Advertisement
ಸಾಮಾನ್ಯವಾಗಿ ವಿದೇಶಗಳಲ್ಲಿ ಶಾಲಾ ಮಟ್ಟದಲ್ಲೇ ಸಿಪಿಆರ್ ನೀಡುವ ವಿಧಾನದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ತರಬೇತಿ ನೀಡಲಾಗುತ್ತದೆ. ಆದರೆ ಭಾರತದಲ್ಲಿ ವೈದ್ಯರಲ್ಲಿ ಮಾತ್ರ ಇದರ ಜ್ಞಾನವಿದೆ ಹೊರತು ಜನಸಾಮಾನ್ಯರಲ್ಲಿ ತುಂಬಾ ಕಡಿಮೆಯಾಗಿದೆ. ಇದರಿಂದಾಗಿ ಹೃದಯಾಘಾತಕ್ಕೆ ಒಳಗಾದವರು ಆಸ್ಪತ್ರೆ ದಾರಿ ಮಧ್ಯೆಯೇ ಸಿಪಿಆರ್ ಸಿಗದೇ ಮೃತಪಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ.
ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯದಲ್ಲಿ ಸಿಪಿಆರ್ ಅನ್ನು ಸೇರಿಸಲು ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದೆ. ಒಂದು ವೇಳೆ ಶಿಕ್ಷಣ ಇಲಾಖೆ ಒಪ್ಪಿಗೆ ಸೂಚಿಸಿದರೆ ಮುಂದಿನ ವರ್ಷವೇ ಸೇರ್ಪಡೆಯಾಗಲಿದೆ. ಸಿಪಿಆರ್ ಒಂದು ಜೀವ ಉಳಿಸುವ ಕ್ರಿಯೆಯಾಗಿದ್ದು, ಸಕಾಲದಲ್ಲಿ ಸಿಪಿಆರ್ ಮಾಡಿದರೆ ಹೃದಯಾಘಾತಕ್ಕೆ ಒಳಗಾದವರನ್ನು ಅಪಾಯದಿಂದ ಪಾರು ಮಾಡಬಹುದು. ಈ ಬಗ್ಗೆ ಮಕ್ಕಳಿಗೆ ಪ್ರೌಢಶಾಲಾ ಹಾಗೂ ಪದವಿ ಪೂರ್ವ ಹಂತ ವಿದ್ಯಾರ್ಥಿಗಳಲ್ಲಿ ಮಾಹಿತಿ ಇದ್ದರೆ ತುಂಬಾ ಅನುಕೂಲವಾಗಲಿದೆ ಎಂದು ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ. ಸಿಪಿಆರ್ ಯಾಕೆ ಅಗತ್ಯ?
ಹೃದಯಾಘಾತದ ಬಳಿಕ ಅಥವಾ ವಿವಿಧ ಕಾರಣಗಳಿಂದ ಉಸಿರಾಟವನ್ನು ನಿಲ್ಲಿಸಿದ ಅನಂತರವೂ ಆಮ್ಲಜನಕವು ಸ್ವಲ್ಪ ಸಮಯದವರೆಗೆ ದೇಹದ ರಕ್ತದಲ್ಲಿ ಉಳಿಯುತ್ತದೆ. ಆದರೆ ಹೃದಯವು ಕಾರ್ಯನಿರ್ವಹಿಸದ ಕಾರಣ, ಹೃದಯಕ್ಕೆ ರಕ್ತದ ಹರಿವು ನಿಲ್ಲುತ್ತದೆ ಮತ್ತು ದೇಹದ ಉಳಿದ ಭಾಗವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸಿಪಿಆರ್ ಜೀವ ರಕ್ಷಕವಾಗಿದೆ.
Related Articles
ರಾಜ್ಯದಲ್ಲಿ ಕಳೆದೊಂದು ವರ್ಷದಲ್ಲಿ 96,150 ಮಂದಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರಲ್ಲಿ ಅನೇಕರು ತುರ್ತು ಸಿಪಿಆರ್ ಸಿಗದೆ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಜನರಲ್ಲಿ ಸಿಪಿಆರ್ ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾಗಿದ್ದು, ಮುಂದಿನ ದಿನದಲ್ಲಿ ಬಸ್ ನಿಲ್ದಾಣ, ಶಾಪಿಂಗ್ ಮಾಲ್‌ಗಳಲ್ಲೂ ಸಿಪಿಆರ್ ತರಬೇತಿ ನೀಡಲು ಮುಂದಾಗಿದೆ.
Advertisement
ಸಿಪಿಆರ್‌ಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರೌಢಶಾಲೆ, ಪಿಯು ಹಾಗೂ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯದಲ್ಲಿ ಸಿಪಿಆರ್ ಸೇರ್ಪಡೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಸಿಪಿಆರ್ ಮಾಹಿತಿ ನೀಡುವುದರ ಜತೆಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಇದು ಯಾವುದೋ ಒಂದು ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆ.ಡಾ| ರಣದೀಪ್, ಆಯುಕ್ತರು, ಆರೋಗ್ಯ ಇಲಾಖೆ ತೃಪ್ತಿ ಕುಮ್ರಗೋಡು