Advertisement

Mangaluru: ಎಂಟು ಹೊಸ ರೂಟ್‌ಗಳಲ್ಲಿ ಪರವಾನಿಗೆಗೆ ಪ್ರಸ್ತಾವ

08:24 PM Nov 05, 2024 | Team Udayavani |

ಮಂಗಳೂರು: ಮಂಗಳೂರು-ಕಾರ್ಕಳ ಸೇರಿದಂತೆ ಎಂಟು ಹೊಸ ರೂಟ್‌ಗಳಲ್ಲಿ ಪರವಾನಿಗೆ ನೀಡುವಂತೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ಪ್ರಸ್ತಾವ ಮುಂದಿರಿಸಿದ್ದು, ಇದಕ್ಕೆ ಖಾಸಗಿ ಬಸ್‌ ಮಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಖಾಸಗಿ ಬಸ್‌ ಮಾಲಕರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಬಳಿ 15 ದಿನಗಳ ಗಡುವು ಕೇಳಿದ್ದಾರೆ.

Advertisement

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧ್ಯಕ್ಷ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಅವರು ಮಾತನಾಡಿ, ಸಾರ್ವಜನಿಕ ಬೇಡಿಕೆ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ವಿವಿಧ ಮಾರ್ಗಗಳಲ್ಲಿ ಈ ಹಿಂದೆ 56 ಸಿಂಗಲ್‌ ಟ್ರಪ್‌ಗ್ಳಿಗೆ ಪರವಾನಿಗೆ ಕೇಳಿತ್ತು. ಕೋರ್ಟ್‌ ತಡೆಯ ಕಾರಣ ಪರವಾನಿಗೆ ಸಿಕ್ಕಿಲ್ಲ. ಅದರಲ್ಲಿಯೂ ಮಂಗಳೂರು-ಕಾರ್ಕಳ ಮಧ್ಯೆ 8 ಟ್ರಿಪ್‌ಗ್ಳ ಬೇಡಿಕೆಯಲ್ಲಿ ಕೇವಲ 3 ಟ್ರಿಪ್‌ಗೆ ಈಗಾಗಲೇ ಅವಕಾಶ ನೀಡಲಾಗಿದೆ. ಕೇಂದ್ರ ಸರಕಾರದ ಏರಿಯಾ ಸ್ಕೀಂ ನಿಯಮದ ಪ್ರಕಾರ ಹಾಗೂ ಚಾಪ್ಟರ್‌-5ರಂತೆ ಹೊಸ ರೂಟ್‌ಗೆ ಪರವಾನಿಗೆ ನೀಡಲು ಸಾರಿಗೆ ಪ್ರಾಧಿಕಾರಕ್ಕೆ ಅಧಿಕಾರ ಇದೆ. ಇದಕ್ಕೆ ಯಾವ ಅಡೆತಡೆ ಇಲ್ಲ ಎಂದು ವಾದ ಮಂಡಿಸಿದರು. ಇದಕ್ಕೆ ಖಾಸಗಿ ಬಸ್‌ ಮಾಲಕರ ಪರವಾಗಿ ಆಕ್ಷೇಪ ವ್ಯಕ್ತಪಡಿಸಲಾಯಿತು. ರಾಜವರ್ಮ ಬಳ್ಳಾಲ್‌, ಹಝೀಝ್ ಪರ್ತಿಪ್ಪಾಡಿ, ದಿಲ್‌ರಾಜ್‌ ಆಳ್ವ ಸಹಿತ ಖಾಸಗಿ ಬಸ್‌ ಮಾಲಕರು ಖಾಸಗಿ ಬಸ್‌ಗಳ ಸಮಸ್ಯೆ-ಸವಾಲುಗಳ ಬಗ್ಗೆ ಉಲ್ಲೇಖಿಸಿದರು.

ಬಸ್‌ಗಳಿಗೆ ಬಾಗಿಲು; ಡಿ.10ರೊಳಗೆ
ಕಡ್ಡಾಯ ಅನುಷ್ಠಾನಕ್ಕೆ ಸೂಚನೆ
ಪ್ರಯಾಣಿಕರ ಸುರಕ್ಷತೆ ಸಲುವಾಗಿ ಬಸ್‌ಗಳು ಸಂಚರಿಸುವ ವೇಳೆ ಬಾಗಿಲು ಹಾಕಿಕೊಳ್ಳುವುದು ಕಡ್ಡಾಯ. ಈ ಬಗ್ಗೆ ಹಲವು ಬಾರಿ ಸೂಚನೆ ನೀಡಿದರೂ ಪಾಲನೆಯಾಗುತ್ತಿಲ್ಲ. ಹೀಗಾಗಿ ತತ್‌ಕ್ಷಣದಿಂದಲೇ ಬಾಗಿಲು ಅಳವಡಿಸಲು ಎಲ್ಲ ಖಾಸಗಿ ಬಸ್‌ಗಳು ಕ್ರಮ ಕೈಗೊಳ್ಳಬೇಕು.

