Advertisement
ಕೊರೊನಾ ಪರಿಣಾಮದಿಂದಾಗಿ ದೇಶ ದಲ್ಲಿ 2008ರ ರೀತಿಯ ಅರ್ಥಿಕ ಹಿಂಜರಿತ ಕಾಣು ತ್ತಿದೆ. ಉತ್ಪಾದನಾ ವಲಯ ಸ್ಥಗಿತ ಗೊಂಡಿದೆ. ಹೊಸ ಉರ್ಪಾದನೆಗಳು ಮಾರುಕಟ್ಟೆಗೆ ಬರುತ್ತಿಲ್ಲ. ಗೋದಾಮಿನಲ್ಲಿ ಸ್ಟಾಕ್ ಕರಗುತ್ತಿಲ್ಲ. ಬ್ಯಾಂಕುಗಳಲ್ಲಿ ಸಾಲ ಬೇಡಿಕೆ ಕ್ಷೀಣಿಸಿದೆ. ಒಂದು ಕಾಲಕ್ಕೆ ಬ್ಯಾಂಕುಗಳು ಸಾಲ ನೀಡುತ್ತಿಲ್ಲ. ಕೇಳಿದಷ್ಟು ಕೊಡುತ್ತಿಲ್ಲ ಬ್ಯಾಂಕಿನವರು ಕಿರಿಕ್ ಮಾಡುತ್ತಾರೆ ಎನ್ನುವ ದೂರುಗಳು ತೀರಾ ಸಾಮಾನ್ಯವಾಗಿ ಕೇಳು ತ್ತಿದ್ದು, ಈಗ ಪರಿಸ್ಥಿತಿ ಯೂಟರ್ನ್ ಹೊಡೆದಿದೆ. ಹೆಚ್ಚು ಸಾಲ ನೀಡಲು ರೆಪೋ ದರ ಕಡಿಮೆ ಮಾಡಿ, ಹೆಚ್ಚು ರೆಪೋ ನೀಡಿ ಮತ್ತು ಕ್ಯಾಪಿಟಲ್ ನೀಡಿ ಎನ್ನುತ್ತಿದ್ದ ಬ್ಯಾಂಕುಗಳು ತಮ್ಮಲ್ಲಿರುವ ಠೇವಣಿಯನ್ನು ಬಳಸಲಾರದೇ,
Related Articles
Advertisement
ಇದು ಬ್ಯಾಂಕುಗಳ ಸಾಲ ಪೋಟ್ ಫೋಲಿಯೋವನ್ನು ಹೆಚ್ಚಿಸುವು ದರಲ್ಲಿ ಸಂಶಯವಿಲ್ಲ. ರೈತರು, ಬೀದಿ ಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು ಈ ಪ್ಯಾಕೇಜ್‌ನಲ್ಲಿ 3.16 ಲಕ್ಷ ಕೋಟಿ ಸಾಲವನ್ನು ರಿಯಾಯ್ತಿ ದರದಲ್ಲಿ ಪಡೆಯತ್ತಿದ್ದು, ರೈತರಿಗೆ 2.50 ಲಕ್ಷಕೋಟಿ ನಿಗದಿಪಡಿಸಲಾಗಿ ದೆ.ಇವು ಬ್ಯಾಂಕುಗಳ ಮೂಲಕವೇ ಆಗುತ್ತಿದ್ದು, ಬ್ಯಾಂಕುಗಳಿಗೆ ವಿಶೇಷ ಶ್ರಮವಿಲ್ಲದೆ ಸಾಲ ವಿತರಣೆ ಯಾಗುತ್ತ ದೆ.. ವಲಸೆ ಕಾರ್ಮಿಕರು ಮತ್ತು ನಗರದ ಬಡವರಿಗಾಗಿ ಕೈಗೆಟುಕುವ ದರದಲ್ಲಿ ಬಾಡಿಗೆ ಮನೆ ನಿರ್ಮಿಸಲು ಹೌಸಿಂಗ್ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತಿದ್ದು, ಈ ಪ್ರೊಜೆಕ್ಟ್‌ನಲ್ಲಿ ಕೆಲವು ಭಾಗವಾದರೂ ಬ್ಯಾಂಕ್ ಸಾಲ ಇರಲೇಬೇಕಾಗುತ್ತದೆ.
