Advertisement

ಪ್ರಾಪರ್ಟಿ ಕಾರ್ಡ್‌ ವಿನಾಯಿತಿ ಅವಧಿ ವಿಸ್ತರಣೆ

03:11 PM May 27, 2019 | keerthan |

ಮಹಾನಗರ: ಮಂಗಳೂರು ನಗರ ವ್ಯಾಪ್ತಿಯಲ್ಲಿ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯವನ್ನು ಸರಕಾರಕ್ಕೆ ಮತ್ತೆ ಜೂ. 10ರವರೆಗೆ ಮುಂದೂಡಿದೆ. ಮುಂದೂಡಿಕೆ ಆದೇಶ ಭೂಮಾಪನ, ಭೂದಾಖಲೆಗಳ ಕಚೇರಿಗೆ ಬಂದಿದ್ದು ಈ ಮೂಲಕ ಕಳೆದ 10 ದಿನಗಳಿಂದ ನೆಲೆಸಿದ್ದ ಗೊಂದಲ ನಿವಾರಣೆಯಾಗಿದೆ. ಪ್ರಾಪರ್ಟಿ ಕಡ್ಡಾಯವನ್ನು ತಾತ್ಕಾಲಿಕವಾಗಿ ಮೇ 15 ರವರೆಗೆ ಮುಂದೂಡಿ ಸರಕಾರ ಈ ಹಿಂದೆ ಆದೇಶ ಹೊರಡಿಸಿತ್ತು.

Advertisement

ಮುಂದೂಡಿಕೆ ಆವಧಿ ಮೇ 15ಕ್ಕೆ ಮುಕ್ತಾಯಗೊಂಡ ಬಳಿಕ ಮುಂದಿನ ಕ್ರಮ ಬಗ್ಗೆ ಸರಕಾರದಿಂದ ಯಾವುದೇ ಆದೇಶ ಜಿಲ್ಲಾಡಳಿತ ಅಥವಾ ಭೂಮಾಪನ, ಭೂದಾಖಲೆಗಳ ಕಚೇರಿಗೆ ಬಂದಿರದ ಹಿನ್ನೆಲೆಯಲ್ಲಿ ಜನರಲ್ಲಿ ಗೊಂದಲ ಮೂಡಿತ್ತು. ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಡ್ಡಾಯವನ್ನು ಮೇ 15ರವರೆಗೆ ಮುಂದೂಡಿ ಭೂನೋಂದಣಿ ಕಚೇರಿಗೂ ಆದೇಶ ಹೋಗಿತ್ತು.

ಆದರೆ ಬಳಿಕ ಯಾವುದೇ ಸ್ಪಷ್ಟ ಸೂಚನೆ ಬಾರದ ಹಿನ್ನೆಲೆಯಲ್ಲಿ ಗೊಂದಲ ತಲೆದೋರಿ ಆಸ್ತಿ ನೋಂದಣಿ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ಕೂಡ ಸ್ಧಗಿತಗೊಂಡಿತು. ಈಗ ಸರಕಾರದ ಹೊಸ ಆದೇಶದ ಹಿನ್ನೆಲೆಯಲ್ಲಿ ಜೂ. 10ರವರೆಗೆ ಪ್ರಾಪರ್ಟಿ ಕಾರ್ಡ್‌ ಇಲ್ಲದೆ ಈ ಹಿಂದಿನಂತೆ ಆಸ್ತಿ ನೋಂದಣಿ ಮಾಡಲು ಅವಕಾಶವಿದೆ.

