Advertisement

ಮಹಿಳಾ ಸಹಕಾರ ಸಂಘಕ್ಕೆ ಉತ್ತೇಜನ ಕ್ರಮ

05:31 PM Nov 19, 2019 | Suhan S |

ತುಮಕೂರು: ಮಹಿಳೆಯರು ಅಭಿವೃದ್ಧಿಯಾದರೆ ಕುಟುಂಬ ಸದೃಢವಾಗುತ್ತದೆ ಎಂಬ ದೃಷ್ಟಿಯಿಂದ ಜಿಲ್ಲಾದ್ಯಂತ ಇರುವ ಹಾಲು ಒಕ್ಕೂಟದ ಮಹಿಳಾ ಸಹಕಾರ ಸಂಘಗಳಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ತಿಳಿಸಿದರು. ತುರುವೇಕೆರೆ ತಾಲೂಕು ದ್ವಾರನಹಳ್ಳಿಯಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಮಹಿಳೆಯರಿಗಾಗಿ ಆಯೋಜಿಸಿದ್ದ ಸೌಲಭ್ಯಗಳ ಅರಿವು, ಕಾನೂನು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಪ್ರತಿ ಲೀಟರ್‌ಗೆ ಒಕ್ಕೂಟದಿಂದ 26 ರೂ. ಪಾವತಿಸುತ್ತಿದ್ದು, ಸರ್ಕಾರದ ಪ್ರೋತ್ಸಾಹ ಧನ 5 ರೂ. ಸೇರಿ 31 ರೂ. ಉತ್ಪಾದಕ ಪಡೆಯುತ್ತಿದ್ದಾನೆ. ರಾಸುಗಳಿಗೆ ವಿಮೆ ಯೋಜನೆ ಜಾರಿಗೆ ತಂದಿದ್ದು, ರೈತರು ಕೇವಲ 224 ರೂ. ಪಾವತಿಸಿದರೆ ಸಾಕು, ಉಳಿದ ಹಣ ಒಕ್ಕೂಟವೇ ಭರಿಸಲಿದೆ. ಹಾಲು ಉತ್ಪಾದಕರಿಗೂ ವಿಮೆ ಯೋಜನೆ ಜಾರಿಗೆ ತಂದಿದ್ದು, ಒಂದು ಲಕ್ಷ ರೂ.ವರೆಗೆ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಿದೆ. ಪ್ರತಿದಿನ ಜಿಲ್ಲೆಯಲ್ಲಿ ಏಳೂವರೆ ಲಕ್ಷ ಲೀಟರ್‌ ಹಾಲು ಉತ್ಪಾದನೆ ಯಾಗುತ್ತಿದ್ದು, ಸತತ ಬರಗಾಲ ಹಿನ್ನೆಲೆ ಯಲ್ಲಿ ಈ ವರ್ಷ ಎರಡು ಬಾರಿ ಉತ್ಪಾದಕರಿಗೆ ದರ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಸ್ಟೆಪ್‌ ಯೋಜನೆ ಉಪ ವ್ಯವಸ್ಥಾಪಕ ಮಂಜುನಾಥ ನಾಯಕ್‌, ವಿಸ್ತರಣಾಧಿಕಾರಿ ವೈ.ಎಸ್‌. ಮಧು, ತುಮಕೂರು ಸಾಂತ್ವನ ಕೇಂದ್ರದ ಸಲಹೆಗಾರ ಸಾ.ಚಿ ರಾಜಕುಮಾರ್‌ ಮಾತನಾಡಿದರು. ಒಕ್ಕೂಟದ ವಿಸ್ತರಣಾಧಿಕಾರಿ ಗಳಾದ ನೇತ್ರ, ಮಂಜುನಾಥ್‌,ದ್ವಾರನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಪೂರ್ಣಿಮಾ ದೇವರಾಜ್‌, ನಿಗಮ ನಿರ್ವಹಣಾಧಿಕಾರಿ ಶಿವಪ್ಪ ಮತ್ತಿತರರಿದ್ದರು. ಮಹಿಳಾ ಸ್ವಸಹಾಯ ಗುಂಪುಗಳಿಗೆ ಸುತ್ತು ನಿಧಿ ಹಾಗೂ ರಾಸುಗಳ ಖರೀದಿಗೆ ಚೆಕ್‌ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next