ಸುಸ್ತಿಯಾಗುವುದನ್ನು ಅಲ್ಲಗಳೆಯಲಾಗದು: ಯಾವುದೇ ಲಾಭವಾದರೂ, ಅಲ್ಪ ಸ್ವಲ್ಪ ತೊಂದರೆ ಇಲ್ಲದೇ ಬರುವುದಿಲ್ಲ. ಇದು ಸೃಷ್ಟಿ ನಿಯಮ. ಮೈ ಚಳಿ ಬಿಟ್ಟು ಸಾಲನೀಡಿದಾಗ ಅದೇ ಪ್ರಮಾಣದಲ್ಲಿ ಸುಸ್ತಿಯಾಗುವುದನ್ನು ಅಲ್ಲಗಳೆಯ ಲಾಗದು. ಕೆಲವು ಬ್ಯಾಂಕರುಗಳು ಮುದ್ರಾಸಾಲ ವನ್ನು ನೆನೆಪಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಎಷ್ಟೇ ಗ್ಯಾರಂಟಿ ನೀಡಿದರೂ ಮುಂಜಾಗರೂಕತೆ ಅವಶ್ಯ ಎಂದು ಅವರು ಎಚ್ಚರಿಸುತ್ತಾರೆ. ಇನ್ನೂ ಸ್ಥಾಪನೆಯ ಹಂತದಲ್ಲಿರುವ, ಅನುತ್ಪಾದಕ ಮತ್ತು ಸುಸ್ತಿ ಸಾಲಗಳಿಗಾಗಿ ಇರುವ ಬ್ಯಾಡ್ ಬ್ಯಾಂಕ್‌ಗೆ ಇವುಗಳು ಆಹಾರವಾಗದಂತೆ ಗಮನ ಇರಲಿ ಎನ್ನುವ ಸೂಚನೆ ತಜ್ಞರಿಂದ ಕೇಳುತ್ತಿದೆ.
ಲಾಕ್‌ಡೌನ್ ಆದಾಗಿನಿಂದ ಬ್ಯಾಂಕುಗಳು ಅರ್ಧ ಬಾಗಿಲು ತೆರೆದು ಸೇವೆ ನೀಡುತ್ತಿದ್ದು ಪ್ರಧಾನಿಗಳ ಈ ಪ್ಯಾಕೇಜ್‌ನಿಂದ ಪೂರ್ಣ ಪ್ರಮಾಣದ ಸೇವೆ ನೀಡುವ ಅನಿವಾರ್ಯತೆ ಬಂದಿದೆ. ಈವರೆಗೆ ಒಂದು ರೀತಿಯಲ್ಲಿ ಬಿಕೋ ಎನ್ನುತ್ತಿದ್ದ ಬ್ಯಾಂಕುಗಳು ಜೀವ ತುಂಬಿ ಎಂದಿನಂತೆ ಚಟುವಟಿಕೆಗಳಿಂದ ಮೆರುಗು ಪಡೆಯಬಹುದು. ಬ್ಯಾಂಕುಗಳು ಕೇವಲ ಸಂಬಳ ಪಡೆಯುವವರ, ವಿದ್ಯಾರ್ಥಿಗಳು, ಸಣ್ಣ ಬಿಜಿನೆಸ್ ಅಸ್ತಿತ್ವ ಇರುವುದು ಅವು ಸಂಗ್ರಹಿಸುವ ಠೇವಣಿಗಿಂತ ಹೆಚ್ಚಾಗಿ ಅವು ನೀಡುವ ಸಾಲ ಮತ್ತು ಅದರ ವಸೂಲಾತಿ ಮೇಲೆ ಇರುತ್ತದೆ. ಈ ಪ್ಯಾಕೇಜ್ ಈ ಕೊರತೆಯನ್ನು ತುಂಬುತ್ತಿದೆ. ಹತ್ತು ಲಕ್ಷ ಸಿಬ್ಬಂದಿಗಳು, 1.46 ಲಕ್ಷ ಶಾಖೆಗಳು,135.71 ಲಕ್ಷ ಕೋಟಿ ಠೇವಣಿ ಮತ್ತು 103.70 ಲಕ್ಷ ಕೋಟಿ ಸಾಲ ನೀಡಿದ ದೇಶದ ಎರಡನೇ ಅತಿ ದೊಡ್ಡ ಉದ್ಯಮ ಮರು ಜೀವನ ಪಡೆಯುತ್ತಿದೆ ಮತ್ತು ಬ್ಯಾಲೆನ್ಸ್ ಶೀಟ್ ಕೆಂಪಾಗುವುದನ್ನು ತಪ್ಪಿಸಿಕೊಳ್ಳಬಹುದು.
