆಟ್ಲಕ್ಕಿ ಹಡೋಲಿನಿಂದ ಬನ್ನಾಡಿಯ ತನಕ ರಸ್ತೆ ಕಿರಿದಾಗಿದೆ ಹಾಗೂ ಎರಡೂ ಕಡೆಗಳಲ್ಲಿ ಅಪಾಯಕಾರಿ ಕಂದಕ ಮತ್ತು ನೀರಿನ ಹೊಂಡಗಳಿವೆ. ಹಲವು ಕಡೆಗಳಲ್ಲಿ ಚರಂಡಿ ಸಮಸ್ಯೆಗಳಿವೆೆ. ಹೀಗಾಗಿ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿ ಒಂದಷ್ಟು ವಿಶೇಷ ಅನುದಾನಗಳು ದೊರೆತಲ್ಲಿ ರಸ್ತೆಯ ಅಭಿವೃದ್ಧಿ ಸಾಧ್ಯ ಎನ್ನುವ ನಿರೀಕ್ಷೆ ಸಾರ್ವಜನಿಕರಲ್ಲಿದೆ.

Advertisement

ವರದಿ ನೀಡಲಾಗಿದೆ
ಕೋಟ-ಗೋಳಿಯಂಗಡಿ ಮತ್ತು ಬ್ರಹ್ಮಾವರ-ಜನ್ನಾಡಿ ರಸ್ತೆಯಲ್ಲಿ ವಾಹನ ದಟ್ಟಣೆ ಪರಿಗಣಿಸಿ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರುವ ಅರ್ಹತೆಗಳಿವೆೆ ಎಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆಗೊಂಡಲ್ಲಿ ಒಂದಷ್ಟು ಅಭಿವೃದ್ಧಿಗೆ ಪೂರಕವಾಗಲಿದೆ.
-ಜಗದೀಶ್‌ ಭಟ್‌,
ಎ.ಇ.ಇ. ಪಿ.ಡಬುÉ Â.ಡಿ.ಇಲಾಖೆ ಉಡುಪಿ

ಅಭಿವೃದ್ದಿಗೆ ಪೂರಕವಾಗಿರಬೇಕು
ಕೋಟೇಶ್ವರ ಹಾಲಾಡಿ ಸೇರಿದಂತೆ ಹಲವಾರು ರಸ್ತೆಗಳು ಈ ಹಿಂದೆ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿತ್ತು. ಆದರೆ ಅಭಿವೃದ್ಧಿಗೆ ವಿಶೇಷ ಅನುದಾನ ಬಂದಿಲ್ಲ. ಹೀಗಾಗಿ ಕೇವಲ ಕಡತದಲ್ಲಿ ಮೇಲ್ದರ್ಜೆಗೇರಿ ಪ್ರಯೋಜನವಿಲ್ಲ. ಅಭಿವೃದ್ಧಿಗೆ ಸಹಾಯಕವಾಗುವುದಾದರೆ ಪರಿಶೀಲಿಸಬಹುದು.
-ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕರು ಕುಂದಾಪುರ

ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕಿದೆ
ಈ ಎರಡೂ ರಸ್ತೆಗಳು ಅಗತ್ಯವಾಗಿ ಅಭಿವೃದ್ಧಿಯಾಗಬೇಕು ಎನ್ನುವುದು ಸ್ಥಳೀಯರ ಹಲವು ವರ್ಷಗಳ ಬೇಡಿಕೆಯಾಗಿದೆ. ಇದೀಗ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿರುವುದರಿಂದ ಅನುಮೋದನೆಗೊಳಿಸಿ, ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಆಸಕ್ತಿವಹಿಸಬೇಕು.
-ಸತೀಶ್‌ ಶೆಟ್ಟಿ ಯಡ್ತಾಡಿ, ಸ್ಥಳೀಯರು

-ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next