Advertisement

ಭಡ್ತಿ ವೇತನ ತಾರತಮ್ಯ; ಸದ್ಯದಲ್ಲೇ ಸಭೆ: ಸಚಿವ ಎಸ್‌. ಮಧು ಬಂಗಾರಪ್ಪ

12:12 AM Jul 18, 2023 | Team Udayavani |

ಬೆಂಗಳೂರು: ಸರಕಾರಿ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರಾಗಿ ಹಾಗೂ ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಿ ಭಡ್ತಿ ಪಡೆದವರ ವೇತನ ತಾರತಮ್ಯ ನಿವಾರಣೆಗೆ ಸರಕಾರದ ಮಟ್ಟದಲ್ಲಿ ಶಿಕ್ಷಣ ಇಲಾಖೆ ಹಾಗೂ ಆರ್ಥಿಕ ಇಲಾಖೆ ಸಭೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಮಧು ಬಂಗಾರಪ್ಪ ಹೇಳಿದ್ದಾರೆ.

Advertisement

ಬಿಜೆಪಿಯ ವೈ.ಎ. ನಾರಾಯಣ ಸ್ವಾಮಿ ಪ್ರಸ್ತಾವಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಭಡ್ತಿ ಹೊಂದಿದ ಶಿಕ್ಷಕರು ಮತ್ತು ಉಪನ್ಯಾಸಕರ ವೇತನ ತಾರತಮ್ಯದ ಬಗ್ಗೆ ಸದಸ್ಯರು ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಅನೇಕ ವಿಷಯಗಳನ್ನು ಸರಕಾರದ ಗಮನಕ್ಕೆ ತಂದಿದ್ದಾರೆ. ತಾರತಮ್ಯ ಆಗಿದ್ದು ನಿಜ, ಅನೇಕ ವರ್ಷಗಳಿಂದ ಸಮಸ್ಯೆಗೆ ಪರಿಹಾರವೂ ಕಂಡುಕೊಳ್ಳಲು ಆಗಿಲ್ಲ ಅನ್ನುವುದು ಸತ್ಯ. ಆದರೆ ನಮ್ಮ ಸರಕಾರಕ್ಕೆ ಈ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿ ಎರಡೂ ಇದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಸರಕಾರದ ಮಟ್ಟದಲ್ಲಿ ಆರ್ಥಿಕ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸೇರಿಸಿ ಸಭೆ ನಡೆಸಲಾಗುವುದು. ಆ ಸಭೆಗೆ ವಿಧಾನಪರಿಷತ್ತಿನ ಸಂಬಂಧಪಟ್ಟ ಸದಸ್ಯರನ್ನು ಆಹ್ವಾನಿಸಲಾಗುವುದು ಎಂದು ಭರವಸೆ ನೀಡಿದರು.

ಮರಿತಿಬ್ಬೇಗೌಡ, ಶಶೀಲ್‌ ನಮೋಶಿ, ಎಸ್‌.ವಿ. ಸಂಕನೂರು ಮತ್ತಿತರರು ಈ ವಿಷಯದ ಬಗ್ಗೆ ಸರಕಾರದ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next