ವ್ಯವಹಾರ ವೃದ್ಧಿಸಲು ಸಹಾಯಕ: ಸರ್ಕಾರವು ಜನಹಿತದ ದೃಷ್ಟಿಯಲ್ಲಿ ಯಾವುದಾದರೂ ಅರ್ಥಿಕ ಪ್ಯಾಕೆಜ್‌ನ್ನು ಘೋಷಿಸಿದರೆ, ಸಾಮಾನ್ಯವಾಗಿ ಬ್ಯಾಂಕುಗಳನ್ನು ಅರ್ಥಿಕ ಪ್ರಗತಿಯು ಮದ್ಯಸ್ಥ ಎಂದು ಕರೆಯುತ್ತಾರೆ. ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದರೂ, ಫಲಾನುಭವಿಗಳಿಗೆ ಸಿಗುವುದು ಬ್ಯಾಂಕುಗಳ ಮೂಲಕವೇ. ಈ ನಿಟ್ಟಿನಲ್ಲಿ ಅಲ್ಪಸ್ವಲ್ಪ ಅಡಚಣೆ ಮತ್ತು ಅನನುಕೂಲ ಇದ್ದರೂ, ಬ್ಯಾಂಕುಗಳಿಗೆ ತಮ್ಮದೇ ಲಾಭ ಇರುತ್ತದೆ ಬ್ಯಾಂಕುಗಳಲ್ಲಿ ಎಲ್ಲಾ ರೀತಿಯ ಗ್ರಾಹಕರು ಮತ್ತು ವ್ಯವಹಾರಗಳು ಇದ್ದರೂ, ಉದ್ಯಮ ಮತ್ತು ಕಮರ್ಷಿಯಲ್ ವ್ಯವಹಾರಗಳೇ ಬ್ಯಾಂಕುಗಳ ಬೆನ್ನೆಲುಬುಗಳು. ಸುಮಾರು ಶೇ.65 ರಷ್ಟು ವ್ಯವಹಾರ ಇವರಿಂದಲೇ ಆಗುತ್ತದೆ. ಈ ಪ್ಯಾಕೇಜ್ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಪುನಶ್ಚೇತನ ನೀಡಿದ್ದು, ಇದು ಬ್ಯಾಂಕುಗಳ ವ್ಯವಹಾರ ವೃದ್ಧಿಸಲು ಸಹಾಯಕವಾಗಿದೆ.
ಬ್ಯಾಂಕ್‌ಗಳಿಗೆ “ಅನುತ್ಪಾದಕ’ ಹೊರೆ ತಗ್ಗಿಸಲು ಕ್ರಮ: ಸಾಲ ಮರುಪಾವತಿ ದೃಷ್ಟಿಯಲ್ಲಿ ಈ ಪ್ಯಾಕೇಜ್‌ನಲ್ಲಿ ವಿಶೇಷ ವಾಗಿ ಉಲ್ಲೇಖಿಸದಿದ್ದರೂ, ಪ್ರತ್ಯೇಕವಾಗಿ ಮರುಪಾವತಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದ್ದು, ಅನುತ್ಪಾದಕ ಸಾಲಗಳ ವರ್ಗಾವಣೆಯಲ್ಲಿ ಕೆಲವು ವಿನಾಯಿತಿಗಳನ್ನು ನೀಡಿದೆ. ಮತ್ತು ಅದು ಇನ್ನೂ ಮೂರು ತಿಂಗಳು ವಿಸ್ತಾರವಾಗುವ ಹಂತದಲ್ಲಿದೆ. ಹಾಗೆಯೇ ದಿವಾಳಿ ಕಾನೂನಿಗೆ ಒಪ್ಪಿಸುವ ಸಾಲದ ಪ್ರಕರಣಗಳಿಗೆ ಇನ್ನೂ ಆರು ತಿಂಗಳು ಸಮಯವನ್ನು ನೀಡಿದ್ದು ಬ್ಯಾಂಕುಗಳು ನಿಟ್ಟುಸಿರುಬಿಡುವಂತಾಗಿದೆ. ಈ ಪ್ರಕ್ರಿಯೆಗೆ ಕೈ ಹಾಕಲು ಬ್ಯಾಂಕುಗಳು ಇನ್ನೂ ಆರು ತಿಂಗಳು ಕಾಯಬಹುದು.
* ರಮಾನಂದ ಶರ್ಮಾ