ಮಾಲೂರು: ಸರ್ಕಾರದ ನಿಯಮದಂತೆ ತಾಲೂಕು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಸ್ತಿ ಮತ್ತು ವಿವಾಹ ನೋಂದಣಿ ಕಾರ್ಯವನ್ನು ಆರಂಭಿಸಿದ್ದು, ನೋಂದಣಿಗಾಗಿ ಬಂದ ಬಹುಪಾಲ ಜನರು ಬೆಂಗಳೂರಿನ ವಿವಿಧೆಡೆಗಳಿಂದ ಬಂದವರೇ ಹೆಚ್ಚು. ಕೋವಿಡ್ ಸೋಂಕು ಗಂಭೀರ ಸ್ವರೂಪದಲ್ಲಿರುವ ಕಾಲಘಟ್ಟದಲ್ಲಿಯೇ ಹಸಿರು ವಲಯವಾಗಿರುವ ತಾಲೂಕಿನಲ್ಲಿಯೂ ಉಪನೋಂದಣಾಧಿಕಾರಿಗಳ ಕಚೇರಿ ಕಾರ್ಯಾರಂಭಕ್ಕೆ ಅವಕಾಶ ಕಲ್ಪಿಸಿದ್ದು, ಕಾಗದ ಪತ್ರ, ವಿವಾಹ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಸೋಮವಾರ ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿಗೆ ಬಂದು ಬಹುಪಾಲು ಜನರು ಬೆಂಗಳೂರು ಸುತ್ತಮುತ್ತಲಿನ ಪ್ರದೇಶದವರೇ ಆಗಿದ್ದು, ಆ ಭಾಗದಲ್ಲಿ ಕೋವಿಡ್ ಸೋಂಕು ಹೆಚ್ಚಿದ್ದು, ಕೆಂಪು ವಲಯವಾಗಿ ಗುರುತಿಸಿಕೊಂಡಿರುವ ಕಾರಣ ಉಪನೋಂದಣಾಧಿಕಾರಿಗಳ ಕಚೇರಿಯ ಸಿಬ್ಬಂದಿ, ಸ್ಥಳೀಯರು ಆತಂಕದಲ್ಲಿದ್ದಾರೆ.
ಈ ಬಗ್ಗೆ ತಮ್ಮ ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಕಚೇರಿಯ ಸಿಬ್ಬಂದಿಯೊಬ್ಬರು ಮಾತನಾಡಿ, ಸಾರ್ ಇಲ್ಲಿನ ಅಧಿಕಾರಿಗಳು ಹೊರಗಿನವರನ್ನು ಕರೆಸಿಕೊಂಡು ನೋಂದಣಿ
ಮಾಡುತ್ತಿರುವ ಕಾರಣಗಳಿಂದ ಬೆಂಗಳೂರು ಸುತ್ತಮುತ್ತಲಿನಿಂದ ನೋಂದಣಿದಾರರ ಹೆಚ್ಚಾಗಿ ಬಂದಿದ್ದಾರೆ. ನಾವುಗಳು ಸಹ ಮನುಷ್ಯರೇ ನಮಗೂ ಜೀವ ಇದೆ. ಕುಟುಂಬಗಳಿವೆ, ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು. ಈ ಬಗ್ಗೆ ಸ್ಥಳೀಯ ಪತ್ರಬರಹಗಾರರು ಅಧಿಕಾರಿಗಳನ್ನು ಪ್ರಶ್ನಿಸಿದಲ್ಲಿ ಆನ್‌ಲೈನ್‌ನಲ್ಲಿ ದಾಖಲೆಗಳು ಬಂದಿರುವುದಾಗಿ ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ಡೀಸಿ ನಿರ್ದೇಶನದಂತೆ ನೋಂದಣಿ ಮಾಡಲಾಗುತ್ತಿದೆ ಎಂದು ಉಪನೋಂದಣಾಧಿಕಾರಿ ಪದ್ಮಾವತಿ ಹೇಳಿದ್ದಾರೆ.
ಮಾಲೂರು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಬೆಂಗಳೂರು ಸುತ್ತಮುತ್ತಲಿನವರ ದಾಖಲೆ ನೋಂದಾಯಿಸುತ್ತಿರುವ ಬಗ್ಗೆ ಆರಂಭದಲ್ಲಿ ತಹಶೀಲ್ದಾರ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಸ್ಥಳೀಯ ಉಪನೋಂದಣಾಧಿಕಾರಿಗಳು ಎರಡು ದಾಖಲೆ ನೋಂದಣಿಗೆ ಮುಂದಾಗಿದ್ದಾರೆ. ಅಂತಿಮವಾಗಿ ಜಿಲ್ಲೆಯ ಹಸಿರು ವಲಯದ ವಾಸಿಗಳ ಪತ್ರ ಮಾತ್ರ ನೋಂದಣಿಗೆ ಡೀಸಿ ನಿರ್ದೇಶನ ನೀಡಿದ್ದಾರೆ.
●ಗೋವಿಂದ ಸ್ವಾಮಿ, ಅಧ್ಯಕ್ಷ, ಸಮತಾ ಸೈನಿಕ ದಳ