Advertisement

ಕಳೆದ ಇಪ್ಪತ್ತು ದಿನದಲ್ಲಿ ಸಂಗ್ರಹ ಪಾಲಿಕೆಯ ಆರ್ಥಿಕ ಸಂಜೀವಿನಿ “ಆಸ್ತಿ ತೆರಿಗೆ’

11:52 AM Apr 23, 2020 | mahesh |

ಬೆಂಗಳೂರು: ಪಾಲಿಕೆಗೆ ಬರುವ ಎಲ್ಲ ಆದಾಯ ಮೂಲಗಳು ತಾತ್ಕಾಲಿಕವಾಗಿ ನಿಂತಿದೆ. ಆದರೆ, ಪಾಲಿಕೆಯ ಆರ್ಥಿಕ ಸಂಜೀವಿನಿ ಎಂದೇ ಗುರುತಿಸಲ್ಪಟ್ಟಿರುವ “”ಆಸ್ತಿ ತೆರಿಗೆ”ಯಿಂದ ಕಳೆದ 20 ದಿನಗಳಲ್ಲಿ 135 ಕೋಟಿ ರೂ. ಸಂಗ್ರಹವಾಗಿದೆ! ವಿಶೇಷವೆಂದರೆ ಇದರಲ್ಲಿ 124 ಕೋಟಿ ರೂ. ಆಸ್ತಿ ತೆರಿಗೆ ಆನ್‌ಲೈನ್‌ ಮೂಲಕವೇ ಆಗಿದೆ. ಬಿಬಿಎಂಪಿಯು ಪ್ರತಿ ಆರ್ಥಿಕ ವರ್ಷದ ಪ್ರಾರಂಭ ಅಂದರೆ ಏಪ್ರಿಲ್‌ನಲ್ಲಿ ಆಸ್ತಿ ತೆರಿಗೆಯ ಮೇಲೆ ಶೇ. 5ರಷ್ಟು ಆಸ್ತಿ ತೆರಿಗೆ ವಿನಾಯಿತಿ ನೀಡುತ್ತದೆ. ಕೋವಿಡ್ ದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದ ಮಧ್ಯೆಯೂ ಸಾರ್ವಜನಿಕರು ಈ ಪ್ರಮಾಣದಲ್ಲಿ ಆಸ್ತಿ ತೆರಿಗೆ ಪಾವತಿಸುತ್ತಿರುವುದಕ್ಕೆ ವಿನಾಯಿತಿಯೂ ಕಾರಣವಾಗಿದೆ.

Advertisement

ವಿನಾಯಿತಿ ಮುಂದುವರಿಕೆ ಸಾಧ್ಯತೆ ಕಡಿಮೆ:  ಬಿಬಿಎಂಪಿಯು ಆಸ್ತಿ ತೆರಿಗೆ ಸಂಗ್ರಹದ ಮೇಲೆ ನೀಡುವ ಶೇ.5ರಷ್ಟು ವಿನಾಯಿತಿಯನ್ನು ಮೇ ತಿಂಗಳಿಗೂ ವಿಸ್ತರಿಸುವ ಸಾಧ್ಯತೆ ಕಡಿಮೆ ಇದೆ. ಈಗಾಗಲೇ ಪಾಲಿಕೆ ಆರ್ಥಿಕವಾಗಿ ನಷ್ಟದಲ್ಲಿದ್ದು, ಹೆಚ್ಚಿನ ಆದಾಯ ಮೂಲವಾಗಿರುವ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಆಸ್ತಿ ತೆರಿಗೆ ಮೇಲೆ ಶೇ.5 ರಷ್ಟು ವಿನಾಯಿತಿ ಪಾವತಿ ಮಾಡುವುದಕ್ಕೆ ಏ.30 ಕೊನೆಯ ದಿನ ಎಂದು ಎಚ್ಚರಿಕೆ ಸಂದೇಶ ಇದೆ. ಆಸ್ತಿ ತೆರಿಗೆ ಸಂಗ್ರಹದ ಮೇಲೆ ಶೇ.5ರಷ್ಟು ವಿನಾಯಿತಿ ಏ.30ಕ್ಕೆ ಕೊನೆಯಾಗುವ ಬಗ್ಗೆ ಪಾಲಿಕೆ ಎಲ್ಲಿಯೂ ಜಾಹೀರಾತು ಮೂಲಕ ಜಾಗೃತಿ ಮೂಡಿಸಿಲ್ಲ.

