Advertisement

ಸಮರ್ಪಕ ತ್ಯಾಜ್ಯ ವಿಲೇವಾರಿ, ರಸ್ತೆ ದುರ ಸ್ತಿಗೆ ಗ್ರಾಮಸ್ಥರ ಆಗ್ರಹ

07:15 AM Jul 28, 2017 | Team Udayavani |

ಕಿನ್ನಿಗೋಳಿ:  ಮೆನ್ನಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ತ್ಯಾಜ್ಯದ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ, ಕೊಡೆತ್ತೂರು ಮುಕ್ಕ ರಸ್ತೆ ದುರಸ್ತಿಯಾಗಬೇಕು, ಕಿನ್ನಿಗೋಳಿಯಲ್ಲಿ ರೈತ ಸಂಪರ್ಕ ಕೇಂದ್ರ ನಿರ್ಮಿಸುವಂತೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.

Advertisement

ಗ್ರಾ. ಪಂ. ನ ಗ್ರಾಮ ಸಭೆಯು  ಜು. 26ರಂದು ಗ್ರಾಮ ಪಂಚಾಯತ್‌ ಸಭಾ ಭವನದಲ್ಲಿ  ಅಧ್ಯಕ್ಷೆ ಸರೋಜಿನಿ ಗುಜರನ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಿನ್ನಿಗೋಳಿ, ಮೆನ್ನಬೆಟ್ಟು ಪರಿಸರದಲ್ಲಿ  ರೈತರು ಹೆಚ್ಚಿದ್ದು ಕಿನ್ನಿಗೋಳಿ ಅಥವಾ ಮೆನ್ನಬೆಟ್ಟು ಪರಿಸರ ದಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯಬೇಕು, ಮೂಲ್ಕಿ ಕಾರ್ನಾಡಿನಲ್ಲಿರುವ ರೈತ ಸಂಪರ್ಕ ಕೇಂದ್ರ ಕಾಡಿನ ಮಧ್ಯಭಾಗದಲ್ಲಿ ಇದೆ. ಕಚೇರಿ ಹೆಸರಿಗೆ ಮಾತ್ರ ಇದ್ದು ಅದರ ಪ್ರಯೋಜನ ಇಲ್ಲ. ಅಲ್ಲಿÉನ ರೈತ ಸಂಪರ್ಕ ಕೇಂದ್ರಕ್ಕೆ ಹೋಗುವಂತಿಲ್ಲ. ಅಷ್ಟು ಇಳಿಜಾರು ಪ್ರದೇಶ ಜಾರಿ ಬಿದ್ದರೆ ಸೊಂಟ ಮುರಿಯಬಹುದು, ಅಲ್ಲಿನ ಅಧಿಕಾರಿಗಳಿಗೆ ಮೂರು ತಿಂಗಳಿನಿಂದ ಸಂಬಳವೂ ಬಂದಿಲ್ಲ ಎಂದು ರೈತ ಹಿತರಕ್ಷಣ ವೇದಿಕೆಯ ಅಧ್ಯಕ್ಷ ಶ್ರೀಧರ ಶೆಟ್ಟಿ, ಭುವನಾಭಿರಾಮ ಉಡುಪ ತಿಳಿಸಿದರು. ಈ ಬಗ್ಗೆ  ನಿರ್ಣಯ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ಸರೋಜಿನಿ ಹೇಳಿದರು.

ತ್ಯಾಜ್ಯ ಸಮಸ್ಯೆ
ಗ್ರಾ.ಪಂ. ವ್ಯಾಪ್ತಿಯಲ್ಲಿ ಕಿನ್ನಿಗೋಳಿ, ಕಟೀಲು, ಮೆನ್ನಬೆಟ್ಟು ಸೇರಿಸಿ ಘನ ತ್ಯಾಜ್ಯ ಘಟಕ ರಚನೆ ಯಾದರೂ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ರಸ್ತೆಯ ಬದಿಯಲ್ಲಿ ಎಸೆದ ಕಸ ನಮ್ಮ ಕಿರು ನದಿಯಲ್ಲಿ ತುಂಬಿ ಕೊಂಡಿದೆ. ಗ್ರಾ.ಪಂ. ನಿರ್ಲಕ್ಷ್ಯ ಮಾಡುತ್ತಿದೆ ಎಂದು ಶ್ರೀಧರ ಶೆಟ್ಟಿ ತಿಳಿಸಿದರು.