ಮಂಗಳೂರಿನಿಂದ ಸಂಚರಿಸುವ ನಗರ ಸಾರಿಗೆ ಹೊರತಾದ ಎಲ್ಲ ಖಾಸಗಿ ಬಸ್‌ಗಳು ಕಡ್ಡಾಯವಾಗಿ ಬಾಗಿಲು ಅಳವಡಿಸಬೇಕು. ನಗರ ಸಾರಿಗೆ ಬಸ್‌ಗಳಿಗೆ ಡೋರ್‌ ಅಳವಡಿಕೆ ಕುರಿತಂತೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಉಳಿದಂತೆ ಎಲ್ಲ ಖಾಸಗಿ ಬಸ್‌ಗಳು ಡೋರ್‌ ಅಳವಡಿಕೆಯನು ಡಿ.10ರೊಳಗೆ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್‌ ತಿಳಿಸಿದರು.

Advertisement

ಮಂಗಳೂರಲ್ಲಿ ಸ್ಮಾರ್ಟ್‌ಸಿಟಿಯ ಕಮಾಂಡಿಂಗ್‌ ಕಂಟ್ರೋಲ್‌ ಕೇಂದ್ರ ಇದೆ. ಇದರ ಸುಪರ್ದಿಯಲ್ಲಿ ಖಾಸಗಿ ಬಸ್‌ಗಳು ಕೂಡ ಜಿಪಿಎಸ್‌ ಅಳವಡಿಸುವುದು ಕಡ್ಡಾಯವಾಗಿದೆ. ಜಿಪಿಎಸ್‌ ಅಳವಡಿಸಿ ಸ್ಮಾರ್ಟ್‌ಸಿಟಿ ಕಂಟ್ರೋಲ್‌ ರೂಂ ಜತೆ ಸಂಪರ್ಕ ಇರಿಸಬೇಕು. ಇದರಿಂದ ಬಸ್‌ಗಳು ಎಲ್ಲೆಲ್ಲಿ ಸಂಚರಿಸುತ್ತಿವೆ ಎಂಬ ಮಾಹಿತಿ ಸುಲಭದಲ್ಲಿ ಸಿಗುತ್ತದೆ. ಇದು ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯವಾಗಲಿದೆ. ಜತೆಗೆ ಪ್ಯಾನಿಕ್‌ ಬಟನ್‌ ಅಳವಡಿಕೆ ಆಗಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಪಾಲಿಕೆ ಆಯುಕ್ತ ಆನಂದ್‌, ಜಿಲ್ಲಾ ಎಸ್ಪಿ ಯತೀಶ್‌, ಸಂಚಾರಿ ಡಿಸಿಪಿ ದಿನೇಶ್‌ ಕುಮಾರ್‌, ಸಾರಿಗೆ ಅಧಿಕಾರಿ ಶ್ರೀಧರ್‌ ಮಲ್ಲಾಡ್‌ ಉಪಸ್ಥಿತರಿದ್ದರು.

ಗಮನ ಸೆಳೆದ “ಉದಯವಾಣಿ’ ಬಸ್‌ ಅಭಿಯಾನ
ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಅವರು ಮಾತನಾಡಿ, ಮಂಗಳೂರು-ಕಾರ್ಕಳ, ಮೂಡುಬಿದಿರೆ ಸಹಿತ ವಿವಿಧ ರೂಟ್‌ಗಳಿಗೆ ಬಸ್‌ ಸೌಲಭ್ಯ ಅಗತ್ಯವಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ. ಜತೆಗೆ ಉದಯವಾಣಿ ಪತ್ರಿಕೆಯು “ನಮಗೆ ಬಸ್‌ ಬೇಕೇ ಬೇಕು’ ಎಂಬ ಅಭಿಯಾನವನ್ನೂ ನಡೆಸಿತ್ತು ಎಂದು ಸಭೆಯಲ್ಲಿ ಉಲ್ಲೇಖೀಸಿದರು.

ಚಾಲಕರು, ನಿರ್ವಾಹಕರ ಪೊಲೀಸ್‌ ಪರಿಶೀಲನೆ
ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಮಾತನಾಡಿ, “ಬಸ್‌ ಚಾಲಕರು ಹಾಗೂ ನಿರ್ವಾಹಕರ ವಿರುದ್ಧ ಯಾವುದಾದರೂ ಪ್ರಕರಣ ಇದೆಯೇ ಎಂಬ ಬಗ್ಗೆ ಪರಿಶೀಲಿಸುವ ನೆಲೆಯಲ್ಲಿ ಎಲ್ಲ ಚಾಲಕರು, ನಿರ್ವಾಹಕರ ಪೊಲೀಸ್‌ ಪರಿಶೀಲನೆ ನಡೆಸಲಾಗುವುದು. ಮಂಗಳೂರಿನಲ್ಲಿ ಸಿಟಿ, ಸರ್ವಿಸ್‌ ಬಸ್‌ಗಳ ವಿಭಾಗವಾರು ಮಾಡಲು ನಿಗದಿತ ಕಲರ್‌ ಸ್ಟಿಕ್ಕರ್‌ ಅಂಟಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಬಸ್‌ ನಿಲುಗಡೆ ಇಲ್ಲದ ಜಾಗದಲ್ಲಿ ಮಂಗಳೂರಿನಲ್ಲಿ ಬಸ್‌ ನಿಲುಗಡೆ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next