ಅವಕಾಶ ತಪ್ಪುವ ಸಾಧ್ಯತೆ: ಆನ್‌ಲೈನ್‌ ಬಳಕೆದಾರಿರಿಗೆ ತೆರಿಗೆ ಪಾವತಿಯಿಂದ ಶೇ.5ರಷ್ಟು ವಿನಾಯಿತಿ ಸಿಕ್ಕಿದೆಯಾದರೂ, ಬಿಬಿಎಂಪಿ ವಿನಾಯಿತಿಯನ್ನು ಮೇ ತಿಂಗಳಿಗೂ ಮುಂದುವರಿಸದೆ ಇದ್ದಲ್ಲಿ ಆನ್‌ಲೈನ್‌ ವ್ಯವಸ್ಥೆಯ ಬಗ್ಗೆ ತಿಳವಳಿಕೆ ಇಲ್ಲದವರು ಅಥವಾ ಇದನ್ನು ಇಲ್ಲಿಯವರೆಗೆ ಬಳಸದೆ ಇರುವವರು ಶೇ.5ರಷ್ಟು ತೆರಿಗೆ ವಿನಾಯಿತಿ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ. ಏ.30ಕ್ಕೆ ಈ ಅವಕಾಶ ಮುಕ್ತಾಯವಾಗಲಿದೆ. ಲಾಕ್‌ಡೌನ್‌ ಮೇ.3ಕ್ಕೆ ಮುಕ್ತಾಯವಾಗಲಿದೆ.

ಆನ್‌ಲೈನ್‌ ಮೂಲಕವೇ ಪಾವತಿಸಲು ಮನವಿ
ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ www. bbmp.gov.in ತೆರೆಯುತ್ತಿದ್ದಂತೆಯೇ ನೋಟ್‌ ಎಂಬ ಅಂಶ ಬರುತ್ತಿದ್ದು, ಕೋವಿಡ್ ಲಾಕ್‌ಡೌನ್‌ನಿಂದಾಗಿ ಬ್ಯಾಂಕ್‌ಗಳಲ್ಲಿ ನಿರ್ದಿಷ್ಟ ಸಿಬ್ಬಂದಿ ಮಾತ್ರ ಸೇವೆ ನೀಡುತ್ತಿದ್ದಾರೆ. ಹೀಗಾಗಿ, ಸಾಧ್ಯವಾದಷ್ಟು ಆನ್‌ಲೈನ್‌ನ ಮೂಲಕವೇ ವ್ಯವಹರಿಸಲು ಕೋರಲಾಗುತ್ತಿದೆ. ಆನ್‌ಲೈನ್‌ ಮೂಲಕ ತೆರಿಗೆ ಪಾವತಿ ಮಾಡುವುದು ಹೇಗೆ? ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ಗೆ www. bbmp.gov.in ಗೆ ಭೇಟಿ ನೀಡಿದರೆ ಅದರಲ್ಲಿ ನಾಗರೀಕ ಸೇವೆಗಳು ಎಂಬ ವಿಭಾಗವಿದ್ದು, ಇದರಲ್ಲಿ ಮೊದಲ ಆಯ್ಕೆ ಆಸ್ತಿ ತೆರಿಗೆ ಪಾವತಿ ಎಂದಿದೆ. ಇದನ್ನು ಕ್ಲಿಕ್ಕಿಸಿದರೆ ಆಸ್ತಿ ಪಾವತಿಸುವುದು ಹೇಗೆ, ಕಂದಾಯ ಅಧಿಕಾರಿಗಳು, ಸಹಾಯ ಕಂದಾಯ ಅಧಿಕಾರಿಗಳ ವಿವರ ಲಭ್ಯವಾಗಲಿದೆ. ಇದರೊಂದಿಗೆ ನಿಮ್ಮ ಆಸ್ತಿ ತೆರಿಗೆ ಪಾವತಿಸಲು ಇಲ್ಲಿ ಕ್ಲಿಕ್‌ ಮಾಡಿ ಎಂಬ ಆಯ್ಕೆಯೂ ಕಾಣಿಸುತ್ತದೆ. ಆಸ್ತಿ ತೆರಿಗೆ ಪಾವತಿ ಮೇಲೆ ಕ್ಲಿಕ್‌ ಮಾಡಿದರೆ, ತೆರಿಗೆ ಪಾವತಿಸುವ ಆಯ್ಕೆಯು ಮುಖಪುಟದಲ್ಲಿ ಆಸ್ತಿ ತೆರಿಗೆ ಪಾವತಿದಾರರು
ತಮ್ಮ ಖಾತೆ ಸಂಖ್ಯೆಯನ್ನು ನಮೂದಿಸಿ ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಪಾವತಿಸಬಹುದಾಗಿದೆ. ಇದಾದ ನಂತರ ಆಸ್ತಿ ತೆರಿಗೆ ಪಾವತಿಸಿದ ಖಾತ್ರಿ ಮಾಹಿತಿ ಸಿಗಲಿ¨

– ಏಪ್ರಿಲ್‌ನಲ್ಲಿ ಆಸ್ತಿ ತೆರಿಗೆಯ ಮೇಲೆ ಶೇ. 5ರಷ್ಟು ಆಸ್ತಿ ತೆರಿಗೆ ವಿನಾಯಿತಿ
– ಏ.30 ಕೊನೆಯ ದಿನ ಎಂದು ಎಚ್ಚರಿಕೆ ಸಂದೇಶ

Advertisement

ಹಿತೇಶ್‌ ವೈ.

Advertisement

Udayavani is now on Telegram. Click here to join our channel and stay updated with the latest news.

Next