ಅದಕ್ಕೆ  ಉಮೇಶ್‌ ಶೆಣೈ ಧ್ವನಿಗೂಡಿಸಿ,  ಗ್ರಾಮಕ್ಕೆ ಕಿನ್ನಿಗೋಳಿ ಪ್ರದೇಶದ ಕಸ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯ ಬರುತ್ತಿದೆ. ಅದಕ್ಕೆ ಕಡಿವಾಣ ಹಾಕಿ, ಅಲ್ಲಿನ ಗ್ರಾಮಗಳಿಗೆ ಹೊಸ ಯೋಜನೆ ಆಗುತ್ತಿದೆ ಎಂದು ಹೇಳುತ್ತಾರೆಯೇ ಹೊರತು ಕಾರ್ಯಗತ ಮಾಡಿಲ್ಲ. ಆಡಳಿತ ಮಂಡಳಿಗೆ ಅದರ ಬಗ್ಗೆ ಕಾಳಜಿ ಇಲ್ಲ  ಎಂದು ಹೇಳಿದರು.

Advertisement

ಪಿಡಿಒ ರಮ್ಯಾ ಮಾತನಾಡಿ, ನಾವು ಕರ ಪತ್ರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಆದರೂ ಸಮಸ್ಯೆ ಇದೆ. ಕಿನ್ನಿಗೋಳಿ ಜನ ತೆಗೆ  ಹೊಸ ಘಟಕ ಮಾಡಲು ಜಾಗದ ಸಮಸ್ಯೆ ಇದ್ದು, ಅದು ಪರಿಹಾರ ಆದರೆ ಹೊಸ ಘಟಕ ಆಗಲಿದೆ ಎಂದರು.

ವಿದ್ಯುತ್‌ ಸಮಸ್ಯೆ ಸರಿಪಡಿಸಿ
ಗುರುವಾರ ವಿದ್ಯುತ್‌ ನಿಲುಗಡೆ ಯಾಕೆ? ರಾತ್ರಿ ಹೊತ್ತಿನಲ್ಲಿ ದೂರವಾಣಿ ಕರೆ ಮಾಡಿದರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಕೆಮ್ಮಡೆ ಅಂಗನವಾಡಿ ಕೇಂದ್ರದ ಹತ್ತಿರ ವಿದ್ಯುತ್‌ ತಂತಿಗಳ ಮೇಲೆ ಮರದ ಗೆಲ್ಲು ಬಿದ್ದರೂ ತೆರವು ಮಾಡಿಲ್ಲ ಎಂದು ಭುವನಾಭಿರಾಮ ಉಡುಪ, ಫ್ರೆಡ್ರಿಕ್‌, ಅಂಗನವಾಡಿ ಕೇಂದ್ರದ ಕಸ್ತೂರಿ ತಿಳಿಸಿದರು. 