ಮಂಗಳೂರಿನಲ್ಲಿ 2019ರ‌ ಫೆ.1 ರಿಂದ ಆಸ್ತಿ ನೋಂದಣಿ, ಮಾರಾಟಕ್ಕೆ ಪ್ರಾಪರ್ಟಿ ಕಾರ್ಡ್‌ ಅನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಪ್ರಾಪರ್ಟಿ ಕಾರ್ಡ್‌ ವಿತರಣೆ ವ್ಯವಸ್ಥೆಯಲ್ಲಿ ಕೆಲವು ಗೊಂದಲಗಳಿಂದಾಗಿ ರಾಜ್ಯ ಭೂಮಾಪನ, ಭೂದಾಖಲೆಗಳು ಹಾಗೂ ಸೆಟ್ಲಮೆಂಟ್ ಇಲಾಖೆ ಆಯುಕ್ತ ಮನೀಶ್‌ ಮುದ್ಗೀಲ್ ಅವರು ಕಾರ್ಡ್‌ ಕಡ್ಡಾಯವನ್ನು ಮೇ 15 ರವರೆಗೆ ಮುಂದೂಡಿ ಮಾರ್ಚ್‌ 6 ರಂದು ಆದೇಶ ಹೊರಡಿಸಿದ್ದರು.

ಹೊಸ ಸರ್ವರ್‌ಗೆ ಜೋಡಣೆ

Advertisement

ಪ್ರಾಪರ್ಟಿ ಕಾರ್ಡ್‌ ಸರ್ವರ್‌ ಅನ್ನು ಮಂಗಳೂರು ತಾಲೂಕಿನ ಆಸ್ತಿ ನೋಂದಣಿ ಕಚೇರಿಗಳ ( ಸಬ್‌ರಿಜಿಸ್ಟ್ರಾರ್‌) ಸರ್ವರ್‌ಗಳಿಗೆ ಲಿಂಕ್‌ ಮಾಡಲು ಇಲಾಖೆ ಕ್ರಮಕೈಗೊಂಡಿದೆ. ಪ್ರಾಯೋಗಿಕವಾಗಿ ಮೂಲ್ಕಿ ಉಪ ನೋಂದಣಿ ಕಚೇರಿಗೆ ಸರ್ವರ್‌ ಲಿಂಕ್‌ ಮಾಡಿ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲಾಗಿದೆ. ಇದಲ್ಲದೆ ಪ್ರಾಪರ್ಟಿ ಕಾರ್ಡ್‌ ವಿತರಣೆ ಪ್ರಕ್ರಿಯೆಗೆ ವೇಗ ನೀಡುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿ ಇಲಾಖೆಯ ಹೊಸ ಸರ್ವರ್‌ಗೆ ಜೋಡಿಸಲಾಗಿದೆ.

ಆಸ್ತಿ ನೋಂದಣಿ ಕಚೇರಿಗಳ ಸರ್ವರ್‌ಗಳಿಗೆ ಪ್ರಾಪರ್ಟಿ ಕಾರ್ಡ್‌ ಸರ್ವರ್‌ ಜೋಡಣೆಯಾದ ಬಳಿಕ ಮಾರಾಟ /ಖರೀದಿ ಜಾಗದ ಪ್ರಾಪರ್ಟಿ ಕಾರ್ಡ್‌ ನಂಬರ್‌ ಅನ್ನು ನೋಂದಣಿ ಕಚೇರಿಯ ಸರ್ವರ್‌ನಲ್ಲಿ ನಮೂದಿಸಿದರೆ ಅದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳು, ವಿವರಗಳು ಲಭ್ಯವಾಗಲಿದ್ದು, ನೋಂದಣಿ ಪ್ರಕ್ರಿಯೆಯಲ್ಲಿ ಸುಗಮವಾಗಲಿದೆ.

ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಜೂ. 10ರ ಬಳಿಕ ಮಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಜಾರಿಗೆ ಬರಲಿದೆ. ಈಗಾಗಲೇ ಆಸ್ತಿ ನೊಂೕದಣಿಗೆ ಪ್ರಾಪರ್ಟಿಕಾರ್ಡ್‌ ಜೋಡಣೆಯ ನಿಟ್ಟಿನಲ್ಲಿ ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆ ಸಿದ್ಧತೆಗಳನ್ನು ನಡೆಸಿದೆ. ಮಂಗಳೂರಿನ ಮಿನಿ ವಿಧಾನಸೌಧದ ಬಳಿ ಇರುವ ಪ್ರಾಪರ್ಟಿ ಕಾರ್ಡ್‌ ವಿತರಣೆ ಕಚೇರಿಯಲ್ಲಿ ಹೊಸ ಸರ್ವರ್‌ ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next