Advertisement

Vijayapura; ಡೋಣಿ ನದಿ ಹೂಳೆತ್ತಲು ಕೇಂದ್ರಕ್ಕೆ ಪ್ರಸ್ತಾವನೆ: ಎಂ.ಬಿ.ಪಾಟೀಲ

02:42 PM Oct 17, 2023 | keerthan |

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಪದೇ ಪದೇ ಪ್ರವಾಹ ಸೃಷ್ಟಿಸುವ ಡೋಣಿ ನದಿ ಹೂಳೆತ್ತುವ ಕುರಿತು ಕೇಂದ್ರದಿಂದ ಅನುಜಂಟಿ ಪಡೆಯಲು ಸಮಗ್ರ ಯೋಜನಾ ವರದಿ ಸಿದ್ದಪಡಿಸಲಾಗಿದೆ. ಬಿಹಾರದ ಕೋಸಿ ನದಿ ಮಾದರಿಯಲ್ಲಿ ಕೇಂದ್ರದಿಂದ ನೆರವು ಪಡೆಯುವ ಕುರಿತು ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಕೈಗಾರಿಕೆ ಖಾತೆ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

Advertisement

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿ ನಿರ್ವಹಿಸುವಲ್ಲಿ ರಾಜ್ಯಕ್ಕಿಂತ ಕೇಂದ್ರ ಸರ್ಕಾರದ ಪಾತ್ರ ಮಹತ್ವದ್ದಾಗಿದೆ. ಈ ಹಿಂದೆ ಬಿಹಾರದ ಕೋಸಿ ನದಿ ಪ್ರವಾಹ ನಿಗ್ರಹಕ್ಕೆ 4000 ರೂ. ವೆಚ್ಚವನ್ನು ಕೇಂದ್ರವೇ ಭರಿಸಿದೆ. ಹೀಗಾಗಿ ಕರ್ನಾಟಕದ ಉತ್ತರ ಭಾಗದಲ್ಲಿ ಕೋಸಿ ನದಿ ಮಾದರಿಯಲ್ಲೇ ಡೋಣಿ ನದಿ ಪ್ರವಾಹ ನಿಗ್ರಹಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು.

ಡೋಣಿ ನದಿಯಲ್ಲಿರುವ ತಿರುವುಗಳನ್ನು ನೇರ ಮಾಡುವುದು, ಕಳೆಯ ಕಟ್ಟಡಗಳನ್ನು ತೆರವು ಮಾಡಿ, ಹೊಸ ಕಟ್ಟಡಗಳನ್ನು ನಿರ್ಮಿಸಿವುದು, ಜಾಲಿ ಕಂಟಿಯನ್ನು ತೆರವು ಮಾಡುವಂಥ ಕೆಲಸ ಆಗಬೇಕಿದೆ. ಈ ಎಲ್ಲ ಅಂಶಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಕೋಸಿ ನದಿ ಯೋಜನೆ ಮಾದರಿಯಲ್ಲಿ ನೆರವು ನೀಡುವಂತೆ ಕೋರುತ್ತೇವೆ. ರಾಜ್ಯ ಸರ್ಕಾರ ಶೇ.10-20 ರಷ್ಟು ವೆಚ್ವವನ್ನು ಭರಿಸಲು ಸಿದ್ಧವಿದೆ ಎಂದರು.

ಡೋಣಿ ನದಿ ಹೂಳು ಎತ್ತುವ ಕುರಿತ ಯೋಜನೆಗೆ ಈಗಾಗಲೇ 2004 ರಲ್ಲಿ ಸಿದ್ಧಪಡಿಸಿದ ಸಮಗ್ರ ಯೋಜನಾ ವರದಿಯಲ್ಲಿ 2400 ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿತ್ತು. ಇಷ್ಟೊಂದು ಹಣವನ್ನು ರಾಜ್ಯ ಸರ್ಕಾರ ಭರಿಸಲು ಸಾಧ್ಯವಿಲ್ಲ. ಸದರಿ ವರದಿಯಲ್ಲಿ ಆರ್ಥಿಕ ಉಳಿತಾಯಕ್ಕೆ ಅನಗತ್ಯ ವೆಚ್ಚ ಕಡಿತ ಮಾಡಿ, ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next