ಮೆಸ್ಕಾಂ ಅಧಿಕಾರಿ ಚಂದ್ರಹಾಸ್‌ ಮಾತನಾಡಿ, ನಮ್ಮ ಇಲಾ ಖೆಗೆ ದೂರು ನೀಡಲು 1912 ಕರೆ ಮಾಡಿ ತಿಳಿಸಿ. ಗುರುವಾರ ನಾವು ವಿದ್ಯುತ್‌ ತೆಗೆ ಯುವುದು ಅಲ್ಲ. ಅದು ನಮ್ಮ ಮೇಲಿನ ಅಧಿಕಾರಿಗಳ ಅದೇಶ ಹಾಗೂ ತುರ್ತು ಕೆಲಸಗಳು ನಡೆಯಬೇಕಾಗಿದ್ದರೆ ವಿದ್ಯುತ್‌ ನಿಲುಗಡೆ ಅವಶ್ಯವಾಗಿರುತ್ತದೆ ಎಂದು ತಿಳಿಸಿದರು.
ಉಲ್ಲಂಜೆಯಲ್ಲಿ ರಸ್ತೆ, ಚರಂಡಿ ನಿರ್ಮಿಸ ಬೇಕಿದೆ. ಈ ಬಗ್ಗೆ ವಾರ್ಡ್‌ ಸಭೆಯಲ್ಲಿ ಹೇಳಿದರೂ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆಗೆ ಸ್ಪಂದಿಸಿ ಎಂದು ಪುಷ್ಪಾ, ಜಯಶ್ರೀ ಒತ್ತಾಯಿಸಿದರು. ರಸ್ತೆ ನಿರ್ಮಾಣಕ್ಕೆ ಅನುದಾನದ ಕೊರತೆ ಇದೆ. ಅನುದಾನ ಬಂದ ಕೂಡಲೇ ಕಾಮಗಾರಿ ನಡೆಸಲಾಗುವುದು ಎಂದು ಅಧ್ಯಕ್ಷೆ  ಸರೋಜಿನಿ ಹಾಗೂ ಸದಸ್ಯೆ ಲಕ್ಷ್ಮೀ ತಿಳಿಸಿದರು. ರಸ್ತೆಗೆ ಬೀಳಲು ಸಿದ್ಧವಾಗಿರುವ  ಮರಗಳನ್ನು ತೆರವುಗೊಳಿಸಿ, ಉಲ್ಲಂಜೆ ಚರಂಡಿ ಸಮಸ್ಯೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗೈರು ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಯಿತು. 
ತೋಟಗಾರಿಕೆ ಇಲಾಖೆಯ ಸುಕುಮಾರ ಹೆಗ್ಡೆ  ನೋಡಲ್‌ ಅಧಿಕಾರಿಯಾಗಿದ್ದರು. ತಾ.ಪಂ. ಸದಸ್ಯೆ ಶುಭಲತಾ ಶೆಟ್ಟಿ, ಉಪಾಧ್ಯಕ್ಷ ಮೋರ್ಗನ್‌ ವಿಲಿಯಂ, ಗ್ರಾ.ಪಂ. ಸದಸ್ಯರಾದ ದಾಮೋದರ ಶೆಟ್ಟಿ, ಸುನಿಲ ಸಿಕ್ವೇರ, ಸುಶೀಲಾ, ಬೇಬಿ, ಮಲ್ಲಿಕಾ, ಮೀನಾಕ್ಷಿ, ಶಾಲಿನಿ, ಪೊಲೀಸ್‌ ಇಲಾಖೆಯ ಉಮೇಶ್‌, ಕೈಗಾರಿಕೆ ಇಲಾಖೆಯ ಮಂಜುನಾಥ, ಆರೋಗ್ಯ ಇಲಾಖೆಯ ಡಾ| ಭಾಸ್ಕರ ಕೋಟ್ಯಾನ್‌, ಜಿ.ಪಂ. ಎಂಜಿನಿಯರ್‌ ಹರೀಶ್‌, ಕಂದಾಯ ಇಲಾಖೆಯ ಕಿರಣ್‌,  ಕೃಷಿ ಇಲಾಖೆಯ ಗಂಗಾದೇವಿ, ಶಿಶು ಅಭಿವೃದ್ಧಿ ಇಲಾಖೆಯ ಶೀಲಾವತಿ, ಅರಣ್ಯ ಇಲಾಖೆಯ ಶಂಕರ್‌ ಕೆ.ಉಪ ಸ್ಥಿ ತ ರಿ ದ್ದರು. ಪಿಡಿಒ ರಮ್ಯಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next